RCB lost to KKR| ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಕೊಹ್ಲಿ ಪಡೆ; ಹೀನಾಯ ಸೋಲಿಗೆ ಏನಂದ್ರು ಆರ್​ಸಿಬಿ ಪ್ರೇಮಿಗಳು?

ಮೊದಲ ಪಂದ್ಯ ದೇವರಿಗೆ, ಸೋತರು ಪಾಯಿಂಟ್ ಪಟ್ಟಿಯಲ್ಲಿ ಹತ್ತು ಅಂಕ ಗಳಿಸಿದೆ ಎನ್ನುವ ಮಾತುಗಳು ಆರ್‌ಸಿಬಿ ಅಭಿಮಾನಿಗಳಿಂದ ಕೇಳಿದರೆ, ಬೆಂಗಳೂರು ತಂಡದ ಹೀನಾಯ ಪ್ರದರ್ಶನ, ವಿರಾಟ್ ಕ್ಯಾಪ್ಟನ್ ಇಂದ ಇಳಿದಿದ್ದು ಒಳ್ಳೆಯದಾಯಿತು ಅಂತ ಮತ್ತಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.

ಇಯಾನ್ ಮಾರ್ಗನ್-ವಿರಾಟ್ ಕೊಹ್ಲಿ.

ಇಯಾನ್ ಮಾರ್ಗನ್-ವಿರಾಟ್ ಕೊಹ್ಲಿ.

 • Share this:
  ಕಳೆದ ಏಪ್ರಿಲ್​ನಲ್ಲಿ ಭಾರತದಲ್ಲಿ ಆರಂಭವಾಗಿದ್ದ 14ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ (IPL 2021) ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Banglore) ಅತ್ಯುತ್ತಮ ಪ್ರದರ್ಶನ ನೀಡಿತ್ತು. 7 ಪಂದ್ಯಗಳಲ್ಲಿ 5 ಗೆಲುವುಗಳ ಸಹಿತ 10 ಪಾಯಿಂಟ್​ಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿತ್ತು. ಇಡೀ ತಂಡ ಸಾಂಘಿಕವಾಗಿ ಸಂಘಟಿತ ಪ್ರದರ್ಶನ ನೀಡಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಕೊರೋನಾ (CoronaVirus) ಕಾರಣಕ್ಕೆ ಯುಎಇ ಗೆ ಟೂರ್ನಿ ಸ್ಥಳಾಂತರಿಸಲ್ಪಟ್ಟಿದ್ದು  ದ್ವಿತಿಯಾರ್ಧದಲ್ಲಿ ನಿನ್ನೆ ಆರಂಭವಾಗಿರುವ ಮೊದಲ ಪಂದ್ಯದಲ್ಲೇ ಆರ್​ಸಿಬಿ (RCB) ಹೀನಾಯ ಸೋಲನುಭ ವಿಸಿದೆ. ಕೋಲ್ಕತ್ತಾ ನೈಟ್​ ರೈಡರ್ಸ್​ (KKR) ವಿರುದ್ಧ ಕೇವಲ 92 ರನ್​ಗಳಿಗೆ ಆಲೌಟ್ ಆಗುವ ಮೂಲಕ 9 ವಿಕೆಟ್​ಗಳಿಂದ ಪರಾಜಯಗೊಂಡಿದೆ. ಈ ಮೂಲಕ ಮತ್ತೆ ಆರ್​ಸಿಬಿ ಅಭಿಮಾನಿಗಳು ಬೇಸಗೊಂಡಿದ್ದಾರೆ.

  ಇಡೀ ಟೂರ್ನಿಯಲ್ಲಿ ಆರ್​ಸಿಬಿ ಬಲಿಷ್ಠ ಬ್ಯಾಟಿಂಗ್ ಲೈನಪ್ ಅನ್ನು ಹೊಂದಿದೆ. ಆದರೂ, ಸಹ ಯಾರೊಬ್ಬರೂ ಮೊದಲ ಪಂದ್ಯದಲ್ಲಿ ಉತ್ತಮ ಆಟವಾಡಿಲ್ಲ. ಸ್ವತಃ ನಾಯಕ ವಿರಾಟ್​ ಕೊಹ್ಲಿ ಕೇವಲ 5 ರನ್​ಗಳಿಗೆ ಆಟ ಕಳೆದುಕೊಂಡಿದ್ದರೆ, ಮಿ.360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್​ ಮೊದಲ ಎಸೆತದಲ್ಲೇ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇನ್ನೂ ಉಳಿದ ಬ್ಯಾಟ್ಸ್​ಮನ್​ಗಳು ಸಾಧ್ಯವಾದಷ್ಟು ಬೇಗ ಪೆವಿಲಿಯನ್ ಪೆರೇಡ್ ನಡೆಸಲು ಮುಂದಾಗಿದ್ದರು. ದೇವದತ್ ಪಡಿಕ್ಕಲ್ ಉತ್ತಮ ಆಟವಾಡುವ ಭರವಸೆ ನೀಡಿದ್ದರೂ ಸಹ ಅವರ ಆಟ 22 ರನ್​ಗಳಿಗೆ ಕೊನೆಗೊಂಡಿತ್ತು.

  ಪರಿಣಾಮ ಇಡೀ ತಂಡ ಕೇವಲ 92 ರನ್​ಗಳಿಗೆ ಆಲೌಟ್ ಆಗಿತ್ತು. ಗುರಿ ಬೆನ್ನಟ್ಟಿದ್ದ ಕೋಲ್ಕತ್ತಾ ನೈಟ್ ರೈಡರ್ಸ್​ ಕೇವಲ 10 ಓವರ್​ಗಳಿಗೆ 1 ವಿಕೆಟ್​ ಕಳೆದುಕೊಂಡು 93 ರನ್​ ಗಳಿಸುವ ಮೂಲಕ ಸುಲಭಕ್ಕೆ ಗೆಲುವು ಸಾಧಿಸಿದ್ದರು. ಆದರೆ, ಆರ್​ಸಿಬಿ ಸೋಲಿನಿಂದ ಅಭಿಮಾನಿಗಳಿಗೆ ಮಾತ್ರ ತೀವ್ರ ನೋವಾಗಿದೆ. ಹೀಗಾಗಿ ಅಭಿಮಾನಿಗಳು ಈ ಆವೃತ್ತಿಯ ಮೊದಲ ಸೋಲಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

  ಮೊದಲ ಪಂದ್ಯ ದೇವರಿಗೆ, ಸೋತರು ಪಾಯಿಂಟ್ ಪಟ್ಟಿಯಲ್ಲಿ ಹತ್ತು ಅಂಕ ಗಳಿಸಿದೆ ಎನ್ನುವ ಮಾತುಗಳು ಆರ್‌ಸಿಬಿ ಅಭಿಮಾನಿಗಳಿಂದ ಕೇಳಿದರೆ, ಬೆಂಗಳೂರು ತಂಡದ ಹೀನಾಯ ಪ್ರದರ್ಶನ, ವಿರಾಟ್ ಕ್ಯಾಪ್ಟನ್ ಇಂದ ಇಳಿದಿದ್ದು ಒಳ್ಳೆಯದಾಯಿತು ಅಂತ ಮತ್ತಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.

  'ಈ ಆಟವು ಸೋತಿರಬಹುದು, ಆದರೆ ಕೊನೆಯಲ್ಲಿ ನಾವು #IPL2021 ಅನ್ನು ಗೆಲ್ತಿವಿ' ಎಂದು ಮೇಘಶ್ರೀ ಎನ್ನುವವರು ಕೂ ಮಾಡಿದ್ದಾರೆ.  'ಇತಿಹಾಸವನ್ನು ರಚಿಸಲಾಗಿದೆ: ಐಪಿಎಲ್ ಇತಿಹಾಸದಲ್ಲಿ 3 ವಿಭಿನ್ನ ಜೆರ್ಸಿಗಳಲ್ಲಿ ಸೋತ ಮೊದಲ ತಂಡ ಆರ್ಸಿಬಿ' ಎಂದು ನಿಶ್ಚಿತ್ ಎನ್ನುವವರು ಕೂ ಮಾಡಿದ್ದಾರೆ.  'ನೆನ್ನೆ #ABD ಔಟ್ ಆದಾಗ ಹಾರ್ಟ್ ಬೀಟ್ ನಿಂತಂಗ್ ಆಗಿತ್ತು! ' ಎಂದು ಸುದರ್ಶನ್ ಕೂ ಮಾಡಿದ್ದಾರೆ.  'ಇದು ನಿಮ್ಮನ್ನು ವ್ಯಾಖ್ಯಾನಿಸುವ ವಿಜಯಗಳು ಮಾತ್ರವಲ್ಲ ... ಆಗಾಗ್ಗೆ ನೀವು ಕಳೆದುಕೊಳ್ಳುವ ಮಾರ್ಗವಾಗಿದೆ. ನಿಮ್ಮ ಬಿಡುವಿನ ದಿನಗಳು ಎಷ್ಟು ಕೆಟ್ಟದು !!! #RCB NRR ಘನ ಸೋಲನ್ನು ತೆಗೆದುಕೊಳ್ಳುವಷ್ಟು ಕೆಟ್ಟದಾಗಿ ಕಳೆದುಕೊಳ್ಳದಿರುವ ಮಾರ್ಗವನ್ನು ಕಂಡುಕೊಳ್ಳಬೇಕು. ಶ್ರೇಷ್ಠ ತಂಡಗಳು ಸೋಲಿನಲ್ಲೂ ಸಾಧ್ಯವಾದಷ್ಟು ಕಡಿಮೆ ಕಳೆದುಕೊಳ್ಳಲು ನಿರ್ವಹಿಸುತ್ತವೆ' ಎಂದು ಕ್ರಿಕೆಟರ್ ಆಕಾಶ್ ಚೋಪ್ರಾ ಕೂ ಮಾಡಿದ್ದಾರೆ.  '11 ಜನ ಆಟಗಾರರಿಗೂ ಬ್ಯಾಟಿಂಗ್ ನೀಡಿ ಮಾನವೀಯತೆ ಮೆರೆದ RCB' ಎಂದು ಬೇಸರದಲ್ಲಿ ಅಭಿಮಾನಿಯೊಬ್ಬರು ಕೂ ಮಾಡಿದ್ದಾರೆ.

  /embed.kooapp.com/iframe.js">

  ಒಟ್ಟಾರೆ ಆರ್​ಸಿಬಿ ದ್ವಿತಿಯಾರ್ಧದ ಮೊದಲ ಪಂದ್ಯದಲ್ಲೇ ಸೋಲನುಭವಿಸಿದೆ. ಆದರೂ, ತಂಡದ ಆತ್ಮವಿಶ್ವಾಸ ಮಾತ್ರ ಕುಗ್ಗಿಲ್ಲ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಕೊಹ್ಲಿ ಪಡೆ ಉತ್ತಮ ಪ್ರದರ್ಶನ ನೀಡಲಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​ ಮತ್ತೆ ಫಾರ್ಮ್​ಗೆ ಮರಳಲಿದ್ದಾರೆ, ಆರ್​ಸಿಬಿ ಗೆಲುವಿನ ನಾಗಾಲೋಟ ಮುಂದುವರೆಸಲಿದೆ  ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ.
  Published by:MAshok Kumar
  First published: