RCB Vs RR: ಕೊಹ್ಲಿ-ಪಡಿಕ್ಕಲ್ ಅಬ್ಬರಕ್ಕೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್

ಹರ್ಷಲ್ ಪಟೇಲ್ ಎಸೆತದ 20ನೇ ಓವರ್​ನ ಮೊದಲ ಎಸೆತದಲ್ಲಿ ಕ್ರಿಸ್ ಮೋರಿಸ್ (10) ವಿಕೆಟ್ ಒಪ್ಪಿಸಿದರೆ, 2ನೇ ಎಸೆತದಲ್ಲಿ ಚೇತನ್ ಸಕರಿಯಾ ಕ್ಯಾಚ್ ನೀಡಿದರು. ಅಂತಿಮ ಓವರ್​ನಲ್ಲಿ 7 ರನ್ ಕಲೆಹಾಕುವ ಮೂಲಕ ಶ್ರೇಯಸ್ ಗೋಪಾಲ್ ರಾಜಸ್ಥಾನ್ ತಂಡದ ಮೊತ್ತವನ್ನು 9 ವಿಕೆಟ್ ನಷ್ಟಕ್ಕೆ 177ಕ್ಕೆ ತಂದು ನಿಲ್ಲಿಸಿದರು.

RCB

RCB

 • Share this:
  ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ  ರಾಜಸ್ಥಾನ್ ರಾಯಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು  10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ದೇವದತ್ ಪಡಿಕ್ಕಲ್ ಅವರ ಸಿಡಿಲಬ್ಬರದ ಶತಕ ಹಾಗೂ ವಿರಾಟ್ ಕೊಹ್ಲಿಯ ಆಕರ್ಷಕ ಅರ್ಧಶತಕದ ನೆರವಿನಿಂದ ಆರ್​ಸಿಬಿ 178 ರನ್​ಗಳ ಟಾರ್ಗೆಟ್​ನ್ನು ಕೇವಲ 16.3 ಓವರ್​ನಲ್ಲಿ ಚೇಸ್ ಮಾಡಿತು.

  ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಆರಂಭ ಒದಗಿಸಿದರು. ಅದರಲ್ಲೂ ಪವರ್​ಪ್ಲೇನಲ್ಲಿ ದೇವದತ್ ಪಡಿಕ್ಕಲ್ 6 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದರು. ಪರಿಣಾಮ ಮೊದಲ 6 ಓವರ್​ ಮುಕ್ತಾಯದ ವೇಳೆಗೆ ಆರ್​ಸಿಬಿ ಮೊತ್ತ 59 ಕ್ಕೆ ಬಂದು ನಿಂತಿತು.

  ಇನ್ನು ಪವರ್​ಪ್ಲೇ ಬಳಿಕ ಕೂಡ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 10ನೇ ಓವರ್​ನಲ್ಲಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಈ ಹಂತದಲ್ಲಿ ಬಿರುಸಿನ ಆಟಕ್ಕೆ ಮುಂದಾದ ಕೊಹ್ಲಿ  34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೊಹ್ಲಿ-ಪಡಿಕ್ಕಲ್ ಅಬ್ಬರದಿಂದ ತತ್ತರಿಸಿದ ಆರ್​ಆರ್​ ಬೌಲರುಗಳು ವಿಕೆಟ್​ಗಾಗಿ ಪರದಾಡಿದರು. ಇನ್ನು  6 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ದೇವದತ್ ಪಡಿಕ್ಕಲ್ 51 ಎಸೆತಗಳಲ್ಲಿ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು.

  ಮತ್ತೊಂದೆಡೆ 47 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ವಿರಾಟ್ ಕೊಹ್ಲಿ 72 ರನ್ ಬಾರಿಸಿದರು. ಈ ಮೂಲಕ 16.3 ಓವರ್​ನಲ್ಲಿ ರಾಜಸ್ಥಾನ್ ನೀಡಿದ 178 ರನ್​ಗಳ ಗುರಿಯನ್ನು ದಾಟಿ 181 ರನ್ ಕಲೆಹಾಕಿತು.

  ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಮನನ್ ವೋಹ್ರಾ ಮೊದಲೆರಡು ಓವರ್​ನಲ್ಲಿ 12 ರನ್ ಕಲೆಹಾಕಿದರು. ಆದರೆ 3ನೇ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ ಬಟ್ಲರ್ (8)ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆರ್​ಸಿಬಿಗೆ ಮೊದಲ ಯಶಸ್ಸು ತಂದುಕೊಟ್ಟರು.

  ಇದರ ಬೆನ್ನಲ್ಲೇ ಕೈಲ್ ಜೇಮಿಸನ್ ಎಸೆತದಲ್ಲಿ ಮನನ್ ವೋಹ್ರಾ (7) ಕೇನ್ ರಿಚರ್ಡ್ಸನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು  ಬಂದ ವೇಗದಲ್ಲೇ ಡೇವಿಡ್ ಮಿಲ್ಲರ್​ರನ್ನು ಶೂನ್ಯಕ್ಕೆ ಸಿರಾಜ್ ಪೆವೆಲಿಯನ್​ ಕಡೆ ಕಳುಹಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಆರ್​ಆರ್​ಗೆ ಕೇವಲ 32 ರನ್​ಗಳಷ್ಟೇ ಕಲೆಹಾಕಲು ಸಾಧ್ಯವಾಯಿತು.

  ಇದಾಗ್ಯೂ ಆರ್​ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದರು. 18 ಎಸೆತಗಳಲ್ಲಿ 21 ರನ್​ಗಳಿಸಿದ್ದ ವೇಳೆ ಸ್ಯಾಮ್ಸನ್, ಸುಂದರ್ ಎಸೆತದಲ್ಲಿ  ಗ್ಲೆನ್ ಮ್ಯಾಕ್ಸ್​ವೆಲ್​ಗೆ ಕ್ಯಾಚ್ ನೀಡುವ ಮೂಲಕ ತಮ್ಮ ಇನಿಂಗ್ಸ್​ ಅಂತ್ಯಗೊಳಿಸಿದರು. ಈ ಹಂತದಲ್ಲಿ ಜೊತೆಗೂಡಿದ ಶಿವಂ ದುಬೆ ಹಾಗೂ ರಿಯಾನ್ ಪರಾಗ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಪರಿಣಾಮ 10 ಓವರ್ ಮುಕ್ತಾಯದ ವೇಳೆಗೆ ರಾಜಸ್ಥಾನ್ ಮೊತ್ತ 70ಕ್ಕೇರಿತು. ಅಲ್ಲದೆ 5ನೇ ವಿಕೆಟ್​ಗೆ 30 ಎಸೆತಗಳಲ್ಲಿ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿದರು.

  ದುಬೆ-ಪರಾಗ್ ಅವರ ಉತ್ತಮ ಬ್ಯಾಟಿಂಗ್ ಪರಿಣಾಮ ರಾಜಸ್ಥಾನ್ ರಾಯಲ್ಸ್ ಮೊತ್ತವು 13ನೇ ಓವರ್​ನಲ್ಲಿ ನೂರರ ಗಡಿದಾಟಿತು. ಇದರ ಬೆನ್ನಲ್ಲೇ ರಿಯಾನ್ ಪರಾಗ್ (25) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಅಬ್ಬರ ಮುಂದುವರೆಸಿದ ಶಿವಂ ದುಬೆ 32 ಎಸೆತಗಳಲ್ಲಿ 2 ಸಿಕ್ಸ್ 5 ಬೌಂಡರಿಯೊಂದಿಗೆ 46 ರನ್ ಬಾರಿಸಿದರು. ಈ ವೇಳೆ ದಾಳಿಗಿಳಿದ ಕೇನ್ ರಿಚರ್ಡ್ಸನ್ ಎಸೆತಕ್ಕೆ ಭರ್ಜರಿ ಉತ್ತರ ನೀಡಲು ಮುಂದಾದ ಶಿವಂ ದುಬೆ ಮ್ಯಾಕ್ಸ್​ವೆಲ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

  ಈ ವೇಳೆಗೆ ರಾಜಸ್ಥಾನ್ ಮೊತ್ತ 16 ಓವರ್​ನಲ್ಲಿ 136ಕ್ಕೆ ಬಂದು ನಿಂತಿತ್ತು. ಈ ಹಂತದಲ್ಲಿ ಜೊತೆಯಾದ ರಾಹುಲ್ ತೆವಾಠಿಯ ಹಾಗೂ ಕ್ರಿಸ್ ಮೋರಿಸ್ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ 18ನೇ ಓವರ್​ನಲ್ಲಿ ತಂಡದ ಮೊತ್ತವನ್ನು 150 ರ ಗಡಿದಾಟಿಸಿದರು. ಸಿರಾಜ್ ಎಸೆದ 19ನೇ ಓವರ್​ನಲ್ಲಿ 13 ರನ್ ಕಲೆಹಾಕಿದ ರಾಹುಲ್ ತೆವಾಠಿಯಾ (40, 23ಎ) ಅಂತಿಮ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು.

  ಹರ್ಷಲ್ ಪಟೇಲ್ ಎಸೆತದ 20ನೇ ಓವರ್​ನ ಮೊದಲ ಎಸೆತದಲ್ಲಿ ಕ್ರಿಸ್ ಮೋರಿಸ್ (10) ವಿಕೆಟ್ ಒಪ್ಪಿಸಿದರೆ, 2ನೇ ಎಸೆತದಲ್ಲಿ ಚೇತನ್ ಸಕರಿಯಾ ಕ್ಯಾಚ್ ನೀಡಿದರು. ಅಂತಿಮ ಓವರ್​ನಲ್ಲಿ 7 ರನ್ ಕಲೆಹಾಕುವ ಮೂಲಕ ಶ್ರೇಯಸ್ ಗೋಪಾಲ್ ತಂಡದ ಮೊತ್ತವನ್ನು 9 ವಿಕೆಟ್ ನಷ್ಟಕ್ಕೆ 177ಕ್ಕೆ ತಂದು ನಿಲ್ಲಿಸಿದರು. ಆರ್​ಸಿಬಿ ಪರ 4 ಓವರ್​ನಲ್ಲಿ 27 ರನ್​ ನೀಡಿ 3 ವಿಕೆಟ್ ಕಬಳಿಸಿ ಮೊಹಮ್ಮದ್ ಸಿರಾಜ್ ಯಶಸ್ವಿ ಬೌಲರ್ ಎನಿಸಿಕೊಂಡರು.

  ಈಗಾಗಲೇ ಚೆನ್ನೈ ಪಿಚ್​ನಲ್ಲಿ ಸತತ ಮೂರು ಗೆಲುವು ದಾಖಲಿಸಿರುವ ಆರ್​ಸಿಬಿ ಮುಂಬೈನಲ್ಲೂ ಜಯದೊಂದಿಗೆ ಅಭಿಯಾನ ಆರಂಭಿಸುವ ಇರಾದೆಯಲ್ಲಿದೆ. ಅತ್ತ ಮೂರು ಪಂದ್ಯಗಳಲ್ಲಿ 2 ಸೋಲು ಕಂಡಿರುವ ರಾಜಸ್ಥಾನ್ ರಾಯಲ್ಸ್ ಆರ್​ಸಿಬಿ ವಿರುದ್ದ ಗೆಲ್ಲುವ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ.
  Published by:zahir
  First published: