E Sala Cup Namde| ಮುಂಬೈಯನ್ನು ಬಗ್ಗುಬಡಿದ ಕೊಹ್ಲಿ ಪಡೆ; 'ಈ ಸಲ ಕಪ್ ನಮ್ದೆ' ಎಂದು ಬೀಗಿದ ಆರ್‌ಸಿಬಿ ಅಭಿಮಾನಿಗಳು!

ಆರ್​ಸಿಬಿ ಈ ಗೆಲುವಿನೊಂದಿಗೆ ಸತತ ಸೋಲುಗಳ ಸರಮಾಲೆಯಿಂದ ಹೊರಬಂದಿದೆ. ಅಲ್ಲದೇ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. 10 ಪಂದ್ಯಗಳಿಂದ 12 ಅಂಕ ಗಳಿಸಿ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಮೇಲಾಗಿ ಅದರ ನೆಟ್ ರನ್ ರೇಟ್ ಮೈನಸ್ 0.7ರಿಂದ ಈಗ ಪ್ಲಸ್ 0.359ಕ್ಕೆ ಏರಿದೆ.

ವಿರಾಟ್​ ಕೊಹ್ಲಿ.

ವಿರಾಟ್​ ಕೊಹ್ಲಿ.

 • Share this:
  ಆರ್​ಸಿಬಿ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದೆ. ಭಾನುವಾರ ನಡೆದ 41 ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್​ ವಿರುದ್ಧ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿ ತಂಡ ಒಡ್ಡಿದ 166 ರನ್​ಗಳ ಸಾಧಾರಣ ಮೊತ್ತದ ಸವಾಲನ್ನ ಬೆನ್ನತ್ತುವಲ್ಲಿ ಮುಂಬೈ ಇಂಡಿಯನ್ಸ್ ವಿಫಲವಾಗಿತ್ತು. ಬೆಂಗಳೂರು ತಂಡದ ಬೌಲರ್​ಗಳ ಮಾರಕ ಬೌಲಿಂಗ್​ಗೆ ಸಿಲುಕಿದ ಮುಂಬೈ ತಂಡ ಕೇವಲ 111 ರನ್​ಗೆ ಆಲೌಟ್ ಅಗಿ 54 ರನ್​ಗಳಿಂದ ಪರಾಭವಗೊಂಡಿತು. ಎರಡು ಪಂದ್ಯಗಳ ಬಳಿಕ ಆರ್​ಸಿಬಿ ಕೊನೆಗೂ ಗೆಲುವಿನ ನಗೆ ಬೀರಿತು. ಅತ್ತ ಮುಂಬೈ ಇಂಡಿಯನ್ಸ್ ತಂಡ ಸತತ ಮೂರನೇ ಸೋಲಿನಿಂದ ಕಂಗೆಟ್ಟಿದೆ. ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ಪಡೆದರು. ಒಟ್ಟಾರೆ ಹರ್ಷಲ್ 4 ವಿಕೆಟ್ ಪಡೆದು ಆರ್​ಸಿಬಿ ಗೆಲುವಿನ ರೂವಾರಿ ಎನಿಸಿದರು. ಯುಜವೇಂದ್ರ ಚಹಲ್ ಅವರೂ 3 ವಿಕೆಟ್ ಪಡೆದರು. ಈ ಗೆಲುವಿನ ಮೂಲಕ ಆರ್​ಸಿಬಿ ಅಭಿಮಾನಿಗಳು ಕೊನೆಗೂ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.  ಆದರೆ, ನಿನ್ನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್​ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಮತ್ತೆ "ಈ ಸಲ ಕಪ್ ನಮ್ದೆ" ಎಂಬ ಸ್ಲೋಗನ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಟ್ರೆಂಡ್ ಮಾಡಿದ್ದಾರೆ. ಕೊಹ್ಲಿ ಪಡೆಯನ್ನು ಕೊಂಡಾಡು ತ್ತಿದ್ದಾರೆ. ಸತತ ಎರಡು ಸೋಲುಗಳ ಆಘಾತ ಅನುಭವಿಸಿದ್ದ ಆರ್‌ಸಿಬಿ ತಂಡ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವು ಸಾಧಿಸಿ, ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಗೆಲುವು ಪಡೆದಿದೆ.  'ಸೋತರು ಗೆದ್ದರು ನಾವ್ ಆರ್‌ಸಿಬಿ ಫ್ಯಾನ್ಸ್ ' ಅಂತ ಹೇಳಿಕೊಳ್ಳುವ ಪಕ್ಕ ಅಭಿಮಾನಿಗಳ ಬಳಗ ಹೊಂದಿರುವ ಆರ್‌ಸಿಬಿ ತಂಡದ ಗೆಲುವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದ್ದಾರೆ.  'ಸೋತಾಗ ಎರಡು ಸ್ಟೇಟಸ್ ಹಾಕೋ ನಾವು ಗೆದ್ದಾಗ ನಾಲ್ಕು ಸ್ಟೇಟಸ್ ಹಾಕಿ ಸಂಭ್ರಮಿಸುತ್ತೇವೆ' ಎನ್ನುವ ವಿಡಿಯೋ ತುಣುಕುಗಳು ಈಗಾಗಲೇ ಎಲ್ಲೆಡೆ ಸದ್ದು ಮಾಡುತ್ತಿದೆ. ಜೊತೆಗೆ ಈ ಸಲ ಕಪ್ ನಮ್ದೇ ಎನ್ನುವ ಉದ್ಗರ್ಷ ಇನ್ನೂ ಹೆಚ್ಚಾಗಿದೆ. ಇದೆ ರೀತಿ ಅನೇಕರು ನಾನಾ ಅಭಿಪ್ರಾಯಗಳನ್ನು ಕೂ ವಿನಲ್ಲಿ ಹಂಚಿಕೊಂಡಿದ್ದಾರೆ.  ಆರ್​ಸಿಬಿ ಈ ಗೆಲುವಿನೊಂದಿಗೆ ಸತತ ಸೋಲುಗಳ ಸರಮಾಲೆಯಿಂದ ಹೊರಬಂದಿದೆ. ಅಲ್ಲದೇ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. 10 ಪಂದ್ಯಗಳಿಂದ 12 ಅಂಕ ಗಳಿಸಿ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಮೇಲಾಗಿ ಅದರ ನೆಟ್ ರನ್ ರೇಟ್ ಮೈನಸ್ 0.7ರಿಂದ ಈಗ ಪ್ಲಸ್ 0.359ಕ್ಕೆ ಏರಿದೆ.  ಆರ್​​ಸಿಬಿಗಿಂತ ಒಂದು ಸ್ಥಾನ ಹಿಂದಿರುವ ಕೆಕೆಆರ್ 4 ಪಾಯಿಂಟ್​ಗಳಷ್ಟು ಹಿಂದುಳಿದಿದೆ. ಇದು ಆರ್​ಸಿಬಿಯ ಪ್ಲೇ ಆಫ್ ಸಾಧ್ಯತೆಯನ್ನ ದಟ್ಟಗೊಳಿಸಿದಂತಾಗಿದೆ. ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನ ಸೆ. 29ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಅತ್ತ, ಮುಂಬೈ ಇಂಡಿಯನ್ಸ್ ತಂಡ ಯುಎಇಯಲ್ಲಿ ಮುಗ್ಗರಿಸುವುದು ಮುಂದುವರಿದಿದೆ. ಇದು ತಂಡಕ್ಕೆ ಹ್ಯಾಟ್ರಿಕ್ ಸೋಲು. ಅಂಕಪಟ್ಟಿಯಲ್ಲಿ ಅದು ಈಗ 6ನೇ ಸ್ಥಾನಕ್ಕೆ ಕುಸಿದಿದೆ.

  ಇದನ್ನೂ ಓದಿ: RCB vs MI- ಹರ್ಷಲ್ ಪಟೇಲ್ ಹ್ಯಾಟ್ರಿಕ್; ಮುಂಬೈ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: