news18-kannada Updated:October 15, 2020, 4:59 PM IST
RCB vs KXIP
ಐಪಿಎಲ್ನಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯದಲ್ಲಿ ಆರ್ಸಿಬಿ ಉತ್ತಮ ರನ್ರೇಟ್ನಿಂದ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಇತ್ತ ರಾಹುಲ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದರೆ ಮಾತ್ರ ಪ್ಲೇ ಆಫ್ ಕನಸು ಕಟ್ಟಬಹುದಾಗಿದೆ. ಹೀಗಾಗಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ರನ್ ಮಳೆ ಸುರಿಯುವ ನಿರೀಕ್ಷೆಯಿದೆ. ಆರ್ಸಿಬಿ ಕಳೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವನ್ನು ಇದೇ ಮೈದಾನದಲ್ಲಿ ಆಡಿತ್ತು. ಇದರಲ್ಲಿ ಎಬಿ ಡಿವಿಲಿಯರ್ಸ್ ತಮ್ಮ 360 ಡಿಗ್ರಿ ಬ್ಯಾಟಿಂಗ್ ವೈಭವ ತೋರಿದ್ದರು. ಹೀಗಾಗಿ ಎಬಿಡಿ ಇಂದುಕೂಡ ಆರ್ಭಟಿಸುವುದು ಖಚಿತ.
IPL 2020, RCB vs KXIP: ಆರ್ಸಿಬಿಗೆ ಸೇಡಿನ ಪಂದ್ಯ: ಪಂಜಾಬ್ಗೆ ಮಾಡು ಇಲ್ಲವೇ ಮಡಿ ಪಂದ್ಯ!
ಇತ್ತ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಬಲದ ಇರಲಿದೆ. ಮಾಹಿತಿಯ ಪ್ರಕಾರ ಮಯಾಂಕ್ ಅಗರ್ವಾಲ್ ಜೊತೆ ಗೇಲ್ ಇನ್ನಿಂಗ್ಸ್ ಆರಂಭಿಸಲಿದ್ದು 3ನೇ ಕ್ರಮಾಂಕದಲ್ಲಿ ನಾಯಕ ಕೆ. ಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ, ನಂತರ ನಿಕೋಲಸ್ ಪೂರನ್ ಆಡಲಿದ್ದಾರೆ. ಹೀಗಾಗಿ ಈ ಬಾರಿ ಪಂಜಾಬ್ ಮಧ್ಯಮ ಕ್ರಮಾಂಕವನ್ನು ಕಡೆಗಣಿಸುವಂತಿಲ್ಲ.
ಇನ್ನೂ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಈ ಪಂದ್ಯ ತುಂಬಾನೆ ಮುಖ್ಯವಾಗಿದೆ. ಇಂದು ಆರ್ಸಿಬಿ ತಂಡದ ಪರವಾಗಿ ಕೊಹ್ಲಿ 200ನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈ ಮೂಲಕ ಹೊಸ ಮೈಲಿಗಲ್ಲೊಂದನ್ನು ಕೊಹ್ಲಿ ಸಾಧಿಸಲಿದ್ದಾರೆ. ಕೊಹ್ಲಿ ಐಪಿಎಲ್ನಲ್ಲಿ 184 ಪಂದ್ಯ ಹಾಗೂ ಚಾಂಪಿಯನ್ಸ್ ಲೀಗ್ನಲ್ಲಿ 15 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಮೂಲಕ ಒಟ್ಟಾರೆ ಆರ್ಸಿಬಿ ತಂಡವನ್ನು 199 ಬಾರಿಗೆ ಈವರೆಗೆ ಕೊಹ್ಲಿ ಪ್ರತಿನಿಧಿಸಿದ್ದಾರೆ.
ಐಪಿಎಲ್ನಲ್ಲಿ ಇಲ್ಲಿಯವರೆಗೂ ಉಭಯ ತಂಡಗಳು 25 ಬಾರಿ ಮುಖಾಮುಖಿಯಾಗಿದ್ದು, 13ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಜಯ ಸಾಧಿಸಿದರೆ, 12 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿವೆ.
IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!ಇತ್ತೀಚೆಗಿನ ಪ್ರದರ್ಶನ ನೋಡುವುದಾದರೆ ಆರ್ಸಿಬಿ ಕಳೆದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದು ಪರಾಕ್ರಮ ಮೆರೆದಿದೆ. ಇತ್ತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕಳೆದ ಐದು ಪಂದ್ಯಗಳಲ್ಲಿ ಐದರಲ್ಲೂ ಸೋಲುಕಂಡಿದೆ.
ಇನ್ನೂ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಬ್ಯಾಟ್ಸ್ಮನ್ಗಳ ಪಾಲಿನ ಸ್ವರ್ಗವಾಗಿ ಮುಂದುವರೆಯುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 13ರ ಆವೃತ್ತಿಯಲ್ಲೂ ಅತ್ಯಧಿಕ ರನ್ ಟೋಟಲ್ ಈ ಸ್ಟೇಡಿಯಂನಲ್ಲಿ ದಾಖಲಾಗಿದೆ. ಈ ಸ್ಟೇಡಿಯಂನಲ್ಲಿ ನಡೆದ ಹೆಚ್ಚಿನ ಪಂದ್ಯಗಳಲ್ಲಿ ಎರಡೂ ತಂಡಗಳು 200+ ರನ್ ಕಲೆ ಹಾಕಿದೆ. ಹೀಗಾಗಿ ಲೆಕ್ಕಚಾರದ ಪ್ರಕಾರ ಆರ್ಸಿಬಿ ತಂಡ ಪಂಜಾಬ್ ವಿರುದ್ಧ ಗೆಲುವು ಸಾಧಿಸುವ ನೆಚ್ಚಿನ ತಂಡವಾಗಿದೆ.
Published by:
Vinay Bhat
First published:
October 15, 2020, 4:59 PM IST