ಐಪಿಎಲ್(IPL) ಸೀಸನ್ 15 ನ ಆರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(Kolkatta Knight Riders) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Banglore) ಅದ್ಭುತ ಆಟ ಪ್ರದರ್ಶಸಿದ್ದಾರೆ. ಟಾಸ್ ಗೆದ್ದು ಆರ್ಸಿಬಿ(RCB) ನಾಯಕ ಫಾಫ್ ಡುಪ್ಲೆಸಿಸ್(Faf Du Plessis) ಬೌಲಿಂಗ್(Bowling) ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಆರ್ಸಿಬಿ ಬೌಲರುಗಳು ಕೆಕೆಆರ್(KKR) ತಂಡಕ್ಕೆ ಶಾಕ್ ನೀಡಿದ್ದಾರೆ. ಕೆಕೆಆರ್ ಆಟಗಾರರಿಗೆ ಆರ್ಸಿಬಿ ಬೌಲರ್ಗಳು ಕಾಟ ನೀಡಿದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ಕೆಕೆಆರ್ ಆಟಗಾರರು ಪೆವಿಲಿಯನ್ ಸೇರಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಬ್ಯಾಟಿಂಗ್(Batting)ನಲ್ಲಿ ಅದ್ಭುತ ಆಟ ಪ್ರದರ್ಶಸಿತ್ತು. ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು.
ಇಂದು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಆರ್ಸಿಬಿ ಇಂದು ಬೌಲಿಂಗ್ನಲ್ಲಿ ತಾವೆಷ್ಟು ಸ್ಟ್ರಾಂಗ್ ಎಂಬುದನ್ನು ಬೇರೆ ತಂಡಗಳಿಗೆ ವಾರ್ನಿಂಗ್(Warning) ಕೊಟ್ಟಿದ್ದಾರೆ ಎಂದು ಹೇಳಬಹುದು. ಆರ್ಸಿಬಿಯ ಪ್ರತಿಯೊಬ್ಬ ಬೌಲರ್ಸ್ಗಳು ಫಾರ್ಮ್ಗೆ ಬಂದಿದ್ದಾರೆ. ತಾ ಮುಂದು, ನಾ ಮುಂದು ಎಂಬಂತೆ ವಿಕೆಟ್ ಕಬಳಿಸಿದ್ದಾರೆ.
ಬೊಂಬಾಟ್ ಬೌಲಿಂಗ್ ಮಾಡಿದ ಆರ್ಸಿಬಿ!
ಆರ್ಸಿಬಿ ತಂಡದ ಪ್ರತಿಯೊಬ್ಬ ಬೌಲರ್ ಕೂಡ ಇಂದು ಕೆಕೆಆರ್ ಬ್ಯಾಟ್ಸ್ಮ್ಯಾನ್ಗಳಿಗೆ ಕಾಟ ನೀಡಿದ್ದಾರೆ. 128ರನ್ಗಳಿಗೆ ಕೆಕೆಆರ್ ತಂಡವನ್ನು ಕಟ್ಟಿಹಾಕಿದ್ದಾರೆ. ಆರ್ಸಿಬಿ ಬೌಲರ್ಗಳ ಸುನಾಮಿಯಲ್ಲಿ ಸಿಲುಕಿದ ಕೆಕೆಆರ್ 10 ವಿಕೆಟ್ ನಷ್ಟಕ್ಕೆ ಕೇವಲ 128ರನ್ಗಳಿಸಿದೆ.
ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್
ಹರ್ಷಲ್ ಪಟೇಲ್ ಐಪಿಎಲ್ನಲ್ಲಿ ಸತತ ಎರಡು ಓವರ್ಗಳನ್ನು ಬೌಲ್ ಮಾಡಿ ಒಂದು ರನ್ ಕೊಡದೆ 2 ವಿಕೆಟ್ ಪಡೆದ ಎರಡನೇ ಬೌಲರ್. 2020ರ ಮೊದಲ ವರ್ಷದಲ್ಲಿ ಬೆಂಗಳೂರು ತಂಡದ ಮೊಹಮ್ಮದ್ ಸಿರಾಜ್ ಕೋಲ್ಕತ್ತಾ ವಿರುದ್ಧ ಈ ಸಾಧನೆ ಮಾಡಿದ್ದರು. ನಾಲ್ಕು ಓವರ್ ಮಾಡಿದ ಹರ್ಷಲ್ ಪಟೇಲ್ 2 ಮೇಡಿನ್ ಓವರ್ ಮಾಡಿದ್ದಾರೆ. 11 ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: ಬೇರೆ ತಂಡಕ್ಕೆ ಆಡುತ್ತೇನೆಂದು ಕನಸು ಸಹ ಕಂಡಿರಲಿಲ್ಲ ಎಂದ ಮಾಜಿ RCB ಬೌಲರ್..!
ರಣರಂಗದಲ್ಲಿ ವನಿಂದು ಹಸರಂಗ ಮಿಂಚಿಂಗ್!
ಇನ್ನೂ ಆರ್ಸಿಬಿ ತಂಡದ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ ಕೂಡ ಇಂದು ಮಿಂಚಿದ್ದಾರೆ. ಕೊಟ್ಟ ಕಾಸಿಗೆ ಮೋಸ ಮಾಡದೇ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. 4 ಓವರ್ಗಳಲ್ಲಿ 20 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ. ಶ್ರೇಯಸ್ ಅಯ್ಯರ್, ಸುನೀಲ್ ನರೈನ್, ಸೇಲ್ಡೋನ್ ಜಾಕ್ಸನ್, ಟಿಮ್ ಸೌಥಿ ಅವರನ್ನು ಔಟ್ ಮಾಡಿದ್ದಾರೆ.
ಕೆಕೆಆರ್ಗೆ ಆಸರೆಯಾಗಿದ್ದ ಸ್ಯಾಮ್ ಬಿಲ್ಲಿಂಗ್ಸ್!
67 ರನ್ ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕೆಲ ಹೊತ್ತು ಸ್ಯಾಮ್ ಬಿಲ್ಲಿಂಗ್ಸ್ ಆಸರೆಯಾದರೆ, ಸ್ಫೋಟಕ ಬ್ಯಾಟ್ಸ್ ಮನ್ ಆಂಡ್ರೆ ರಸೆಲ್ ಕೂಡ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು ಏರಿಸುವ ವಿಶ್ವಾಸ ಮೂಡಿಸಿದ್ದರು. 18 ಎಸೆತಗಳಲ್ಲಿ 3 ಅದ್ಭುತ ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿ ಆರ್ ಸಿಬಿಗೆ ಅಪಾಯಕಾರಿ ಎನಿಸಿದ್ದ ರಸೆಲ್ ತಂಡದ ಮೊತ್ತ 99 ರನ್ ಆಗಿದ್ದಾಗ ನಿರ್ಗಮಿಸುವುದರೊಂದಿಗೆ ಕೆಕೆಆರ್ ನ ದೊಡ್ಡ ಮೊತ್ತದ ಆಸೆ ಕಮರಿತು.
ಇದನ್ನೂ ಓದಿ: RCB ಐಪಿಎಲ್ ಗೆದ್ದಾಗ ನೆನಪಾಗೋದು ಕುಚಿಕು ಗೆಳೆಯ! Kohli ಮನದಾಳ ಮಾತು
ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ನೀರಸ ಬೌಲಿಂಗ್ ನ ಕಾರಣದಿಂದಾಗಿಯೇ ಟೀಕೆಗೆ ಗುರಿಯಾಗಿದ್ದ ಆರ್ ಸಿಬಿ ತಂಡ, ಕೆಕೆಆರ್ ವಿರುದ್ಧ ಮೊದಲ ಎಸೆತದಿಂದಲೇ ಆಕ್ರಮಣಕಾರಿಯಾಗಿ ದಾಳಿ ನಡೆಸಿದೆ. ಈ ಮೂಲಕ ಇತರೆ ತಂಡಗಳಿಗೆ ವಾರ್ನಿಂಗ್ ಸಹ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ