RCB vs KKR: RCB ನೀರಸ ಪ್ರದರ್ಶನ, ಕೋಲ್ಕತ್ತಾ ನೈಟ್​ ರೈಡರ್ಸ್​ಗೆ 9 ವಿಕೆಟ್​ಗಳ ಗೆಲುವು

RCB vs KKR Live Score: ಆರಂಭಿಕರಾಗಿ ಕಣಕ್ಕಿಳಿದ ನಾಯಕ ವಿರಾಟ್​ ಕೊಹ್ಲಿ, ಪ್ರಸಿದ್​ ಕೃಷ್ಣ ಓವರ್​ನಲ್ಲಿ ಎಲ್​ಬಿಡಬ್ಲೂ ಆಗಿ ಕಡಿಮೆ ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಉತ್ತಮ ಲಯ ಕಂಡುಕೊಳ್ಳುವಲ್ಲಿ ವಿರಾಟ್​ ಕೊಹ್ಲಿ ಮತ್ತೆ ವಿಫಲರಾಗಿದ್ದಾರೆ. ನಾಲ್ಕು ಬಾಲ್​ಗಳಲ್ಲಿ 5 ರನ್​ಗಳಿಸಿ ವಿರಾಟ್​ ಪೆವಿಲಿಯನ್​ ದಾರಿ ಹಿಡಿದರು

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ಅಭುದಾಬಿ: ದುಬೈನ ಅಭುದಾಬಿಯಲ್ಲಿ ನಡೆಯುತ್ತಿರುವ ಕೋಲ್ಕತ್ತಾ ನೈಟ್​ ರೈಡರ್ಸ್​ (Kolkata Knight Riders) ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ನಡುವಿನ ಪಂದ್ಯದಲ್ಲಿ ಆರ್​ಸಿಬಿ ಎಲ್ಲರ ಫೇವರೇಟ್​ ತಂಡವಾಗಿದೆ. ಇದುವರೆಗೂ ಎರಡೂ ತಂಡಗಳು ಒಟ್ಟೂ 27 ಪಂದ್ಯಗಳನ್ನು ಪರಸ್ಪರ ಆಡಿದ್ದು, ಕೆಕೆಆರ್​ 24 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್​ಸಿಬಿ 23 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಆದರೆ ಈ ಬಾರಿಯ ಐಪಿಎಲ್​ನ ಫಾರ್ಮ್​ ನೋಡಿದಾಗ, ಆರ್​ಸಿಬಿ ಉತ್ತಮ ಪ್ರದರ್ಶನ ನೀಡಿದ್ದರೆ, ಕೆಕೆಆರ್​ ನಿರಾಶಾದಾಯಕ ಪ್ರದರ್ಶನ ನೀಡಿದೆ. ಆರ್​ಸಿಬಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದು, ಆರಂಭಿಕರಾಗಿ ದೇವದತ್​ ಪಡಿಕ್ಕಲ್​ ಜೊತೆ ನಾಯಕ ವಿರಾಟ್​ ಕೊಹ್ಲಿ ಕಣಕ್ಕಿಳಿದಿದ್ದಾರೆ. 

  ಕೆಕೆಆರ್​ಗೆ ಫಾರ್ಮ್​ ಸಮಸ್ಯೆ:

  ಕೆಕೆಆರ್​ ತಂಡದಲ್ಲಿ ಮ್ಯಾಚ್​ ವಿನ್ನರ್​ ಆಟಗಾರರು ಎನಿಸಿಕೊಂಡಿರುವ ನಾಯಕ ಇಯಾನ್​ ಮಾರ್ಗನ್​, ಪವರ್​ಫುಲ್​ ಹಿಟ್ಟರ್​ ಆ್ಯಂಡ್ರೆ ರಸ್ಸೆಲ್​ ತಮ್ಮ ಎಂದಿನ ಆಟವನ್ನು ಐಪಿಎಲ್​ನಲ್ಲಿ ಪ್ರದರ್ಶಿಸಿಲ್ಲ. ಇನ್ನೂ ಆಗಾಗ ಆರಂಭಿಕರಾಗಿ ಕಣಕ್ಕಿಳಿಯುವ ಸುನಿಲ್​ ನರೇನ್​ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಕೆಕೆಆರ್​ ತಂಡದ ಮಾಜಿ ನಾಯಕ ದಿನೇಶ್​ ಕಾರ್ತಿಕ್​ ಬ್ಯಾಟ್​ನಿಂದ ಕೂಡ ರನ್​ ಹರಿದು ಬರುತ್ತಿಲ್ಲ. ಕೆಕೆಆರ್​ ಹಲವು ಬದಲಾವಣೆ ಮಾಡಿಕೊಂಡರೂ ಸಹ ಗೆಲುವು ಮರೀಚಿಕೆಯಾಗಿದೆ.

  ಆರ್​ಸಿಬಿಗೆ AB de Villiers - Glen Maxwell ಆಸರೆ:

  ಇನ್ನೂ ಆರ್​ಸಿಬಿ ತಂಡಕ್ಕೆ ಎಬಿ ಡೆವಿಲಿಯರ್ಸ್​ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ಆಸರೆಯಾಗಿದ್ದಾರೆ, ಈ ಸೀಸನ್​ನ ಮೊದಲಾರ್ಧದಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದು, ಇದನ್ನು ಮುಂದುವರೆಸುವ ಸಾಧ್ಯತೆಯಿದೆ. ಎಬಿ ಡೆವಿಲಿಯರ್ಸ್​ ದ್ವಿತೀಯಾರ್ಧದಲ್ಲೂ ವಿಕೆಟ್​ ಕೀಪಿಂಗ್​ ಮಾಡುತ್ತಿದ್ದಾರೆ. ಈ ಮೂಲಕ, ಇನ್ನೊಬ್ಬ ಬ್ಯಾಟ್ಸ್​ಮನ್​ ಅಥವಾ ಬೌಲರ್​ ಆಡಿಸಲು ಆರ್​ಸಿಬಿಗೆ ಸಹಕಾರಿಯಾಗಿದೆ. ಎಬಿಡಿ ಪ್ರತಿ ಬಾರಿ ಆರ್​ಸಿಬಿ ಕಷ್ಟದಲ್ಲಿದ್ದಾಗಲೂ ಆಸರೆಯಾಗಿ ನಿಲ್ಲುತ್ತಾ ಬಂದಿದ್ದಾರೆ. ಅಭಿಮಾನಿಗಳಿಗೆ ಆರ್​ಸಿಬಿ ತಂಡದಲ್ಲಿ ಅವರೇ ಫೇವರೇಟ್​.

  ಮುಂದುವರೆದ Virat Kohli ಕಳಪೆ ಪ್ರದರ್ಶನ:

  ಆರಂಭಿಕರಾಗಿ ಕಣಕ್ಕಿಳಿದ ನಾಯಕ ವಿರಾಟ್​ ಕೊಹ್ಲಿ, ಪ್ರಸಿದ್​ ಕೃಷ್ಣ ಓವರ್​ನಲ್ಲಿ ಎಲ್​ಬಿಡಬ್ಲೂ ಆಗಿ ಕಡಿಮೆ ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಉತ್ತಮ ಲಯ ಕಂಡುಕೊಳ್ಳುವಲ್ಲಿ ವಿರಾಟ್​ ಕೊಹ್ಲಿ ಮತ್ತೆ ವಿಫಲರಾಗಿದ್ದಾರೆ. ನಾಲ್ಕು ಬಾಲ್​ಗಳಲ್ಲಿ 5 ರನ್​ಗಳಿಸಿ ವಿರಾಟ್​ ಪೆವಿಲಿಯನ್​ ದಾರಿ ಹಿಡಿದರು.

  ಟೀಂನ ಆಪತ್ಬಾಂಧವ ಎಬಿಡಿ ಕೂಡ ರನ್​ ಗಳಿಸದೇ ಪೆವಿಲಿಯನ್​ ದಾರಿ ಹಿಡಿದರು. ಆರ್​ಸಿಬಿ, 9 ಓವರ್​ಗೆ 52 ರನ್​ ಗಳಿಸಿ 4 ವಿಕೆಟ್​ ಕಳೆದುಕೊಂಡಿದೆ. ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತು ಸಚಿನ್​ ಬೇಬಿ ಆಟವಾಡುತ್ತಿದ್ದರು. ಇಬ್ಬರ ಬ್ಯಾಟ್​ನಿಂದಲೂ ರನ್​ ಹರಿದು ಬರಲಿಲ್ಲ. ಬಾಲ್​ ಕನೆಕ್ಟ್​ ಆಗುತ್ತಿಲ್ಲ ಎಂಬ ಬೇಸರಕ್ಕೆ ಹೊಡೆಯಲು ಹೋದ ಮ್ಯಾಕ್ಸ್​ವೆಲ್​ ವರುಣ್​ ಚಕ್ರವರ್ತಿ ಓವರ್​ನಲ್ಲಿ ಕ್ಲೀನ್​ ಬೋಲ್ಡ್​ ಆದರು. ಮೊದಲ ಐಪಿಎಲ್​ ಪಂದ್ಯ ಆಡುತ್ತಿರುವ ಶ್ರೀಲಂಕಾದ ಹಸರಂಗ ಕೂಡ ಮೊದಲ ಬಾಲ್​ನಲ್ಲೇ ಎಲ್​ಬಿಗೆ ಬಲಿಯಾದರು.

  ಇದನ್ನೂ ಓದಿ: ಟಿ20 ಮಾದರಿ ಕ್ರಿಕೆಟ್ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ; ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

  ನಾಯಕತ್ವ ಕೈಬಿಡಲಿರುವ ಕೊಹ್ಲಿ:

  ಟಿ 20 ವಿಶ್ವಕಪ್ (T20 World Cup) ನಂತರ ತಾನು ಟ್ವೆಂಟಿ -20 ಮಾದರಿಯಲ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ವಿರಾಟ್​ ಕೊಹ್ಲಿ (Virat Kohli) ಘೋಷಿಸಿದ್ದರು. ಇದರ ಬೆನ್ನಿಗೆ ಭಾನುವಾರ ಮತ್ತೊಂದು ಬಾಂಬ್ ಸಿಡಿಸಿರುವ ಕೊಹ್ಲಿ 2021ರ ನಂತರ ತಾನು ರಾಯಲ್ ಚಾಲೆಂಜರ್ಸ್​ (Royal Challengers Banglore) ಬೆಂಗಳೂರು ತಂಡದ ನಾಯಕತ್ವದಿಂದಲೂ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಅವರ ಭಾವನಾತ್ಮಕ ಸಂದೇಶದಲ್ಲಿ ತಾನು ಆರ್​ಸಿಬಿ (RCB) ತಂಡದಲ್ಲಿ ಕೇವಲ ಓರ್ವ ಆಟಗಾರನಾಗಿ ಮಾತ್ರ ಮುಂದುವರೆಯುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದರು. "ನಾನು ನನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವವರೆಗೂ ಆರ್‌ಸಿಬಿ ಆಟಗಾರನಾಗಿಯೇ ಇರಲಿದ್ದೇನೆ" ಎಂದು ಕೊಹ್ಲಿ ಹೇಳಿದ್ದರು. ಆದರೆ, ಅವರ ಈ ನಾಯಕತ್ವದಿಂದ ಹಿಂದೆ ಸರಿಯುವ ಘೋಷಣೆಯು ಕ್ರಿಕೆಟ್ ಪ್ರಪಂಚದಾದ್ಯಂತ ಇದೀಗ ಆಘಾತವನ್ನು ಉಂಟುಮಾಡಿತು. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ನಿರ್ಧಾರದ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.

  ಇದನ್ನೂ ಓದಿ: 100ನೇ ಐಪಿಎಲ್ ಪಂದ್ಯ ಆಡುವ ಮೂಲಕ ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಜಸ್ಪ್ರೀತ್ ಬುಮ್ರಾ

  "ಐಪಿಎಲ್ 2021 ಟೂರ್ನಿ ಬಳಿಕ ವಿರಾಟ್ ಕೊಹ್ಲಿ ಅವರು ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಯಲಿದ್ಧಾರೆ" ಎಂದು ಆರ್​ಸಿಬಿ ಟ್ವೀಟ್ ಮಾಡಿದೆ. ಹಾಗೆಯೇ, "ಆರ್​ಸಿಬಿ ಕ್ಯಾಪ್ಟನ್ ಆಗಿ ಇದು ನನ್ನ ಕೊನೆಯ ಐಪಿಎಲ್ ಆಗಿರುತ್ತದೆ. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ನಾನು ಆರ್​ಸಿಬಿ ಆಟಗಾರನಾಗಿಯೇ ಮುಂದುವರಿಯುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟು ಬೆಂಬಲಿಸುತ್ತಾ ಬಂದ ಎಲ್ಲಾ ಆರ್​ಸಿಬಿ ಫ್ಯಾನ್ಸ್​ಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ" ಎಂದು ಆರ್​ಸಿಬಿಯ ಈ ಟ್ವೀಟ್​ನಲ್ಲಿ ತಿಳಿಸಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾವುಕರಾಗಿದ್ದಾರೆ.
  Published by:Sharath Sharma Kalagaru
  First published: