HOME » NEWS » Ipl » RCB VS KKR LIVE SCORE IPL 2021 ROYAL CHALLENGERS BANGALORE 4 DOWN ZP

KKR vs RCB: ಎಬಿಡಿ-ಮ್ಯಾಕ್ಸ್​ವೆಲ್ ಆಕರ್ಷಕ ಅರ್ಧಶತಕ: ಕೆಕೆಆರ್​ಗೆ ಬೃಹತ್ ಮೊತ್ತದ ಸವಾಲು

IPL Live Score 2021, RCB vs KKR Live Updates: ಉಭಯ ತಂಡಗಳು ಇದುವರೆಗೆ 26 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್​ 14 ಬಾರಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ 12 ಬಾರಿ ವಿಜಯದ ನಗೆ ಬೀರಿದೆ. ಕೊನೆಯ 10 ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಆರ್​ಸಿಬಿ ಕೆಕೆಆರ್ ವಿರುದ್ದ ಕೇವಲ 3 ಬಾರಿ ಮಾತ್ರ ಗೆದ್ದಿದೆ.

news18-kannada
Updated:April 18, 2021, 6:08 PM IST
KKR vs RCB: ಎಬಿಡಿ-ಮ್ಯಾಕ್ಸ್​ವೆಲ್ ಆಕರ್ಷಕ ಅರ್ಧಶತಕ: ಕೆಕೆಆರ್​ಗೆ ಬೃಹತ್ ಮೊತ್ತದ ಸವಾಲು
Rcb vs Kkr
  • Share this:
ಚೆನ್ನೈನಲ್ಲಿ ನಡೆಯುತ್ತಿರುವ ಐಪಿಎಲ್​ನ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಅದರಂತೆ ಇನಿಂಗ್ಸ್​ ಆರಂಭಿಸಿದ ಆರ್​ಸಿಬಿ 2ನೇ ಓವರ್​ನಲ್ಲೇ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ವರುಣ್ ಚಕ್ರವರ್ತಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದರು. ಈ ವೇಳೆ ರಾಹುಲ್ ತ್ರಿಪಾಠಿ ಹಿಡಿದ ಅತ್ಯುತ್ತಮ ಕ್ಯಾಚ್​​ಗೆ ಕೊಹ್ಲಿ (5) ಔಟಾದರು. ಇದರ ಬೆನ್ನಲ್ಲೇ ಕ್ಲೀನ್ ಬೌಲ್ಡ್ ಆಗುವ ಮೂಲಕ ರಜತ್ ಪಾಟಿದಾರ್ (1) ಕೂಡ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ 3 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್​ ಸಿಡಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಆರ್​ಸಿಬಿ ಮೊತ್ತ 45ಕ್ಕೆ ಬಂದು ನಿಂತಿತು. 6 ಓವರ್ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕ್ಸ್​ವೆಲ್ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಆರ್​ಸಿಬಿ ಪರ ಮ್ಯಾಕ್ಸ್​ವೆಲ್ ಅವರ 2ನೇ ಅರ್ಧಶತಕ. ಅಲ್ಲದೆ ಮೊದಲ 10 ಓವರ್​ನಲ್ಲಿ ಆರ್​ಸಿಬಿ 84 ರನ್​ ಕಲೆಹಾಕಿತು.

ಪ್ರಸಿದ್ಧ್ ಕೃಷ್ಣ ಎಸೆದ 12ನೇ ಓವರ್​ನಲ್ಲಿ ತ್ರಿಪಾಠಿಗೆ ಕ್ಯಾಚ್ ನೀಡಿ ದೇವದತ್ ಪಡಿಕ್ಕಲ್(25) ನಿರ್ಗಮಿಸಿದರು. ಈ ವೇಳೆ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ 4 ರನ್​ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.

ಇದಾದ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕ್ಸಿ-ಎಬಿಡಿ ಕೆಕೆಆರ್​ ಬೌಲರುಗಳ ಬೆಂಡೆತ್ತಿದರು. ಪರಿಣಾಮ ಆರ್​ಸಿಬಿ 15 ಓವರ್​ ಮುಕ್ತಾಯದ ವೇಳೆ ತಂಡದ ಮೊತ್ತ 134ಕ್ಕೆ ಬಂದು ನಿಂತಿತು. ತಂಡದ ಮೊತ್ತ 148 ಆಗಿದ್ದ ವೇಳೆ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಕ್ಯಾಚ್ ನೀಡಿದ ಮ್ಯಾಕ್ಸ್​ವೆಲ್ ತಮ್ಮ ಬಿರುಸಿನ ಇನಿಂಗ್ಸ್ ಅಂತ್ಯಗೊಳಿಸಿದರು. ಇದಕ್ಕೂ ಮುನ್ನ ಮ್ಯಾಕ್ಸ್​ವೆಲ್ 49 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 9 ಸೂಪರ್ ಬೌಂಡರಿಗಳೊಂದಿಗೆ 78 ರನ್​ಗಳನ್ನು ಚಚ್ಚಿದ್ದರು.

ಮ್ಯಾಕ್ಸ್​ವೆಲ್ ನಿರ್ಗಮನದ ಬೆನ್ನಲ್ಲೇ ಎಬಿಡಿ ಅಬ್ಬರ ಶುರು ಮಾಡಿದರು. ಅದರಂತೆ ಕೇವಲ 27 ಎಸೆತಗಳಲ್ಲಿ ಎಬಿಡಿ ಹಾಫ್ ಸೆಂಚುರಿ ಪೂರೈಸಿದರು. ಈ ಹಂತದಲ್ಲಿ ಎಬಿಡಿಗೆ ಸಾಥ್ ನೀಡಿದ ಕೈಲ್ ಜೇಮಿಸನ್ ಕೂಡ ಸಿಕ್ಸ್-ಫೋರ್​ಗಳನ್ನು ಬಾರಿಸಿ ಮಿಂಚಿದರು. ಪರಿಣಾಮ 19 ಓವರ್ ಮುಕ್ತಾಯದ ವೇಳೆ ಆರ್​ಸಿಬಿ ಸ್ಕೋರ್ 183ಕ್ಕೇರಿತು.

ಆಂಡ್ರೆ ರಸೆಲ್ ಎಸೆದ ಕೊನೆಯ ಓವರ್​ನ ಮೊದಲ 2 ಎಸೆತದಲ್ಲಿ ಎಬಿಡಿ ಫೋರ್-ಸಿಕ್ಸ್ ಸಿಡಿಸಿದರು. 3ನೇ ಎಸೆತದಲ್ಲಿ 2 ರನ್+ವೈಡ್. ನಾಲ್ಕನೇ ಎಸೆತದಲ್ಲಿ ಬೌಂಡರಿ. 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 6ನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಎಬಿಡಿ ತಂಡದ ಮೊತ್ತವನ್ನು 204 ಕ್ಕೆ ತಂದು ನಿಲ್ಲಿಸಿದರು. ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದ ಎಬಿ ಡಿವಿಲಿಯರ್ಸ್​ ಕೇವಲ 34 ಎಸೆತಗಳಲ್ಲಿ 3 ಸಿಕ್ಸ್, 9 ಬೌಂಡರಿಗಳೊಂದಿಗೆ ಅಜೇಯ 78 ರನ್​ ಬಾರಿಸಿದರು. ಕೆಕೆಆರ್ ಪರ 4 ಓವರ್​ನಲ್ಲಿ 39 ರನ್​ 2 ವಿಕೆಟ್ ಪಡೆದ ವರುಣ್ ಚಕ್ರವರ್ತಿ ಯಶಸ್ವಿ ಬೌಲರ್ ಎನಿಸಿಕೊಂಡರು.ಸ್ಕೋರ್: 204/4

ಓವರ್: 20

ಸತತ ಎರಡು ಗೆಲುವಿನಿಂದ ಬೀಗುತ್ತಿರುವ ಆರ್​ಸಿಬಿ ಕೆಕೆಆರ್ ವಿರುದ್ದ ಗೆಲ್ಲುವ ಮೂಲಕ ಹ್ಯಾಟ್ರಿಕ್ ವಿಜಯ ಸಾಧಿಸುವ ವಿಶ್ವಾಸದಲ್ಲಿದೆ. ಅತ್ತ ಮುಂಬೈ ವಿರುದ್ದ 10 ರನ್​ಗಳಿಂದ ಸೋತ ಕೆಕೆಆರ್ ಆರ್​ಸಿಬಿ ವಿರುದ್ದ ಗೆಲ್ಲುವ ಮೂಲಕ ಜಯದ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.

IPL 2021 Rcb vs Kkr playing 11: ಆರ್​ಸಿಬಿ ತಂಡದಲ್ಲಿ 1 ಬದಲಾವಣೆ: ಎರಡು ತಂಡಗಳು ಹೀಗಿವೆ

ಉಭಯ ತಂಡಗಳು ಇದುವರೆಗೆ 26 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್​ 14 ಬಾರಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ 12 ಬಾರಿ ವಿಜಯದ ನಗೆ ಬೀರಿದೆ. ಕೊನೆಯ 10 ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಆರ್​ಸಿಬಿ ಕೆಕೆಆರ್ ವಿರುದ್ದ ಕೇವಲ 3 ಬಾರಿ ಮಾತ್ರ ಗೆದ್ದಿದೆ. ಅಂದರೆ ಕೊಲ್ಕತ್ತಾ ಕೊನೆಯ 10 ಮುಖಾಮುಖಿಯಲ್ಲಿ 7 ಬಾರಿ ವಿಜಯ ಸಾಧಿಸಿದೆ. ಆದರೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಕೆಕೆಆರ್​ ವಿರುದ್ದ ಪಾರುಪತ್ಯ ಮೆರೆದಿತ್ತು ಎಂಬುದು ವಿಶೇಷ.



ಯುಎಇನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಕೆಕೆಆರ್ ವಿರುದ್ದ 82 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಮತ್ತೊಂದು ಪಂದ್ಯದಲ್ಲಿ 8 ವಿಕೆಟ್​ಗಳ ವಿಜಯ ತನ್ನದಾಗಿಸಿಕೊಂಡಿತ್ತು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ಆರ್​ಸಿಬಿ ಕಣಕ್ಕಿಳಿಯಲಿದೆ.
Published by: zahir
First published: April 18, 2021, 3:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories