RCB beat DC- ಭರತ್, ಮ್ಯಾಕ್ಸ್​ವೆಲ್ ಭರ್ಜರಿ ಆಟ; ಡೆಲ್ಲಿ ವಿರುದ್ಧ ಆರ್​ಸಿಬಿಗೆ ರೋಚಕ ಗೆಲುವು

IPL 2021, Match 56, Bangalore vs Delhi match at Dubai: ಗೆಲ್ಲಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ್ದ 165 ರನ್ ಗುರಿಯನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಕೆಎಸ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಆರ್​ಸಿಬಿಯ ಗೆಲುವಿನ ರೂವಾರಿ ಆದರು.

ಆರ್​ಸಿಬಿ

ಆರ್​ಸಿಬಿ

  • News18
  • Last Updated :
  • Share this:
    ದುಬೈ, ಅ. 8: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಇಂದಿನ ಪಂದ್ಯ ಬಹುತೇಕ ನಾಮಕಾವಸ್ತೆಯದ್ದಾಗಿದ್ದರೂ ಅನೇಕ ರೋಚಕತೆಯ ಹೂರಣವಂತೂ ಇತ್ತು. ಹಲವು ತಿರುವುಗಳು ಕೊನೆಯವರೆಗೂ ಕುತೂಹಲ ಕಾಯುವಂತೆ ಮಾಡಿದ್ದವು. ಗೆಲುವಿನ ಹೊಸ್ತಿಲಿಗೆ ಬಂದು ಇನ್ನೇನು ಆರ್​​ಸಿಬಿ ಎಡವುತ್ತದೆ ಎಂದುಕೊಳ್ಳುವಷ್ಟರಲ್ಲೇ ವೈಡ್ ಬಾಲ್ ಮತ್ತು ಕೆಎಸ್ ಭರತ್ ಅವರ ಕೊನೆಯ ಎಸೆತದ ಸಿಕ್ಸರ್ ಬೆಂಗಳೂರಿಗರಿಗೆ ರೋಚಕ ಗೆಲುವು ತಂದುಕೊಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲಲು ಒಡ್ಡಿದ 165 ರನ್ ಸವಾಲನ್ನ ಬೆಂಗಳೂರು ಕೊನೆಯ ಎಸೆತದಲ್ಲಿ ಮುಟ್ಟಿತು. ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ ಇವತ್ತಿನ ಪಂದ್ಯದ ಹೀರೋ ಎನಿಸಿದರು. ಅವರು ಅಜೇಯ 78 ರನ್ ಗಳಿಸಿ ಬೆಂಗಳೂರು ತಂಡವನ್ನ ಅಪಾಯದಿಂದ ಪಾರು ಮಾಡಿದ್ದಲ್ಲದೇ ಗೆಲುವಿನ ದಡ ಮುಟ್ಟಿಸಿದರು.

    ಗ್ಲೆನ್ ಮ್ಯಾಕ್ಸ್​ವೆಲ್ ತಮ್ಮ ಸ್ಥಿರ ಪ್ರದರ್ಶನವನ್ನು ಇಂದೂ ಮುಂದುವರಿಸಿದರು. ಭರತ್ 52 ಬಾಲ್​ನಲ್ಲಿ ಅಜೇಯ 78 ರನ್ ಭಾರಿಸಿದರೆ, ಮ್ಯಾಕ್ಸ್​ವೆಲ್ 33 ಬಾಲ್​ನಲ್ಲಿ ಅಜೇಯ 51 ರನ್ ಗಳಿಸಿದರು. ಇಬ್ಬರೂ ನಾಲ್ಕನೇ ವಿಕೆಟ್​ಗೆ 10.3 ಓವರ್​ನಲ್ಲಿ 111 ರನ್​ಗಳ ಮುರಿಯದ ಜೊತೆಯಾಟ ಆಡಿದರು. ಕೇವಲ 6 ರನ್​ಗೆ 2 ವಿಕೆಟ್ ಬಿದ್ದಾಗ ಕ್ರೀಸ್​ಗೆ ಬಂದ ಕೆಎಸ್ ಭರತ್ ನಿಜಕ್ಕೂ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಅವರು ಮತ್ತು ಎಬಿ ಡೀವಿಲಿಯರ್ಸ್ 3ನೇ ವಿಕೆಟ್​ಗೆ 49 ರನ್ ಜೊತೆಯಾಟ ಆಡಿ ಚೇತರಿಕೆ ನೀಡಿದರು. ಎಬಿಡಿ ಔಟಾದ ಬಳಿಕ ಮ್ಯಾಕ್ಸ್​ವೆಲ್ ಮತ್ತು ಭರತ್ ಕೊನೆಯವರೆಗೂ ಉಳಿದು ತಂಡವನ್ನ ಗೆಲುವಿನ ದಡ ಮುಟ್ಟಿಸಿದರು.
    SCHEDULE TIME TABLE:
    ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪೃಥ್ವಿ ಶಾ, ಶಿಖರ್ ಧವನ್ ಅರ್ಧಶತಕದ ಸಮೀಪ ಸ್ಕೋರ್ ಮಾಡಿದರು. ಇಬ್ಬರೂ ಮೊದಲ ವಿಕೆಟ್​ಗೆ 88 ರನ್ ಸೇರಿಸಿದರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮಯರ್ ಒಂದಷ್ಟು ರನ್ ಗಳಿಸಿ ತಂಡದ ಸ್ಕೋರು 164 ರನ್​ಗೆ ಉಬ್ಬುವಂತೆ ಮಾಡಿದರು. ಆದರೆ, ಬೆಂಗಳೂರಿಗರು ಈ ಸ್ಕೋರನ್ನ ಯಶಸ್ವಿಯಾಗಿ ಬೆನ್ನತ್ತಿದರು.

    ಇದನ್ನೂ ಓದಿ: MI vs SRH- ಮುಂಬೈ ದಾಖಲೆ ಮೊತ್ತ ಗಳಿಸಿ ಗೆದ್ದರೂ ಪ್ಲೇ ಆಫ್ ರೇಸ್​ನಿಂದ ಔಟ್

    ಬೆಂಗಳೂರು ತಂಡ ಈ ಗೆಲುವಿನ ಬಳಿಕ 18 ಅಂಕಗಳೊಂದಿಗೆ ಲೀಗ್ ವ್ಯವಹಾರ ಮುಗಿಸಿತು. ಡೆಲ್ಲಿ ತಂಡ 20 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಇದೆ. ಚೆನ್ನೈ ತಂಡ 18 ಅಂಕಗಳನ್ನ ಹೊಂದಿದೆ. ಆದರೆ ಉತ್ತಮ ರನ್ ರೇಟ್ ಕಾರಣದಿಂದ ಎರಡನೇ ಸ್ಥಾನದಲ್ಲಿದೆ. ಈಗ ಬೆಂಗಳೂರು ಮತ್ತು ಕೋಲ್ಕತಾ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಆಡಲಿವೆ. ಮೊದಲೆರಡು ಸ್ಥಾನ ಪಡೆದ ಡೆಲ್ಲಿ ಮತ್ತು ಚೆನ್ನೈ ತಂಡ ಭಾನುವಾರ ಮೊದಲ ಕ್ವಾಲಿಫೈಯರ್​ನಲ್ಲಿ ಆಡಲಿವೆ.

    ಇದನ್ನೂ ಓದಿ: Ishan Fastest Fifty- 32 ಬಾಲ್​ನಲ್ಲಿ 84 ರನ್ ಚಚ್ಚಿದ ಇಶಾನ್ ಕಿಶನ್; ಫಾರ್ಮ್​ಗೆ ಮರಳಿದ ಸೂರ್ಯಕುಮಾರ್

    ತಂಡಗಳು:

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಕೆಎಸ್ ಭರತ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡೀವಿಲಿಯರ್ಸ್, ಡೇನಿಯಲ್ ಕ್ರಿಸ್ಟಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಯುಜವೇಂದ್ರ ಚಹಲ್, ಮೊಹಮ್ಮದ್ ಸಿರಾಜ್.

    ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರಿಪಲ್ ಪಟೇಲ್, ಶಿಮ್ರೋನ್ ಹೆಟ್ಮೆಯರ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಡ, ಅವೇಶ್ ಖಾನ್, ಆನ್ರಿಕ್ ನೋರ್ಟಿಯಾ.

    ಸ್ಕೋರು ವಿವರ:

    ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ 164/5
    (ಪೃಥ್ವಿ ಶಾ 48, ಶಿಖರ್ ಧವನ್ 43, ಶಿಮ್ರಾನ್ ಹೆಟ್ಮಯರ್ 29, ಶ್ರೇಯಸ್ ಅಯ್ಯರ್ 18 ರನ್ – ಮೊಹಮ್ಮದ್ ಸಿರಾಜ್ 25/2)

    ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ 166/3
    (ಕೆಎಸ್ ಭರತ್ ಅಜೇಯ 78, ಗ್ಲೆನ್ ಮ್ಯಾಕ್ಸ್​ವೆಲ್ ಅಜೇಯ 51, ಎಬಿ ಡೀವಿಲಿಯರ್ಸ್ ಅಜೇಯ 51 ರನ್ – ಆನ್ರಿಕ್ ನೋರ್ಟಿಯಾ 24/2)
    Published by:Vijayasarthy SN
    First published: