• ಹೋಂ
  • »
  • ನ್ಯೂಸ್
  • »
  • IPL
  • »
  • IPL 2023: ಲಕ್ನೋ ತಂಡದ ವಿರುದ್ಧ ರೋಚಕ ಜಯ ಸಾಧಿಸಿದ ಆರ್‌ಸಿಬಿ ತಂಡ! ವಿರಾಟ್​ ಮತ್ತು ಗಂಭೀರ್ ಜಗಳಕ್ಕೆ ಕಾರಣವೇನು?

IPL 2023: ಲಕ್ನೋ ತಂಡದ ವಿರುದ್ಧ ರೋಚಕ ಜಯ ಸಾಧಿಸಿದ ಆರ್‌ಸಿಬಿ ತಂಡ! ವಿರಾಟ್​ ಮತ್ತು ಗಂಭೀರ್ ಜಗಳಕ್ಕೆ ಕಾರಣವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐಪಿಎಲ್ 2023ರ ಪಂದ್ಯಾಟ ಭಾರೀ ಅಬ್ಬರದಿಂದ ನಡೆಯುತ್ತಿದೆ. ಈ ಮಧ್ಯೆ ಕಳೆದ ಸೋಮವಾರ ಮತ್ತು ಆರ್​ಸಿಬಿ ಮತ್ತು ಲಕ್ನೋ ನಡುವೆ ನಡೆದ ಪಂದ್ಯ ನೋಡುಗರಲ್ಲಿ ಭಾರೀ ಚರ್ಚೆಯನ್ನು ಸೃಷ್ಟಿಸಿದೆ.

  • Share this:

ಐಪಿಎಲ್ ಕ್ರಿಕೆಟ್ ಮ್ಯಾಚ್ (IPL Cricket Match) ಎಂದರೆ ಹೊಡಿ ಬಡಿ ಆಟ ಮತ್ತು ಅದರ ನಡುವೆ ಆಟಗಾರರಲ್ಲಿ ಗೆಲ್ಲಲೇಬೇಕು ಅನ್ನೋ ಹಠ ಹೆಚ್ಚಾದಾಗ ಮತ್ತು ಒತ್ತಡದ ಸಂದರ್ಭಗಳಲ್ಲಿ ಕೆಲವು ತಂಡಗಳ ಆಟಗಾರರು ಪರಸ್ಪರ ಮಾತಿನ ಚಕಮಕಿಗೆ ಇಳಿಯುವುದು ಸಹಜ. ಆದರೆ ಈ ಮಾತಿನ ಚಕಮಕಿ ದೊಡ್ಡ ಜಗಳದವರೆಗೆ ಹೋಗಿ ಜಂಟಲ್‌ಮ್ಯಾನ್ ಗಳ ಆಟವಾದ ಕ್ರಿಕೆಟ್ ನ ಒಂದು ಗೌರವಕ್ಕೆ ಧಕ್ಕೆ ಬರಬಾರದು. ಇದೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2023ರ (IPL 2023) ಟೂರ್ನಿಯಲ್ಲಿ ಲೀಗ್ ಪಂದ್ಯಗಳು ಕೊನೆ ಕೊನೆಗೆ ಬಂದಾಗ ತಂಡಗಳ ನಡುವೆ ಗೆಲ್ಲಲೇಬೇಕು ಎಂಬ ಹಠ ಜಾಸ್ತಿಯಾಗಿದೆ ಮತ್ತು ಆ ಕಿಚ್ಚು, ಜೋಶ್ ಮಾತಿನ ರೂಪದಲ್ಲಿ ಕೆಲವೊಮ್ಮೆ ಹೊರಬರುತ್ತಿದೆ.


ಈ ವಾರದ ಸೋಮವಾರದಂದು ನಡೆದ ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಸೋಲಿಸಿತು.


ಆದರೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿರುವುದು ವಿರಾಟ್ ಕೊಹ್ಲಿ ಮತ್ತು ಎಲ್ಎಸ್‌ಜಿ ತಂಡದ ಬೌಲರ್ ನವೀನ್-ಉಲ್-ಹಕ್ ಮತ್ತು ತಂಡದ ಮೆಂಟರ್ ಆದ ಗೌತಮ್ ಗಂಭೀರ್ ನಡುವಿನ ವಾಗ್ವಾದ ಮತ್ತು ಜಗಳ.


ವಿರಾಟ್ ಮತ್ತು ಗೌತಮ್ ನಡುವೆ ಮತ್ತೆ ಜಗಳ


ಈ ಇಬ್ಬರು ಆಟಗಾರರ ಮಧ್ಯೆ ನಡೆಯುತ್ತಿರುವ ವಾಗ್ವಾದ ಮತ್ತು ಜಗಳ ನಿನ್ನೆ ಮೊನ್ನೆಯದಲ್ಲ, ಸುಮಾರು 10 ವರ್ಷಗಳು ಹಳೆಯದು. ಹೌದು.. ಗೌತಮ್ ಗಂಭೀರ್ 10 ವರ್ಷಗಳ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾಗ ಆದ ಜಗಳವನ್ನು ಮತ್ತೆ ನಿನ್ನೆಯ ಪಂದ್ಯ ನೆನಪಿಸಿತು ನೋಡಿ.


ಇದನ್ನೂ ಓದಿ: ಹಾಲಿ ಚಾಂಪಿಯನ್ಸ್​ ಟೈಟನ್ಸ್​ಗೆ ತವರಿನಲ್ಲೇ ಮುಖಭಂಗ! ಡೆಲ್ಲಿಗೆ ರೋಚಕ ಗೆಲುವು ತಂದುಕೊಟ್ಟ ಇಶಾಂತ್​


ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ನವೀನ್-ಉಲ್-ಹಕ್ ಮತ್ತು ಕೊಹ್ಲಿ ನಡುವೆ ಲಕ್ನೋ ತಂಡದ ಬ್ಯಾಟಿಂಗ್ ನ 17ನೇ ಓವರ್ ನಲ್ಲಿ ಮಾತಿನ ಚಕಮಕಿ ನಡೆದು, ದೊಡ್ಡ ಜಗಳಕ್ಕೆ ಬದಲಾಗುವ ಮುಂಚೆ ಅಲ್ಲಿಯೇ ಕ್ರೀಸ್ ನಲ್ಲಿದ್ದ ಅಮಿತ್ ಮಿಶ್ರಾ ಮತ್ತು ಅಂಪೈರ್ ಗಳು ವಿರಾಟ್ ಅವರನ್ನು ಸಮಾಧಾನ ಮಾಡಿದರು.


ನಂತರ ಪಂದ್ಯ ಮುಗಿದಾಗ ವಿರಾಟ್ ಮತ್ತು ನವೀನ್ ಮಧ್ಯೆ ಮತ್ತೆ ಮಾತಿನ ಚಕಮಕಿ ಶುರುವಾಯ್ತು. ಈ ಹಂತದಲ್ಲಿ ಗೌತಮ್ ಗಂಭೀರ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು, ಆದರೆ ಶೀಘ್ರದಲ್ಲಿಯೇ ಅದು ಕೊಹ್ಲಿ ಮತ್ತು ಗಂಭೀರ್ ನಡುವಿನ ಜಗಳವಾಗಿ ಬದಲಾಯಿತು.


ವಿರಾಟ್​ ಕೊಹ್ಲಿ ಮತ್ತು ಗೌತಮ್ ಗಂಭೀರ್


ನಂತರ ಲಕ್ನೋ ತಂಡದ ಆಟಗಾರರು ಗಂಭೀರ್ ಅವರನ್ನು ದೂರ ಎಳೆಯಲು ಪ್ರಯತ್ನಿಸಿದರು. ಆದರೆ ಭಾರತದ ಇಬ್ಬರು ಆಟಗಾರರು ಪರಸ್ಪರ ವಾಗ್ವಾದಕ್ಕೆ ಇಳಿದಾಗ ಕೊಹ್ಲಿ ಕೆಲವು ಶಾಂತ ಮಾತುಗಳಿಂದ ಜಗಳವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವಂತೆ ತೋರಿತು. ಆದರೆ ಅದು ಗಂಭೀರ್ ಅವರನ್ನು ಸಮಾಧಾನಪಡಿಸಲು ವಿಫಲವಾಯಿತು. ಆಗ ಎಲ್ಎಸ್‌ಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.


ಅಭಿಮಾನಿಗಳತ್ತ ಕೈ ಮಾಡಿ ಏನಂದ್ರು ನೋಡಿ ವಿರಾಟ್ ಕೊಹ್ಲಿ


ಆರ್‌ಸಿಬಿ ತಂಡವು ಗಳಿಸಿದ 126 ರನ್ ಗಳನ್ನು ಗಳಿಸುವಲ್ಲಿ ಇನ್ನೂ 18 ರನ್ ಗಳು ಬಾಕಿ ಇರುವಾಗ ಬ್ಯಾಟರ್ ಕೃನಾಲ್ ಪಾಂಡ್ಯ ಜೋರಾಗಿ ಹೊಡೆದ ಬಾಲ್ ನೇರವಾಗಿ ವಿರಾಟ್ ಕೊಹ್ಲಿ ಅವರ ಕೈಗೆ ಸೇರಿತು. ಕ್ಯಾಚ್ ಹಿಡಿದ ಕೊಹ್ಲಿ ಪ್ರೇಕ್ಷಕರ ಕಡೆಗೆ ತಿರುಗಿ 'ಮೌನ' ವಾಗಿರುವ ಸನ್ನೆ ಮಾಡಿದರು.
ಈ ಋತುವಿನ ಆರಂಭದಲ್ಲಿ ಉಭಯ ತಂಡಗಳ ನಡುವಿನ ಹಿಂದಿನ ಪಂದ್ಯದಲ್ಲಿ, ಬೆಂಗಳೂರಿನಲ್ಲಿ ನಡೆದ ಪಂದ್ಯದ ಕೊನೆಯ ಎಸೆತದಲ್ಲಿ ಎಲ್ಎಸ್‌ಜಿ ತಂಡ ರೋಮಾಂಚಕ ಸ್ಪರ್ಧೆಯಲ್ಲಿ ಗೆದ್ದಿತು ಎಂಬುದನ್ನು ಮರೆಯಬಾರದು. ಪಂದ್ಯದ ನಂತರ, ಗಂಭೀರ್ ಪ್ರೇಕ್ಷಕರ ಕಡೆಗೆ ತಿರುಗಿ ಸ್ವಲ್ಪ ಮೌನವಾಗಿರಲು ಸನ್ನೆ ಮಾಡಿದ್ದರು, ಇದು

top videos
    First published: