IPL

  • associate partner

Suryakumar Yadav: ವಿರಾಟ್​ ಕೊಹ್ಲಿಯಿಂದ ಸೂರ್ಯಕುಮಾರ್​ ಯಾದವ್ ನಿಂದನೆ ?; ಫೀಲ್ಡ್​ನಲ್ಲೇ ಉತ್ತರ ಕೊಟ್ಟ ಯುವ ಆಟಗಾರ

ನಿನ್ನ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಗೆಲುವಿನ ರುವಾರಿ ಸೂರ್ಯ ಕುಮಾರ್​ ಯಾದವ್​. 49 ಬಾಲ್​ಗಳಲ್ಲಿ 79 ರನ್​ ಸಿಡಿಸಿದ್ದರು. ಪಂದ್ಯ ನಡೆಯುವ ವೇಳೆ ನಡೆದ ಘಟನೆ ಒಂದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

news18-kannada
Updated:October 29, 2020, 12:49 PM IST
Suryakumar Yadav: ವಿರಾಟ್​ ಕೊಹ್ಲಿಯಿಂದ ಸೂರ್ಯಕುಮಾರ್​ ಯಾದವ್ ನಿಂದನೆ ?; ಫೀಲ್ಡ್​ನಲ್ಲೇ ಉತ್ತರ ಕೊಟ್ಟ ಯುವ ಆಟಗಾರ
RCB skipper Virat Kohli
  • Share this:
ಮುಂಬೈ ಇಂಡಿಯನ್ಸ್​ ತಂಡದ ಆಟಗಾರ ಸೂರ್ಯಕುಮಾರ್​ ಯಾದವ್​​ಗೆ ಆಸ್ಟ್ರೇಲಿಯಾ ಟೂರ್​ನಲ್ಲಿ ಟೀಂ ಇಂಡಿಯಾಗೆ ಆಯ್ಕೆ ಆಗದೆ ಇರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆಯ್ಕೆ ಸಮಿತಿಯಲ್ಲಿ ಒಬ್ಬರಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಸೂರ್ಯ ಕುಮಾರ್​ ಅವರಿಗೆ ಅವಕಾಶ ನೀಡುವಂತೆ ಬಿಸಿಸಿಐಗೆ ಹೇಳಬಹುದಿತ್ತು ಎಂದು ಅನೇಕರು ಒತ್ತಾಯಿಸಿದ್ದಾರೆ. ಹೀಗಿರುವಾಗಲೇ ನಿನ್ನೆಯ ಪಂದ್ಯದಲ್ಲಿ ಸೂರ್ಯ ಕುಮಾರ್​ ಯಾದವ್​ ಆರ್​ಸಿಬಿ ವಿರುದ್ಧ ಅಬ್ಬರಿಸಿದ್ದಾರೆ. ಈ ವೇಳೆ ವಿರಾಟ್​ ಕೊಹ್ಲಿ, ಸೂರ್ಯ ಕುಮಾರ್​ ಯಾದವ್​ ಅವರನ್ನು ನಿಂದಿಸಿರುವ ವಿಡಿಯೋ ಒಂದು ವೈರಲ್​ ಆಗಿದೆ.

ನಿನ್ನ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಗೆಲುವಿನ ರುವಾರಿ ಸೂರ್ಯ ಕುಮಾರ್​ ಯಾದವ್​. 49 ಬಾಲ್​ಗಳಲ್ಲಿ 79 ರನ್​ ಸಿಡಿಸಿದ್ದರು. ಟೀಂ ಇಂಡಿಯಾಗೆ ಆಯ್ಕೆ ಮಾಡಿಕೊಳ್ಳದಿರುವುದಕ್ಕೆ ಸಿಟ್ಟಾಗಿರುವ ಸೂರ್ಯ ಕುಮಾರ್​ ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಈ ಮೂಲಕ ಅವರು ತಮ್ಮ ಟ್ಯಾಲೆಂಟ್​ ತೋರಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಹೀಗಿರುವಾಗಲೇ ವಿರಾಟ್​ ಕೊಹ್ಲಿ ಸ್ಪೋರ್ಟ್​​ಮೆನ್​ಶಿಪ್​ ಮರೆತು ಸೂರ್ಯ ಕುಮಾರ್​ ಅವರನ್ನು ನಿಂದಿಸಿರುವ ವಿಡಿಯೋ ಹರಿದಾಡಿದೆ.

ಸೂರ್ಯ ಕುಮಾರ್​ ಹೊಡೆದ ಬಾಲ್​ ವಿರಾಟ್​ ಕೈ ಸೇರಿತ್ತು. ಈ ವೇಳೆ ಬಾಲ್​ ಹಿಡಿದ ವಿರಾಟ್​ ಅದನ್ನು ಕೀಪರ್​ ಬಳಿ ಎಸೆದಿದ್ದಾರೆ. ಅಲ್ಲದೆ, ಸಿಟ್ಟಿನಿಂದ ಏನನ್ನೋ ಹೇಳಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಕೊಹ್ಲಿ, ಸೂರ್ಯ ಕುಮಾರ್​ ಅವರನ್ನು ನಿಂದಿಸಿದ್ದಾರೆ ಎಂದಿದ್ದಾರೆ.



ಅಲ್ಲದೆ, ಮತ್ತೊಂದು ಸಂದರ್ಭದಲ್ಲಿ ಸೂರ್ಯ ಕುಮಾರ್​ ಯಾದವ್​ ಬಳಿ ಕೊಹ್ಲಿ ಮಾತನಾಡಲು ಬಂದಿದ್ದಾರೆ. ಆದರೆ, ಇದನ್ನು ಕಿವಿಯ ಮೇಲೆ ಹಾಕಿಕೊಳ್ಳದ ಸೂರ್ಯ ಕುಮಾರ್​ ಅಲ್ಲಿಂದ ನಡೆದಿದ್ದಾರೆ. ಈ ವಿಡಿಯೋ ನೋಡಿದ ಅನೇಕರು, ಸೂರ್ಯ ಕುಮಾರ್​ ಅವರ ಆಟಿಟ್ಯೂಡ್​ಗೊಂದು ದೊಡ್ಡ ಸಲಾಂ ಎಂದಿದ್ದಾರೆ.









ಸೂರ್ಯಕುಮಾರ್​ ಯಾದವ್​ ರಿಯಾಕ್ಷನ್
Published by: Rajesh Duggumane
First published: October 29, 2020, 12:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading