HOME » NEWS » Ipl » RCB SET TO DON BLUE JERSEY FOR AN UPCOMING MATCH IPL 2021 HG

ಬ್ಲೂ ಜೆರ್ಸಿಯಲ್ಲಿ ಮಿಂಚಲಿದೆ RCB: ಕಾರಣ ಕೇಳಿದ್ರೆ ಹೆಮ್ಮೆ ಅನ್ಸುತ್ತೆ!

Royal challengers bangalore: ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೂ ಕಾರ್ಯನಿರ್ವಹಿಸುತ್ತಿರುವ  ಫ್ರಂಟ್​ಲೈನ್​ ವರ್ಕರ್​ಗಳಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಕೊಹ್ಲಿ ತಂಡ ತನ್ನ ನೀಲಿ ಜರ್ಸಿಯನ್ನು ಧರಿಸುವುದಾಗಿ ತಿಳಿಸಿದ್ದಾರೆ.

news18-kannada
Updated:May 2, 2021, 3:17 PM IST
ಬ್ಲೂ ಜೆರ್ಸಿಯಲ್ಲಿ ಮಿಂಚಲಿದೆ RCB: ಕಾರಣ ಕೇಳಿದ್ರೆ ಹೆಮ್ಮೆ ಅನ್ಸುತ್ತೆ!
ನೀಲಿ ಜೆರ್ಸಿ ಧರಿಸಿರುವ ಕೊಹ್ಲಿ
  • Share this:
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ  ಮುಂಬರುವ ಆಟಕ್ಕೆ ನೀಲಿ ಜೆರ್ಸಿಯನ್ನು ಧರಿಸಿ ಆಟವಾಡಲಿದ್ದೇವೆ ಎಂದು ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೂ ಕಾರ್ಯನಿರ್ವಹಿಸುತ್ತಿರುವ  ಫ್ರಂಟ್​ಲೈನ್​ ವರ್ಕರ್​ಗಳಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಕೊಹ್ಲಿ ತಂಡ ತನ್ನ ನೀಲಿ ಜೆರ್ಸಿಯನ್ನು ಧರಿಸುವುದಾಗಿ ತಿಳಿಸಿದ್ದಾರೆ.

ಕಾರ್ಮಿಕರು ಕಳೆದ ವರ್ಷದಿಂದ ಪಿಪಿಇ ಕಿಟ್​ಗಳನ್ನು ಧರಿಸಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ. ಇದನ್ನು ಗಮನಿಸಿ ಅವರಿಗೆ ಗೌರವ ಸೂಚಿಸಲು ಆರ್​ಸಿಬಿ ತಂಡ ಈ ಚಿಂತನೆ ನಡೆಸಿದೆ. ಅದರ ಜೊತೆಗೆ ಆರ್​ಸಿಬಿ ನೆರವು ನೀಡಲು ಮುಂದಾಗಿದೆ.

ನೀಲಿ ಜೆರ್ಸಿ ಧರಿಸಲಿರುವ ಕೊಹ್ಲಿ ಟೀಂ:

ಆರ್​ಸಿಬಿ ತಂಡ ಕೆಂಪು ಜೆರ್ಸಿಯ ಬದಲಿಗೆ ನೀಲಿ ಮತ್ತು ಕಪ್ಪು ಬಣ್ಣದ ಜೆರ್ಸಿ ಧರಿಸುವ ಬಗ್ಗೆ ಕೊಹ್ಲಿ ಆರ್​ಸಿಬಿ ಟ್ವಿಟ್ಟರ್​ ಖಾತೆಯಲ್ಲಿ ಹರಿಯ ಬಿಟ್ಟ ವಿಡಿಯೋದಲ್ಲಿ ಹೇಳಿದ್ದಾರೆ. ಇನ್ನು ನೀಲಿ ಜೆರ್ಸಿಯಲ್ಲಿ ಪ್ರಮುಖ ಆರೋಗ್ಯ ಸಂದೇಶಗಳನ್ನು ಬರೆಯಲಾಗಿದೆ. ಅದರ ಜೊತೆಗೆ ಕೊಹ್ಲಿ ಭಾರತೀಯ ನಾಗರಿಕರು ಲಸಿಕೆ ಹಾಕುವಂತೆ ಹೇಳಿದ್ದಾರೆ.
ರಾಜಸ್ಥಾನ್ ರಾಯಲ್ಸ್​

ಕೆಲವು ದಿನಗಳ ಹಿಂದೆ ರಾಜಸ್ಥಾನ್​ ರಾಯಲ್ಸ್​ ತಂಡ ಕೂಡ ಕೊರೋನಾ ವಿರುದ್ಧ ಹೋರಾಟ ಮಾಡುವವರಿಗಾಗಿ 7.5 ಕೋಟಿ ರೂ ನಿಡುವ ಮೂಲಕ ಸಹಾಯ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್​

ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ದೆಹಲಿ ಮೂಲದ ಎಸ್​ಸಿಆರ್​ ಎನ್​ಜಿಒವೊಂದಕ್ಕೆ 5 ಕೋಟಿ ರೂ ನೀಡುವ ಮೂಲಕ ಸಹಾಯ ಹಸ್ತ ಮೆರೆದಿದೆ.ಇನ್ನು ಐಪಿಎಲ್ ಪಂದ್ಯದಲ್ಲಿ ಭಾಗವಹಿಸಿದ್ದ ಪ್ಯಾಟ್​ ಕಮಿನ್ಸ್​ ಕೂಡ 50 ಸಾವಿರ ದೇಣಿಗೆ ನೀಡಿದ್ದಾರೆ. ಮಾಜಿ ಕ್ರಿಕೆಟಿಗ ಬ್ರೆಟ್​​ ಲಿ ಕೂಡ 1 ಬಿಟ್​ ಕಾಯಿನ್​ (ಅಂದಾಜು 42 ಲಕ್ಷ) ದಾನ ಮಾಡಲು ನಿರ್ಧರಿಸಿದ್ದಾರೆ. ಅಂತೆಯೇ ಪಂಜಾಬ್​ ಕಿಂಗ್ಸ್​ ಬ್ಯಾಟ್ಸ್​ಮನ್​ ನಿಕೊಲಸ್​ ಪೂರನ್​​ ಕೂಡ ಐಪಿಎಲ್​ ಸಂಬಳದಲ್ಲಿ ಒಂದು ಭಾಗವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ.
Published by: Harshith AS
First published: May 2, 2021, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories