IPL

  • associate partner

Devdutt Padikkal: RCB ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್​ಗೆ ಲೇ ಮಗನೆ ಅಂದ ಮಿಸ್ಟರ್ ನ್ಯಾಗ್ಸ್!

ದ್ಯಾನಿಶ್​ ಸೇಟ್​ ಆರ್​ಸಿಬಿ ತಂಡದ ಜೊತೆ ಯುಎಇಗೆ ತೆರಳಿದ್ದಾರೆ. ತಂಡಕ್ಕೆ ಎಂಟರ್​ಟೇನ್​ಮೆಂಟ್​ ನೀಡುವುದರ ಜೊತೆಗೆ ಅಭಿಮಾನಿಗಳಿಗೂ ಖುಷಿ ನೀಡುತ್ತಿದ್ದಾರೆ.

news18-kannada
Updated:September 27, 2020, 11:26 AM IST
Devdutt Padikkal: RCB ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್​ಗೆ ಲೇ ಮಗನೆ ಅಂದ ಮಿಸ್ಟರ್ ನ್ಯಾಗ್ಸ್!
ದ್ಯಾನಿಶ್​-ದೇವದತ್
  • Share this:
ದೇವದತ್​ ಪಡಿಕ್ಕಲ್​ ಆರ್​ಸಿಬಿಯಲ್ಲಿರುವ ಏಕೈಕ ಕನ್ನಡಿಗ. ಈ ಮೊದಲು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ರನ್​ ಹೊಳೆಯನ್ನೇ ಹರಿಸಿದ್ದ ಅವರು, ಈಗ ಐಪಿಎಲ್​ಗೆ ಪದಾರ್ಪಣೆ ಮಾಡಿ ಜಾದೂ ಮಾಡಿದ್ದಾರೆ. ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಮಧ್ಯೆ, ಆರ್​ಸಿಬಿ ಇನ್​​ಸೈಡರ್​ ಮಿಸ್ಟರ್​ ನ್ಯಾಗ್ಸ್​ ಅಲಿಯಾಸ್​ ದ್ಯಾನಿಶ್​ ಸೇಟ್​, ದೇವದತ್​ಗೆ ಲೇ ಮಗನೆ ಅಂದಿರೋ ವಿಡಿಯೋ ವೈರಲ್​ ಆಗಿದೆ! ಅಷ್ಟಕ್ಕೂ ದ್ಯಾನಿಶ್ ಹೀಗೆ ಹೇಳಿದ್ದೇಕೆ ಎಂಬುದಕ್ಕೆ ಇಲ್ಲಿದೆ ಉತ್ತರ.

ದ್ಯಾನಿಶ್​ ಸೇಟ್​ ಆರ್​ಸಿಬಿ ತಂಡದ ಜೊತೆ ಯುಎಇಗೆ ತೆರಳಿದ್ದಾರೆ. ತಂಡಕ್ಕೆ ಎಂಟರ್​ಟೇನ್​ಮೆಂಟ್​ ನೀಡುವುದರ ಜೊತೆಗೆ ಅಭಿಮಾನಿಗಳಿಗೂ ಖುಷಿ ನೀಡುತ್ತಿದ್ದಾರೆ. ಇತ್ತೀಚೆಗೆ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಹಾಗೂ ಬೆಂಗಳೂರು ತಂಡದ ಪ್ರಮುಖ ಆಟಾಗರ ಎಬಿ ಡಿವಿಲಿರ್ಯಸ್​ ಜೊತೆ ಚಿಟ್​ ಚ್ಯಾಟ್​ ನಡೆಸಿದ್ದರು. ಈಗ ದೇವದತ್​ ಪಡಿಕ್ಕಲ್​ ಹಾಗೂ ಪಂಜಾಬ್​ ಮೂಲದ ಗುರ್​ಕೀರತ್​ ಜೊತೆ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ.

‘ನನ್ನನ್ನು ಮನೆಗೆ ಕರೀತೀರಾ?’ ಎಂದು ದ್ಯಾನಿಶ್​, ಗುರ್​ಕೀರತ್​ ಬಳಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಗುರ್​ಕೀರತ್​, ‘ಅಯ್ಯೋ, ನೀವು ಪಂಜಾಬ್​ಗೆ ಬಂದಾಗೆಲ್ಲ ನಮ್ಮ ಮನೆಗೆ ಬರಬಹುದು’ ಎಂದು ಆಹ್ವಾನ ನೀಡಿದರು. ನಂತರ ಇದೇ ಪ್ರಶ್ನೆಯನ್ನು ದೇವದತ್​ ಎದುರು ಕೂಡ ಇಡಲಾಯಿತು. ಇದಕ್ಕೆ ಉತ್ತರಿಸಿದ ದೇವದತ್​, ‘ನೀವು ಬರಹುದು ಅಂದುಕೊಳ್ತೀನಿ’ ಎಂದಿದ್ದಾರೆ. ಈ ವೇಳೆ ದ್ಯಾನಿಶ್​, ‘ಲೇ ಮಗನೆ, ನೀನು ಬೆಂಗಳೂರಲ್ಲೇ ಇರೋದು. ನೀನು ಕರೆದಿಲ್ಲವೆಂದರೂ ನಾನು ಮನೆಗೆ ಬರ್ತೀನಿ’ ಎಂದಿದ್ದಾರೆ.ಮಿಸ್ಟರ್​ ನ್ಯಾಗ್ಸ್​ ಜೊತೆ ದೇವದತ್​ ಸಂದರ್ಶನ
Published by: Rajesh Duggumane
First published: September 27, 2020, 11:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading