RCB- ಚೆನ್ನೈಯನ್ನ ಹಿಂದಿಕ್ಕಲು ಡೆಲ್ಲಿ ವಿರುದ್ಧ ಆರ್ಸಿಬಿ ಎಷ್ಟು ಅಂತರದಲ್ಲಿ ಗೆಲ್ಲಬೇಕು?
Net Run Rate Calculation- ಆರ್ಸಿಬಿ ಸರಾಸರಿ ನೆಟ್ ರನ್ ರೇಟ್ ಮೈನಸ್ 0.159 ಇದೆ. ಚೆನ್ನೈನ +0.455 ರನ್ ರೇಟ್ ದಾಟಲು ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕನಿಷ್ಠ 163 ರನ್ಗಳಿಂದ ಸೋಲಿಸಬೇಕು. ಆದರೆ, ಫೀಲ್ಡಿಂಗ್ ಆಯ್ದುಕೊಂಡು ಕೊಹ್ಲಿ ಆ ಅವಕಾಶದಿಂದ ವಂಚಿತರಾಗಿದ್ದಾರೆ.
ಗುರುವಾರದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ರೋಚಕ ಗೆಲುವು ಕಂಡಿರುವ ಪಂಜಾಬ್ ಕಿಂಗ್ಸ್ ಐಪಿಎಲ್ 2021ರ ಪಾಯಿಂಟ್ ಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪಡೆಯನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಜಂಪ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ (Punjab Kings (PBKS)) ಲೀಗ್ ಹಂತದ ಎಲ್ಲ 14 ಪಂದ್ಯಗಳನ್ನು ಆಡಿವೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB- Royal Challengers Bangalore) ತಂಡ ಇನ್ನೂ ಒಂದು ಪಂದ್ಯವನ್ನು ಆಡಬೇಕಿದೆ. ಈ ಪಂದ್ಯವನ್ನು ಭಾರೀ ಅಂತರದಿಂದ ಗೆದ್ರೆ ಕೊಹ್ಲಿ ಪಡೆ ಎರಡನೇ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ. ಆದರೆ, ಆರ್ಸಿಬಿ ಫೀಲ್ಡಿಂಗ್ ಆಯ್ದುಕೊಂಡು ಕ್ವಾಲಿಫಯರ್ಗೆ ಅರ್ಹತೆ ಗಿಟ್ಟಿಸುವ ಅವಕಾಶದಿಂದ ವಂಚಿತಗೊಂಡಿದೆ.
ಆರ್ಸಿಬಿ 163 ರನ್ ಗಳಿಸಲೇಬೇಕು? ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಲು ಬೆಂಗಳೂರು ತಂಡ 163 ರನ್ ಗಳ ಅಂತರದಿಂದ ಗೆಲ್ಲಬೇಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟ್ ಮಾಡಿ 200 ರನ್ ಗಳನ್ನು ಗಳಿಸಬೇಕಾಗುತ್ತದೆ. ಆದ್ರೆ ಐಪಿಎಲ್ ಇತಿಹಾಸದಲ್ಲಿಯೇ ಅತೀ ದೊಡ್ಡ ಅಂತರದ ಗೆಲುವು ಅಂದರೆ 146 ರನ್. 2017ರಲ್ಲಿ ದೆಹಲಿ ಕ್ಯಾಪ್ಟಿಲ್ಸ್ (ಅಂದಿನ ದೆಹಲಿ ಡೇರ್ ಡೆವಿಲ್ಸ್) ವಿರುದ್ಧ ಮುಂಬೈ ಇಂಡಿಯನ್ಸ್ 146 ರನ್ ಅಂತರದಿಂದ ಗೆಲುವು ದಾಖಲಿಸಿದ್ದೇ ಈವರೆಗಿನ ದಾಖಲೆಯಾಗಿದೆ. ಈಗ ಯುಎಇಯ ಸ್ಲೋ ಪಿಚ್ನಲ್ಲಿ ಅಷ್ಟು ದೊಡ್ಡ ಅಂತರದ ಗೆಲುವು ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲದೇ, ಆರ್ಸಿಬಿ ಮೊದಲು ಬ್ಯಾಟ್ ಮಾಡಿದ್ದರೆ ಮಾತ್ರ ನೆಟ್ ರನ್ ರೇಟ್ ಅಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ಅವಕಾಶ ಇತ್ತು. ಆದರೆ, ಆರ್ಸಿಬಿ ಫೀಲ್ಡಿಂಗ್ ಆಯ್ದುಕೊಂಡಿದ್ಧಾರೆ. ಹೀಗಾಗಿ, ಆರ್ಸಿಬಿ ಎರಡನೇ ಸ್ಥಾನಕ್ಕೆ ಪ್ರಯತ್ನಿಸಲು ಅಸಾಧ್ಯವಾದಂತಾಗಿದೆ.
ಅವಕಾಶ ಕಳೆದುಕೊಂಡ ಕೊಹ್ಲಿ ಪಡೆ:
ಗುರುವಾರ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರು ವಿಕೆಟ್ ಗಳ ಅಂತತದಲ್ಲಿ ಸೋತಿರುವ ಧೋನಿ ನಾಯಕತ್ವದ ಸಿಎಸ್ಕೆ +0.455 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನೊಂದು ಲೀಗ್ ಪಂದ್ಯ ಉಳಿಸಿಕೊಂಡಿರುವ ದೆಹಲಿ ಕ್ಯಾಪ್ಟಿಲ್ಸ್ +0.526 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿದ್ದರಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವ ಅವಕಾಶವನ್ನು ಕೊಹ್ಲಿ ಪಡೆ ಕಳೆದುಕೊಂಡಿತ್ತು.
POINTS TABLE:
ಪಾಯಿಂಟ್ಸ್ ಟೇಬಲ್ನ ಮೊದಲ ಎರಡು ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈರ್ಸ್ ಪಂದ್ಯ ಆಡಲಿವೆ. ಅದರಲ್ಲಿ ಗೆದ್ದ ತಂಡ ನೇರ ಫೈನಲ್ ಪ್ರವೇಶಿಸುತ್ತದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯ ಆಡಬೇಕು. ಈ ಎಲಿಮಿನೇಟರ್ ಪಂದ್ಯದ ವಿಜೇತರು ಕ್ವಾಲಿಫೈಯರ್-2 ಆಡುತ್ತಾರೆ. ಅದರಲ್ಲಿ ಮೊದಲ ಕ್ವಾಲಿಫಯರ್ನಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್ನಲ್ಲಿ ಗೆದ್ದ ತಂಡ ಮುಖಾಮುಖಿಯಾಗುತ್ತವೆ. ಅದರಲ್ಲಿ ಗೆದ್ದ ತಂಡ ಫೈನಲ್ ತಲುಪುತ್ತದೆ. ಒಂದು ವೇಳೆ ಮುಂದಿನ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಬರದಿದ್ದರೆ ಕೆಕೆಆರ್ ಜೊತೆ ಎಲಿಮಿನೇಟರ್ ಪಂದ್ಯದಲ್ಲಿ ಆಡಬೇಕಾಗುತ್ತದೆ.
ನೆಟ್ ರನ್ ರೇಟ್ ಲೆಕ್ಕ ಹಾಕುವ ಸರಳ ಸೂತ್ರ: ಎ ತಂಡದ NRR = ಎ ತಂಡದ ರನ್ ರೇಟ್ ಬಿ ತಂಡದ ರನ್ ರೇಟ್. ಅಂದರೆ, ಎ ತಂಡದ ರನ್ ರೇಟ್ = (ಎ ತಂಡ ಗಳಿಸಿದ ರನ್?ಗಳ ಮೊತ್ತ / ಎ ತಂಡ ಎದುರಿಸಿದ ಓವರ್ ಗಳು) ? (ಎ ತಂಡದ ವಿರುದ್ಧ ಎದುರಾಳಿ ತಂಡ ಗಳಿಸಿದ ರನ್ / ಎ ತಂಡ ಮಾಡಿದ ಓವರ್ ಗಳು). ಇದು ನೆಟ್ ರನ್ ರೇಟ್ ಲೆಕ್ಕ ಹಾಕುವ ಸರಳ ವಿಧಾನ. ಅಂದರೆ ಎದುರಾಳಿ ತಂಡದ ಸಾಧನೆ ಎದುರು ಈ ತಂಡದ ಸಾಧನೆ ಹೇಗಿದೆ ಎಂಬುದನ್ನು ಈ ಸೂತ್ರದಿಂದ ಲೆಕ್ಕ ಹಾಕಬಹುದು.
- ಮಹಮ್ಮದ್ ರಫೀಕ್ ಕೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ