ಕಿರಿಕ್ ಹುಡುಗಿ ರಶ್ಮಿಕಾರ ನೆಚ್ಚಿನ ಐಪಿಎಲ್ ಟೀಂ ಯಾವುದು ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬ ನಟಿ ರಶ್ಮಿಕಾರ ಬಳಿ ತಮ್ಮ ನೆಚ್ಚಿನ ಐಪಿಎಲ್​ ತಂಡ ಯಾವುದು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ರಶ್ಮಿಕಾ ಏನಂದ್ರು ಗೊತ್ತಾ?

ಡೇವಿಡ್​-ಕೊಹ್ಲಿ​

ಡೇವಿಡ್​-ಕೊಹ್ಲಿ​

 • Share this:
  ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ತಮ್ಮ ನೆಚ್ಚಿನ ಐಪಿಎಲ್​ ಟೀಂ ಬಗ್ಗೆ ಮಾತನಾಡಿದ್ದಾರೆ. ಕಿರಿಕ್​ ಪಾರ್ಟಿ ಮೂಲಕ ನಟನೆ ಪ್ರಾರಂಭಿಸಿದ ರಶ್ಮಿಕಾ ಆ ಬಳಿಕ ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾದತ್ತ ತೆರಳಿದರು ಮಾತ್ರವಲ್ಲದೆ, ಬೇರೆ ಇಂಡಸ್ಟ್ರಿಯಿಂದ ಹೆಚ್ಚಿನ ಆಫರ್​ ಗಿಟ್ಟಿಸಿಕೊಂಡರು. ಅಲ್ಲಿನ ಸಿನಿ ಪ್ರಿಯರ ಮನಗೆದ್ದರು.  ಆದರೀಗ ರಶ್ಮಿಕಾ  ತಮ್ಮ ನೆಚ್ಚಿನ ಐಪಿಎಲ್​ ತಂಡದ ಹೆಸರನ್ನು ಬಿಚ್ಚಿಟ್ಟಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬ ನಟಿ ರಶ್ಮಿಕಾರ ಬಳಿ ತಮ್ಮ ನೆಚ್ಚಿನ ಐಪಿಎಲ್​ ತಂಡ ಯಾವುದು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ನಟಿ ಈ ‘ಸಲ ಕಪ್​ ನಮ್ದೆ’ ಎಂದು ಹೇಳುತ್ತಾ ರಾಯಲ್​ ಚಾಲೆಂಜರ್ಸ್​ ತಂಡದ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಅವರು ಈ ವಿಡಿಯೋ ವೈರಲ್​ ಆಗಿದೆ. ಅನೇಕರು ರಶ್ಮಿಕಾ ಅವರ ವಿಡಿಯೋವನ್ನು ಷೇರ್​ ಮಾಡಿದ್ದಾರೆ. ಇಂಡಿಯನ್​ ಪ್ರಿಮಿಯರ್​ ಲೀಗ್​ನ 14ನೇ ಆವೃತ್ತಿ ನಡೆಯುತ್ತಿದ್ದು, ಮೊದಲ 4 ಪಂದ್ಯದಲ್ಲಿ ಸತತವಾಗಿ ಗೆಲ್ಲುವ ಮೂಲಕ ಪಾಯಿಂಟ್​ ಟೇಬಲ್​ನಲ್ಲಿ ನಂ1 ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಆ ಬಳಿಕ ಚೆನ್ನೈ ಜೊತೆಗಿನ 5ನೇ ಪಂದ್ಯದಲ್ಲಿ ಸೋಲು ಎದುರಿಸಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

  ಇಂದು ಅಹ್ಮದಾಬಾದ್​ನ ಮೋದಿ ಮೈದಾನದಲ್ಲಿ ಡೆಲ್ಲಿ ವಿರುದ್ಧ ಆರ್​ಸಿಬಿ ಸೆಣೆಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಸಾಧಿಸಿದರೆ ಮತ್ತೆ ಪಾಯಿಂಟ್​ ಟೇಬಲ್​ನಲ್ಲಿ ಬದಲಾವಣೆ ತರಲಿದೆ. ಜೊತೆಗೆ ಅಭಿಮಾನಿಗಳ ಖುಷಿ ದುಪ್ಪಟ್ಟಾಗಲಿದೆ.
  Published by:Harshith AS
  First published: