IPL 2021| ರಾಜಸ್ತಾನ ರಾಯಲ್ಸ್ ತಂಡದ ಬೇಜವಾಬ್ದಾರಿ ಬ್ಯಾಟಿಂಗ್ ಸಹಿಸಿಕೊಳ್ಳಲು ಸಾಧ್ಯವಿಲ್ಲ; ಕುಮಾರ್ ಸಂಗಕ್ಕಾರ

ಮೊದಲ 10 ಓವರ್​ಗಳಲ್ಲಿ ರನ್​ ಗತಿಯನ್ನು ಹೆಚ್ಚಿಸುವಂತಹ ಬ್ಯಾಟಿಂಗ್ ಅನ್ನು ಪ್ರದರ್ಶಿಸಬೇಕು. ಆದರೆ, ರಾಜಸ್ತಾನ ರಾಯಲ್ಸ್​ ಮೊದಲ 10 ಓವರ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಕೇವಲ 48 ರನ್ ಮಾತ್ರ ಗಳಿಸಿದ್ದು ತಂಡದ ಸೋಲಿಗೆ ಕಾರಣ ಎಂದು ಕುಮಾರ್ ಸಂಗಕ್ಕಾರ ತಿಳಿಸಿದ್ದಾರೆ.

ಕುಮಾರ್ ಸಂಗಕ್ಕಾರ.

ಕುಮಾರ್ ಸಂಗಕ್ಕಾರ.

 • Share this:
  ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ವಿರುದ್ದ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಕೇವಲ 155 ರನ್​ ಬೆನ್ನಟ್ಟಿದ ರಾಜಸ್ತಾನ ರಾಯಲ್ಸ್​ (Rajasthan Royals) ನಿಗದಿತ 20 ಓವರ್​ಗಳಿಗೆ ಕೇವಲ 121 ರನ್ ಗಳಿಸಲಷ್ಟೇ ಶಕ್ತವಾಗಿ 34 ರನ್​ಗಳಿಂದ ಸೋಲನ್ನು ಒಪ್ಪಿಕೊಂಡಿದೆ. ನಾಯಕ ಸಂಜು ಸ್ಯಾಮ್ಸನ್ (Sanju Samson) ಏಕಾಂಗಿಯಾಗಿ 70 ರನ್ ಬಾರಿಸಿ ಅಜೇಯರಾಗಿ ಉಳಿದರೆ, ಬೇರೆ ಯಾವ ಬ್ಯಾಟ್ಸ್​ಮನ್ ಸಹ ಎರಡಂಕಿ ದಾಟದೆ ಪೆವಿಲಿಯನ್ ಪೆರೇಡ್ ನಡೆಸಿದ್ದರು. ಪರಿಣಾಮ ರಾಜಸ್ತಾನ ರಾಯಲ್ಸ್​ ತಂಡ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ. ಈ ಸೋಲು ಸಾಮಾನ್ಯವಾಗಿ ತಂಡದ ಆಡಳಿತ ಮಂಡಳಿಯನ್ನೂ ಕೆರಳಿಸಿದೆ. ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿರುವ ಕುಮಾರ್ ಸಂಗಕ್ಕಾರ (Kumar sangakkara), "ರಾಜಸ್ತಾನ ರಾಯಲ್ಸ್ ತಂಡದ ಸೋಲಿಗೆ ಬ್ಯಾಟಿಂಗ್ ವಿಧಾನವೇ ಕಾರಣ. ಇಂತಹ ಬೇಜವಾಬ್ದಾರಿ ಮತ್ತು ಅಸಡ್ಡೆ ಬ್ಯಾಟಿಂಗ್ ಅನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ" ಎಂದು ಕಿಡಿಕಾರಿದ್ದಾರೆ.

  ರಾಜಸ್ತಾನ ತಂಡದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕುಮಾರ್ ಸಂಗಕ್ಕಾರ, "ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ ಮೊದಲ ಮೂರು ಓವರ್​ಗಳಲ್ಲಿ ಎರಡು ವಿಕೆಟ್​ ಕಳೆದುಕೊಂಡಿದ್ದರು. ಆದರೆ, ಅವರು ನಂತರ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಉತ್ತಮ ಮೊತ್ತವನ್ನು ಪೇರಿಸಿದ್ದರು. ಆದರೂ, 155 ಚೇಸ್ ಮಾಡಬಹುದಾದ ಮೊತ್ತು. ಆದರೆ, ರಾಜಸ್ತಾನ ತಂಡ ಅತ್ಯಂತ ಕಳಪೆ ಮತ್ತು ಅಸಡ್ಡೆಯ ಬ್ಯಾಟಿಂಗ್ ಪ್ರದರ್ಶಿಸಿದೆ.

  ಮೊದಲ 10 ಓವರ್​ಗಳಲ್ಲಿ ರನ್​ ಗತಿಯನ್ನು ಹೆಚ್ಚಿಸುವಂತಹ ಬ್ಯಾಟಿಂಗ್ ಅನ್ನು ಪ್ರದರ್ಶಿಸಬೇಕು. ಆದರೆ, ರಾಜಸ್ತಾನ ರಾಯಲ್ಸ್​ ಮೊದಲ 10 ಓವರ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಕೇವಲ 48 ರನ್ ಮಾತ್ರ ಗಳಿಸಿತ್ತು. ತಂಡದ ಸೋಲಿಗೆ ಇಂತಹ ಬೇಜವಾಬ್ದಾರಿ ಬ್ಯಾಟಿಂಗ್ ಕಾರಣ. ತಂಡದ ಕೆಳ ಮತ್ತು ಮಧ್ಯಮ ಕ್ರಮಾಂಕದ ಬಗ್ಗೆ ನನಗೆ ಹೆಚ್ಚು ಚಿಂತೆ ಇಲ್ಲ. ಆದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳಲ್ಲಿ ಸ್ಥಿರತೆ ಇಲ್ಲದ್ದು ತಲೆನೋವಾಗಿ ಪರಿಣಮಿಸಿದೆ.

  ನಾಯಕ ಸಂಜು ಸ್ಯಾಮ್ಸನ್ 53 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿದರು. ಆದರೆ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗಲಿಲ್ಲ. ಯಾವ ಬ್ಯಾಟ್ಸ್​ಮನ್​ಗಳು ಸಹ ಜವಾಬ್ದಾರಿಯುತ ಪ್ರದರ್ಶನ ನೀಡಲಿಲ್ಲ. ಈ ನಡುವೆ ಇವಾನ್ ಲೂಯಿಸ್​ ಮತ್ತು ಕ್ರಿಸ್​ ಮೋರಿಸ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರಲ್ಲದ್ದು ತಂಡದಲ್ಲಿ ಅಲ್ಪ ಬದಲಾವಣೆಗೆ ಕಾರಣವಾಗಿತ್ತು. ಈ ಬದಲಾವಣೆಗಳು ಸಹ ತಂಡದ ಸೋಲಿಗೆ ಕಾರಣವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.

  ಇದನ್ನೂ ಓದಿ: IPL 2021- ಇಂದು ಎರಡು ಬಿಗ್ ಮ್ಯಾಚ್; ಕೆಕೆಆರ್, ಆರ್​ಸಿಬಿ, ಮುಂಬೈಗೆ ಮಹತ್ವದ ಪಂದ್ಯಗಳು

  ಇದೇ ಸಂದರ್ಭದಲ್ಲಿ ಪಿಚ್ ಬಗ್ಗೆಯೂ ಮಾತನಾಡಿದ ಕುಮಾರ್ ಸಂಗಕ್ಕಾರ, "ಇಲ್ಲಿನ ಪಿಚ್ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ನಿಧಾನವಾಗಿದೆ. ದುಬೈ ಪಿಚ್​ಗಿಂತ ಬ್ಯಾಟಿಂಗ್​ಗೆ ಸಲ್ಪ ಕಠಿಣವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತಂಡದ ಬ್ಯಾಟಿಂಗ್ ಅನ್ನು ಮತ್ತಷ್ಟು ಬಲಪಡಿಸುವಲ್ಲಿ ಗಮನಹರಿಸಲಾಗುವುದು. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಾಗುವುದು" ಎಂದು ಅವರು ಭರವಸೆ ನೀಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: