ಮಹಿಳೆಯರ ಮುಟ್ಟಿನ ಬಗ್ಗೆ ಅರಿವಾಗಿದ್ದು ಹೇಗೆ? ಇಲ್ಲಿದೆ ನೋಡಿ ರಾಜಸ್ಥಾನ ರಾಯಲ್ಸ್​ ಆಟಗಾರರು ನೀಡಿದ ಉತ್ತರ

Rajasthan Royals Players: ಕುಟುಂಬದಲ್ಲಿ ಮುಕ್ತವಾಗಿ ಮಾತನಾಡದ ಈ ವಿಷಯಗಳು ಸಹೋದರಿ, ಗೆಳತಿಯಿಂದ ಹೇಗೆ ತಿಳಿಯಿತು ಎಂಬ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಈ ಕ್ರಿಕೆಟಿಗರು.

ರಾಜಸ್ಥಾನ ರಾಯಲ್ಸ್​ ಆಟಗಾರರು

ರಾಜಸ್ಥಾನ ರಾಯಲ್ಸ್​ ಆಟಗಾರರು

 • Share this:
  ಇಡೀ ದೇಶವೇ ಸದ್ಯ ಐಪಿಎಲ್​ ಗುಂಗುನಲ್ಲಿದೆ. ಕ್ರಿಕೆಟ್​ ಮೋಜು ಮಸ್ತಿ ಜೊತೆ ರಾಜಸ್ಥಾನ ರಾಯಲ್ಸ್​ ತಂಡದ ನಾಯಕರು  ಮಹಿಳೆಯರ ಮುಟ್ಟಿನಂತಹ ಗಂಭೀರ ವಿಚಾರ ಕುರಿತು ಮಾತನಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಕನ್ನಡಿಗ ರಾಬಿನ್​ ಉತ್ತಪ್ಪ ಅವರ ಪ್ರಶ್ನೆಗೆ ತಂಡದ ನಾಯಕರು ಕೂಡ ಯಾವುದೇ ಮುಜುಗರವಿಲ್ಲದೇ  ಮಾತನಾಡಿ ಮೆಚ್ಚುಗೆ ಪಡೆದಿದ್ದಾರೆ. ಮಹಿಳೆಯರ ಋತುಸ್ರಾವದ ಬಗ್ಗೆ ಹೊಂದಿರುವ ಸಾಮಾನ್ಯ ತಪ್ಪು ಕಲ್ಪನೆಗಳನ್ನು ಈ ಆಟಗಾರರು ಮುರದಿದ್ದಾರೆ. ಐಪಿಎಲ್​ ಕ್ರಿಕೆಟ್​ ತಂಡದ ಅಧಿಕೃತ ಟ್ವಿಟರ್​ನಲ್ಲಿ ಈ ಆಟಗಾರರು ಉತ್ತರಿಸಿರುವ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

  ರಾಹುಲ್​ ತಿವಾಟಿಯಾ, ಜೋಸ್​ ಬಟ್ಲರ್​ ಹಾಗೂ ಡೇವಿಡ್​ ಮಿಲ್ಲರ್​ ಈ ಕುರಿತು ತಮಗಿರುವ ಜ್ಞಾನದ ಬಗ್ಗೆ ಪ್ರಾಮಾಣಿಕವಾಗಿ ಉತ್ತರಿಸಿದ್ದಾರೆ. ಮಹಿಳೆಯರ ನೈರ್ಮಲ್ಯದ ಉತ್ಪನ್ನವಾದ ನೈನ್​ ಪಾಲುದಾರಿಕೆಯಲ್ಲಿ ಈ ವಿಷಯಗಳನ್ನು ಚರ್ಚಿಸಲಾಗಿದೆ. ಹುಡುಗರು ಮುಕ್ತವಾಗಿ ಮಾತನಾಡಲು ಹಿಂಜರಿಯುವ ವಿಷಯಗಳನ್ನು ಚರ್ಚಿಸುವ ಉದ್ದೇಶ ಈ ಕಾರ್ಯಕ್ರಮದಾಗಿದೆ.

  'ಸಾಮಾನ್ಯವಾಗಿ ದಿನಂಪ್ರತಿ ನೋಡದ ವಿಷಯಗಳು. ಈ ಕುರಿತು ಪ್ರಾಮಾಣಿಕ ಮಾಹಿತಿ ಮಾತುಕತೆ ಜೊತೆ ಸಂಪ್ರದಾಯ ಮುರಿಯುವ ಸಂಭಾಷಣೆ' ಎಂಬ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಮಹಿಳೆಯರ ಮುಟ್ಟಿನ ಕುರಿತು ಕ್ರಿಕೆಟಿಗರು ಮುಕ್ತವಾಗಿ ಮಾತನಾಡಿರುವ ಈ ವಿಡಿಯೋಗಳಿಗೆ ನೆಟ್ಟಿಗರಿಂದ ಸಕಾರಾತ್ಮಕ ಸ್ಪಂದನೆ ಜೊತೆ ಮೆಚ್ಚುಗೆ ವ್ಯಕ್ತವಾಗಿದೆ.  ಮಹಿಳೆಯರ ಮುಟ್ಟಿನ ಪ್ರಕ್ರಿಯೆ ಬಗ್ಗೆ ತಮಗೆ ಹೇಗೆ ಅರಿವಾಯಿತು ಎಂಬ ಬಗ್ಗೆ ರಾಜಸ್ಥಾನ ರಾಯಲ್ಸ್​ ತಂಡದ ನಾಯಕರು ಆಡಿರುವ ಮಾತುಗಳಿವು. ಕುಟುಂಬದಲ್ಲಿ ಮುಕ್ತವಾಗಿ ಮಾತನಾಡದ ಈ ವಿಷಯಗಳು ಸಹೋದರಿ, ಗೆಳತಿಯಿಂದ ಹೇಗೆ ತಿಳಿಯಿತು ಎಂಬ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಈ ಕ್ರಿಕೆಟಿಗರು  ಕುಟುಂಬದಲ್ಲಿ ಮುಕ್ತವಾಗಿ ಮಾತನಾಡದ ಈ ವಿಷಯಗಳು ಸಹೋದರಿ, ಗೆಳತಿಯಿಂದ ಹೇಗೆ ತಿಳಿಯಿತು ಎಂಬ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಈ ಕ್ರಿಕೆಟಿಗರು
  Published by:Seema R
  First published: