IPL 2021 CSK vs RR| ಚೆನ್ನೈ ಕಿಂಗ್ಸ್​ಗೆ ರಾಜಸ್ತಾನ್ ಸವಾಲು; ಗೆಲುವಿನ ಟ್ರ್ಯಾಕ್​ಗೆ ಮರಳುತ್ತಾ ಸ್ಯಾಮ್ಸನ್ ಪಡೆ?

ರಾಜಸ್ತಾನ್ ರಾಯಲ್ಸ್​ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸತತ ಸೋಲನುಭವಿಸಿದೆ.  ನಾಯಕ ಸಂಜು ಸ್ಯಾಮ್ಸನ್ ಹೊರತುಪಡಿಸಿ ಬೇರೆ ಯಾವ ಬ್ಯಾಟ್ಸ್​ಮನ್ ಸಹ ಉತ್ತಮ ಪ್ರದರ್ಶನ ನೀಡಿಲ್ಲ.

Csk vs RR

Csk vs RR

 • Share this:
  ಅಬುಧಾಬಿ ಕ್ರೀಡಾಂಗಣದಲ್ಲಿ (Abu dhabi Stadium) ಇಂದು ನಡೆಯಲಿರುವ ಮಹತ್ವದ ಐಪಿಎಲ್ 2021ರ 47ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ತಾನ್ ರಾಯಲ್ಸ್ (Rajasthan Royals) ಮತ್ತು ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ (Chennai Super Kings) ಮುಖಾಮುಖಿಯಾಗುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ತಾನ ಈಗಾಗಲೇ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಆದರೂ ರಾಜಸ್ತಾನ ರಾಯಲ್ಸ್​ ಪಾಲಿಗೆ ಪ್ಲೇ ಆಫ್ (Play Off) ಆಸೆ ಉಳಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸಂಜು ಸ್ಯಾಮ್ಸನ್ ಪಡೆ ಮತ್ತಷ್ಟು ನಿಗಾವಹಿಸಿ ಆಡಬೇಕಾದ ಒತ್ತಡದಲ್ಲಿದೆ. ಇದೇ ಕಾರಣಕ್ಕೆ ಇಂದಿನ ಪಂದ್ಯ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

  ರಾಜಸ್ತಾನ್​ಗೆ ಮಾಡು ಇಲ್ಲವೇ ಮಡಿ ಪಂದ್ಯ:

  ರಾಜಸ್ತಾನ್ ರಾಯಲ್ಸ್​ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸತತ ಸೋಲನುಭವಿಸಿದೆ.  ನಾಯಕ ಸಂಜು ಸ್ಯಾಮ್ಸನ್ ಹೊರತುಪಡಿಸಿ ಬೇರೆ ಯಾವ ಬ್ಯಾಟ್ಸ್​ಮನ್ ಸಹ ಉತ್ತಮ ಪ್ರದರ್ಶನ ನೀಡಿಲ್ಲ. ಇನ್ನೂ ಆರಂಭಿಕರು ಉತ್ತಮ ಬ್ಯಾಟಿಂಗ್ ನಿರ್ವಹಣೆ ತೋರಿದ್ದಾಗ್ಯೂ ತಂಡದ ಮಧ್ಯಮ ಕ್ರಮಾಂಕ ವಿಫಲವಾಗಿರುವುದು ತಲೆ ನೋವಿಗೆ ಕಾರಣವಾಗಿದೆ.

  ಆದರೆ, ಪ್ಲೇ ಆಫ್​ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ರಾಜಸ್ತಾನ ತಂಡ ಇಂದು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಬ್ಯಾಟಿಂಗ್​ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದ ನಾಯಕ ಸಂಜು ಸ್ಯಾಮ್ಸನ್,  ಇವಾನ್ ಲೂಯಿಸ್ ಫಾರ್ಮ್​ಗೆ ಮರಳಿದ್ದಾರೆ ಆದರೆ, ಉಳಿದ ಬ್ಯಾಟ್ಸ್​ಮನ್​ಗಳು ನಾಯಕನಿಗೆ ಯಾವ ರೀತಿ ಸಾಥ್ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

  ಇನ್ನೂ ಬೌಲಿಂಗ್ ವಿಭಾಗ ಉತ್ತಮವಾಗಿಯೇ ಪ್ರದರ್ಶನ ನೀಡುತ್ತಿದ್ದು, ಗಾಯಾಳುವಾಗಿರುವ ಇವಾನ್ ಊಯಿಸ್ ಮತ್ತು ಆಲ್​ರೌಂಡರ್​ ಕ್ರಿಸ್​ ಮೋರಿಸ್ ಈ ಪಂದ್ಯದಲ್ಲಿ ಕಣಕ್ಕಿಳಿದರೆ ರಾಜಸ್ತಾನ ತಂಡ ಮತ್ತಷ್ಟು ಬಲಿವಾಗಿರಲಿದೆ

  ಬಲಿಷ್ಠ ಚೆನ್ನೈ:

  ಮೂರು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಚೆನ್ನೈ ಅತ್ಯಂತ ಬಲಿಷ್ಠ ತಂಡ. ಈ ವರ್ಷದ ಟೂರ್ನಿಯಲ್ಲೂ ಸಹ ಚೆನ್ನೈ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಆರಂಭಿಕರಾಗಿ ಫಾಪ್ ಡುಪ್ಲೆಸಿಸ್ ಮತ್ತು ರಿತುರಾಜ್ ಗಾಯಕ್ವಾಡ್ ಅದ್ಬುತ ಪ್ರದರ್ಶ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮೋಯಿನ್ ಅಲಿ, ಸುರೇಶ್ ರೈನಾ, ರವೀಂದ್ರ ಜಡೇಜಾ ಮತ್ತು ನಾಯಕ ಎಂಎಸ್ ಧೋನಿ ತಂಡದ ಆಸ್ತಿ.

  ಇದನ್ನೂ ಓದಿ: IPL 2021 MI vs DC| ಡೆಲ್ಲಿಗೆ ಮುಂಬೈ ಸವಾಲು; ಗೆದ್ದರೆ ಫ್ಲೇ ಆಫ್​ಗೆ ಅವಕಾಶ ಪಡೆಯಲಿದೆ ರೋಹಿತ್ ಪಡೆ

  ಬೌಲಿಂಗ್​ ವಿಭಾಗದಲ್ಲೂ ಚೆನ್ನೈ ತಂಡ ಸಾಕಷ್ಟು ಬಲಿಷ್ಠವಾಗಿಯೇ ಇದೆ. ಇನ್ನೂ ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಆಲ್​ರೌಂಡರ್​ ಡ್ವೇನ್ ಬ್ರಾವೋ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅವರು ಕಣಕ್ಕಿಳಿದರೆ ಚೆನ್ನೈ ಮತ್ತಷ್ಟು ಬಲಿಷ್ಠವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
  Published by:MAshok Kumar
  First published: