Rahul Dravid: ಐಪಿಎಲ್ನಲ್ಲಿ 9ನೇ ತಂಡದ ಎಂಟ್ರಿ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು?
ಸದ್ಯದ ಮಾಹಿತಿ ಪ್ರಕಾರ ಈ ತಂಡವು ಗುಜರಾತ್ನ ಅಹಮದಾಬಾದ್ ನಗರವನ್ನು ಪ್ರತಿನಿಧಿಸಲಿದ್ದು, ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಸರ್ದಾರ್ ಪಟೇಲ್ ಮೈದಾನ ತಂಡದ ಹೋಮ್ ಗ್ರೌಂಡ್ ಆಗಿರಲಿದೆ.
news18-kannada Updated:November 15, 2020, 9:58 PM IST

Rahul Dravid
- News18 Kannada
- Last Updated: November 15, 2020, 9:58 PM IST
ರಂಗು ರಂಗಿನ ರಂಗೀನ್ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಮುಕ್ತಾಯವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಫೈನಲ್ನಲ್ಲಿ ರೋಹಿತ್ ಪಡೆ 5ನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಮಾರ್ಚ್ನಲ್ಲಿ ನಡೆಯಬೇಕಿದ್ದ ಟೂರ್ನಿಯು ಕೊರೋನಾ ಕಾರಣದಿಂದ ಈ ಬಾರಿ ಸೆಪ್ಟೆಂಬರ್ನಲ್ಲಿ ಆರಂಭವಾಗಿತ್ತು. ಅದು ಕೂಡ ದೂರದ ಯುಎಇನಲ್ಲಿ ಎಂಬುದು ವಿಶೇಷ. ಇದೀಗ ಎರಡು ತಿಂಗಳ ಕ್ರಿಕೆಟ್ ಹಬ್ಬಕ್ಕೆ ತೆರೆಬಿದ್ದಿದೆ. ಅದರ ಬೆನ್ನಲ್ಲೇ 2021 ಐಪಿಎಲ್ ಆವೃತ್ತಿಯ ಚಟುವಟಿಕೆಗಳು ಗರಿಗೆದರಿದೆ.
ಹೌದು, 14ನೇ ಸೀಸನ್ ಐಪಿಎಲ್ ಆರಂಭಿಕ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಮುಂದಿನ ಹರಾಜಿಗೆ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದೆ. ಅದರಂತೆ ಡಿಸೆಂಬರ್ ಅಥವಾ ಜನವರಿಯಲ್ಲಿ ಮೆಗಾ ಬಿಡ್ಡಿಂಗ್ ನಡೆಯುವ ಸಾಧ್ಯತೆಯಿದ್ದು, ಬಹುತೇಕ ತಂಡಗಳು ಬದಲಾವಣೆಯಾಗಲಿದೆ ಎನ್ನಲಾಗುತ್ತಿದೆ. ಏಕೆಂದರೆ 2021ರ ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ತಂಡ ಸೇರಿಸಿಕೊಳ್ಳಲು ಬಿಸಿಸಿಐ ಚಿಂತನೆ ನಡೆಸಿದೆ. ಕೊರೋನಾ ಕಾರಣದಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಈ ಬಾರಿ ಮತ್ತೊಂದು ತಂಡಕ್ಕೆ ಅವಕಾಶ ನೀಡಲಿದ್ದು, ಅದರಂತೆ ಪ್ರತಿ ತಂಡಗಳು ಲೀಗ್ನಲ್ಲಿ 3 ಪಂದ್ಯಗಳನ್ನು ಆಡಲಿದೆ. ಸದ್ಯದ ಮಾಹಿತಿ ಪ್ರಕಾರ ಈ ತಂಡವು ಗುಜರಾತ್ನ ಅಹಮದಾಬಾದ್ ನಗರವನ್ನು ಪ್ರತಿನಿಧಿಸಲಿದ್ದು, ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಸರ್ದಾರ್ ಪಟೇಲ್ ಮೈದಾನ ತಂಡದ ಹೋಮ್ ಗ್ರೌಂಡ್ ಆಗಿರಲಿದೆ.
ಐಪಿಎಲ್ನಲ್ಲಿ 9ನೇ ತಂಡದ ಆಗಮನ ಕುರಿತು ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದು, ಹೊಸ ತಂಡ ಬರುತ್ತಿರುವುದು ಸ್ವಾಗತಾರ್ಹ. ಏಕೆಂದರೆ ಇದರಿಂದ ಅನೇಕ ಪ್ರತಿಭೆಗಳಿಗೆ ಮತ್ತಷ್ಟು ಅವಕಾಶಗಳು ದೊರೆಯಲಿದೆ. ಪ್ರಸ್ತುತ 8 ತಂಡಗಳಲ್ಲಿ ಅವಕಾಶ ಸಿಗದ ಅನೇಕ ಅತ್ಯುತ್ತಮ ಪ್ರತಿಭಾವಂತ ಆಟಗಾರರಿದ್ದಾರೆ. ಅವಕಾಶ ಸಿಕ್ಕರೆ ಹೊಸ ಮುಖಗಳು ಮತ್ತು ಪ್ರತಿಭೆಗಳು ಹೊರಬರುತ್ತವೆ. ಹಾಗಾಗಿ ಐಪಿಎಲ್ ವಿಸ್ತರಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದರು.
ಯುವ ಕ್ರಿಕೆಟಿಗರಿಗೆ ಐಪಿಎಲ್ ಉತ್ತಮ ವೇದಿಕೆ. ತಮ್ಮ ಪ್ರತಿಭೆಯನ್ನು ತೋರಿಸಲು ಸಂಪೂರ್ಣ ಅವಕಾಶ ಪಡೆಯುತ್ತಾರೆ. ಐಪಿಎಲ್ನಲ್ಲಿ ಮಿಂಚುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಬಹುದು. ಇದಲ್ಲದೆ ಐಪಿಎಲ್ನಲ್ಲಿ ಉತ್ತಮ ಗುಣಮಟ್ಟದ ಆಟಗಾರರು ಆಡುತ್ತಾರೆ ಎಂದು ಶ್ಲಾಘಿಸಿದರು. ಇದೆಲ್ಲವೂ ಯುವ ಆಟಗಾರರಿಗೆ ಅನುಕೂಲವಾಗಲಿದೆ ಎಂದು ರಾಹುಲ್ ದ್ರಾವಿಡ್ ತಿಳಿಸಿದರು.
ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
ಹೌದು, 14ನೇ ಸೀಸನ್ ಐಪಿಎಲ್ ಆರಂಭಿಕ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಮುಂದಿನ ಹರಾಜಿಗೆ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದೆ. ಅದರಂತೆ ಡಿಸೆಂಬರ್ ಅಥವಾ ಜನವರಿಯಲ್ಲಿ ಮೆಗಾ ಬಿಡ್ಡಿಂಗ್ ನಡೆಯುವ ಸಾಧ್ಯತೆಯಿದ್ದು, ಬಹುತೇಕ ತಂಡಗಳು ಬದಲಾವಣೆಯಾಗಲಿದೆ ಎನ್ನಲಾಗುತ್ತಿದೆ.