• ಹೋಂ
  • »
  • ನ್ಯೂಸ್
  • »
  • IPL
  • »
  • IPL 2020: ವರ್ಷಗಳ ಹಿಂದೆ ದ್ರಾವಿಡ್ ಹೇಳಿದ ಮಾತನ್ನು ನಿಜವಾಗಿಸಿದ ಕಮಲೇಶ್ ನಾಗರ್ಕೋಟಿ..!

IPL 2020: ವರ್ಷಗಳ ಹಿಂದೆ ದ್ರಾವಿಡ್ ಹೇಳಿದ ಮಾತನ್ನು ನಿಜವಾಗಿಸಿದ ಕಮಲೇಶ್ ನಾಗರ್ಕೋಟಿ..!

Rahul Dravid - Kamlesh Nagarkoti

Rahul Dravid - Kamlesh Nagarkoti

Rahul Dravid - Kamlesh Nagarkoti: ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರನಿಗೆ 2018 ರಲ್ಲೇ ಐಪಿಎಲ್​ ಬಾಗಿಲು ತೆರೆದಿತ್ತು. ಕೆಕೆಆರ್​ ತಂಡಕ್ಕೆ ಆಯ್ಕೆಯಾದರೂ ಕಮಲೇಶ್ ನಾಗರ್ಕೋಟಿ ಅದೃಷ್ಟ ಕೈಕೊಟ್ಟಿತ್ತು.

  • Share this:

ಅದು 2004, ಭಾರತ ಮತ್ತು ಪಾಕಿಸ್ತಾನ ನಡುವೆ ರಣ ರೋಚಕ ಪಂದ್ಯ. ಪಾಕ್​ಗೆ ಗೆಲ್ಲಲು 8 ಎಸೆತಗಳಲ್ಲಿ 10 ರನ್​ಗಳ ಅವಶ್ಯಕತೆಯಿತ್ತು. 49ನೇ ಓವರ್​ ಎಸೆಯುತ್ತಿದ್ದದ್ದು ಎಡಗೈ ವೇಗಿ ಜಹೀರ್ ಖಾನ್. ಅತ್ತ ಸ್ಟ್ರೈಕ್​ನಲ್ಲಿ ಶೊಯೇಬ್ ಮಲಿಕ್. ಸ್ಟೇಡಿಯಂನಲ್ಲಿ ಪಾಕ್ ಅಭಿಮಾನಿಗಳು ಗೆಲುವು ನಮ್ದೆ ಅನ್ನುವ ಖುಷಿಯಲ್ಲಿದ್ದರು. ಈ ವೇಳೆ ಜಹೀರ್ ಖಾನ್ ಅವರ 5ನೇ ಎಸೆತವನ್ನು ಮಲಿಕ್ ಸಿಕ್ಸರ್​ಗೆ ಅಟ್ಟಲು ಯತ್ನಿಸಿದ್ದರು. ಚೆಂಡೆ ಮುಗಿಲೆತ್ತರದಲ್ಲಿ...ಏನಾಗಲಿದೆ ಅನ್ನುವಷ್ಟರಲ್ಲಿ ಬೌಂಡರಿ ಲೈನ್​ನಿಂದ ಮಿಂಚಿನಂತೆ ಓಡಿ ಬಂದ ಮೊಹಮ್ಮದ್ ಕೈಫ್ ಹೆಮಾಂಗ್ ಬದಾನಿಯ ಮೇಲಿಂದ ಹಾರಿ ಚೆಂಡನ್ನು ತಮ್ಮ ಕೈಯಲ್ಲಿ ಭದ್ರವಾಗಿಸಿದ್ದರು. ಈ ಅದ್ಭುತ ಕ್ಯಾಚ್​ಗೆ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣ ಸ್ತಬ್ಧವಾಗಿತ್ತು. ಇಂದಿಗೂ ಕ್ರಿಕೆಟ್ ಅಂಗಳದ ಬೆಸ್ಟ್ ಕ್ಯಾಚ್​ಗಳಲ್ಲಿ ಇದು ಕೂಡ ಒಂದು.


ಈ ವಿಷಯ ಈಗ ಯಾಕಪ್ಪಾ ಅಂದರೆ...ಬುಧವಾರ ದುಬೈ ಇಂಟರ್​​ನ್ಯಾಷನಲ್ ಕ್ರಿಕೆಟ್ ಮೈದಾನ ಅಂತಹದ್ದೆ ಒಂದು ಕ್ಯಾಚ್​ಗೆ ಸಾಕ್ಷಿಯಾಗಿತ್ತು. ಕೈಫ್ ಹಿಡಿದ ಅದ್ಭುತ ಕ್ಯಾಚ್​ಗೆ ಸರಿಸಾಟಿಯಾಗದಿದ್ದರೂ, ಯುವ ಕ್ರಿಕೆಟಿಗನ ಅತ್ಯುತ್ತಮ ಪ್ರಯತ್ನಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದಕ್ಕೂ ಒಂದು ಕಾರಣವಿದೆ. ಏಕೆಂದರೆ ಕಮಲೇಶ್ ನಾಗರ್ಕೋಟಿ ಎಂಬ ಯುವ ವೇಗಿಯ ಹೆಸರು ಮೊದಲು ಕೇಳಿ ಬಂದಿದ್ದು ಅಂಡರ್​-19 ಟೀಮ್ ಇಂಡಿಯಾ ತಂಡದಲ್ಲಿ. ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರನಿಗೆ 2018 ರಲ್ಲೇ ಐಪಿಎಲ್​ ಬಾಗಿಲು ತೆರೆದಿತ್ತು. ಕೆಕೆಆರ್​ ತಂಡಕ್ಕೆ ಆಯ್ಕೆಯಾದರೂ ಕಮಲೇಶ್ ನಾಗರ್ಕೋಟಿ ಅದೃಷ್ಟ ಕೈಕೊಟ್ಟಿತ್ತು. ಬೆನ್ನು ನೋವಿನಿಂದ ಬಳಲುತ್ತಿದ್ದ ಕ್ರಿಕೆಟಿಗ 1 ವರ್ಷಕ್ಕೂ ಅಧಿಕ ಕಾಲ ಮೈದಾನದಿಂದ ಹೊರಗುಳಿದಿದ್ದರು.


ಆ ಬಳಿಕ ಚೇತರಿಸಿಕೊಂಡ ಕಮಲೇಶ್ ಮತ್ತೆ ದ್ರಾವಿಡ್ ಕ್ಯಾಂಪ್​ಗೆ ಮರಳಿದ್ದರು. ಆತ್ಮ ವಿಶ್ವಾಸದೊಂದಿಗೆ ಯುವ ಕ್ರಿಕೆಟಿಗನಲ್ಲಿ ಹೊಸ ಉತ್ಸಾಹ ಮೂಡಿಸಿದ್ದ ದ್ರಾವಿಡ್, ನಾಗರ್ಕೋಟಿ ತಮ್ಮ ಬೌಲಿಂಗ್​ನಲ್ಲಿ ಈ ಹಿಂದಿನ ವೇಗ ಪಡೆದುಕೊಳ್ಳುವಂತೆ ಮಾಡಿದ್ದರು. ಇದೇ ಕಾರಣದಿಂದ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ವೇಗಿಯಾಗಿ 20ರ ಹರೆಯದ ಕಮಲೇಶ್ ಗುರುತಿಸಿಕೊಂಡಿದ್ದಾರೆ.


ಅಷ್ಟೇ ಅಲ್ಲ ಬುಧವಾರ ನಡೆದ ಪಂದ್ಯದಲ್ಲಿ ಅದ್ಭುತವಾಗಿ ಡೈವಿಂಗ್ ಕ್ಯಾಚ್ ಹಿಡಿದು ಮಿಂಚಿದ್ದಾರೆ. ಪಂದ್ಯದ 15ನೇ ಓವರ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜೋಫ್ರಾ ಆರ್ಚರ್ ದೊಡ್ಡ ಹೊಡೆತ ಬಾರಿಸಿದ್ದರು. ಆಕಾಶದತ್ತ ಹಾರಿದ ಬಾಲ್​ನ್ನು ಹಿಡಿಯಲು ಬೌಂಡರಿ ಲೈನ್​ಗಳಿಂದ ಇಬ್ಬರು ಫೀಲ್ಡರ್​ಗಳು ಧಾವಿಸಿದ್ದರು. ಇನ್ನೇನು ಚೆಂಡು ಮೈದಾನಕ್ಕೆ ಮುಟ್ಟಲಿದೆ ಅನ್ನುವಾಗ ಕಮಲೇಶ್ ನಾಗರ್ಕೋಟಿ ಜಿಗಿದು ಚೆಂಡನ್ನು ಕೈಯಲ್ಲಿ ಬಂಧಿಸಿದರು. ಈ ಕ್ಯಾಚ್ 2004ರ ಕೈಫ್ ಕ್ಯಾಚ್​ನ್ನು ಮತ್ತೊಮ್ಮೆ ನೆನಪಿಸಿದಂತಿತ್ತು.



ಆದರೆ ಅಂದು ಕೊಲ್ಕತ್ತಾ ನೈಟ್​ ರೈಡರ್ಸ್ ತಂಡದ ಆಯ್ಕೆ ವೇಳೆ ಕೆಕೆಆರ್ ಸಿಇಒ ವೆಂಕಿ ಮೈಸೂರ್ ಯುವ ಆಟಗಾರರ ತಲಾಷೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ದ್ರಾವಿಡ್ ಅವರಿಂದ ಕೂಡ ಯುವ ಕ್ರಿಕೆಟಿಗರ ಕುರಿತು ಸಲಹೆಗಳನ್ನು ಪಡೆದಿದ್ದರು. ಇದೇ ವೇಳೆ ರಾಹುಲ್ ದ್ರಾವಿಡ್, ಕಮಲೇಶ್ ನಾಗರ್ಕೋಟಿಯನ್ನು ಕೇವಲ ಒಬ್ಬ ಬೌಲರ್ ಎಂದು ಮಾತ್ರ ಪರಿಚಯಿಸಿರಲಿಲ್ಲ. ಬದಲಾಗಿ ನಾಗರಕೋಟಿ ಒಬ್ಬ ಅದ್ಭುತ ಫೀಲ್ಡರ್​ಗಳಲ್ಲಿ ಒಬ್ಬರು ಎಂದಿದ್ದರು.


ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಜೊತೆ ಸರಿ ಸಮಾನವಾಗಿ ಸ್ಪರ್ಧಿಸಬಲ್ಲ ಕ್ಷೇತ್ರರಕ್ಷಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಹುಲ್ ದ್ರಾವಿಡ್ ಕೆಕೆಆರ್ ಸಿಇಒಗೆ ತಿಳಿಸಿದ್ದರು. ವರ್ಷಗಳ ಹಿಂದೆ ದ್ರಾವಿಡ್ ಹೇಳಿದ ಮಾತನ್ನು ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ನಾಗರ್ಕೋಟಿ ನಿರೂಪಿಸಿದರು. ತಾನು ಕೇವಲ ವೇಗದ ಬೌಲರ್ ಅಲ್ಲ. ಅತ್ಯುತ್ತಮ ಫೀಲ್ಡರ್​ಗಳಲ್ಲಿ ಒಬ್ಬ ಎಂಬುದನ್ನು ಅದ್ಬುತ ಕ್ಯಾಚ್​ ಮೂಲಕ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟರು. ಈ ಮೂಲಕ ಗುರುವಿನ ಮಾತನ್ನು ನಿಜಗೊಳಿಸಿದರು.



ರಾಜಸ್ಥಾನ್ ವಿರುದ್ಧ 4 ಓವರ್​ನಲ್ಲಿ 13 ರನ್ ಹಾಗೂ 2 ವಿಕೆಟ್ ಉರುಳಿಸಿ ಮಿಂಚಿದ್ದ ನಾಗರಕೋಟಿ, ಪಂದ್ಯದ ಬಳಿಕ ರಾಹುಲ್ ದ್ರಾವಿಡ್ ಅವರನ್ನು ಸ್ಮರಿಸಿ ಗಮನ ಸೆಳೆದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮೂಲಕ ನನ್ನನ್ನು ರೂಪಿಸಿದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ  ಧನ್ಯವಾದ ಅರ್ಪಿಸಿ ಕೆಕೆಆರ್ ವೇಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.


POINTS TABLE:



SCHEDULE TIME TABLE:



ORANGE CAP:



PURPLE CAP:



RESULT DATA:



MOST SIXES:



ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!

First published: