IPL 2021 ಟೂರ್ನಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಲೀಗ್ ಹಂತದ ಎಲ್ಲ ಪಂದ್ಯಗಳು ಮುಗಿದಿವೆ. ಪ್ಲೇ ಆಫ್ ಪಂದ್ಯಗಳು ಮಾತ್ರ ಬಾಕಿ ಉಳಿದಿದೆ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) , ಡೆಲ್ಲಿ ಕ್ಯಾಪಿಟಲ್ಸ್ (Delhi Capitals), ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (Kolkatta Night Riders) ತಂಡಗಳ ನಡುವೆ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಉಳಿದ ನಾಲ್ಕು ತಂಡಗಳ ಟೂರ್ನಿಯಿಂದ ಹೊರಬಿದ್ದಿವೆ. ಉಳಿದ ತಂಡಗಳಿಂದ ದಿನೇ ದಿನೇ ಹೊಸ ಹೊಸ ವಿಚಾರಗಳು ಹೊರಬರುತ್ತಿವೆ. ಮೊನ್ನೆಯಷ್ಟು ಸನ್ ರೈಸರ್ಸ್ ಹೈದರಾಬಾದ್ ತಂಡ ಬಿಟ್ಟು ಹೊರ ಬರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಡೇವಿಡ್ ವಾರ್ನರ್ (David Warner) ಘೋಷಿಸಿದ್ದರು. ಈ ಬೆನ್ನಲ್ಲೇ ಇದೀಗ ಕೆ.ಎಲ್. ರಾಹುಲ್(K L Rahul) ಕೂಡ ಪಂಜಾಬ್ ಕಿಂಗ್ಸ್ (Punjab Kings) ತಂಡದಿಂದ ಹೊರಬರುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಸ್ವತಃ ಕೆ.ಎಲ್.ರಾಹುಲ್ ಇನ್ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ವೊಂದು ಈ ಅನುಮಾನ ಹೆಚ್ಚಿಸುವಂತೆ ಮಾಡಿದೆ.
ಕೆ.ಎಲ್.ರಾಹುಲ್ ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ತಂಡವನ್ನು ಪ್ಲೇ ಆಫ್ಗೆ ಕೊಂಡೊಯ್ಯಲು ಸತತ ಪ್ರಯತ್ನ ಪಟ್ಟರು. ಆದರೆ ತಂಡದ ಕೆಲ ಆಟಗಾರರ ಕಳಪೆ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ ತಂಡ ಟೂರ್ನಿಯಿಂದ ಹೊರಬಿತ್ತು. ಇದರ ಬೆನ್ನಲ್ಲೇ ಕೆ.ಎಲ್.ರಾಹುಲ್ ಮಾಡಿರುವ ಟ್ವೀಟ್ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಈ ವರ್ಷದ ಐಪಿಎಲ್ನಲ್ಲಿ ಮತ್ತೆ ಎರಡು ಹೊಸ ತಂಡಗಳು ಸೇರ್ಪಡೆಯಾಗಲಿದೆ. ಇದಕ್ಕೂ ಮುನ್ನ ಬಹುದೊಡ್ಡ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗ ಇರುವ ತಂಡಗಳ ಆಟಗಾರರು ಬದಲಾಗಲಿದ್ದಾರೆ. ಈ ಬೆನ್ನಲ್ಲೇ ಆಟಗಾರರು ಪ್ರಸ್ತುತ ತಂಡ ಬಿಡುವ ವಿಚಾರವಾಗಿ ಟ್ವೀಟ್ ಮಾಡುತ್ತಿದ್ದಾರೆ.
ರಾಹುಲ್ ಕೂಡ ಇಲ್ಲಿ 'ಕಲಿಯಲು ಸಾಕಷ್ಟಿದೆ. ನಮ್ಮ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ. ಒಟ್ಟಾಗಿ ತಂಡವಾಗಿ ನಅವು ಹೋರಾಡಿದ್ದೇವೆ. ನಮ್ಮ ಅತ್ಯುತ್ತಮ ಆಟವನ್ನು ನೀಡಲು ಪ್ರಯತ್ನಿಸಿದ್ದೇವೆ. ತಂಡವನ್ನು ಮುನ್ನೆಡೆಸಿದ್ದು ನನಗೆ ಹೆಮ್ಮೆಯಿದೆ. ಇದುವರೆಗೂ ನನಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ'ಅಂತ ರಾಹುಲ್ ಟ್ವೀಟ್ ಮಾಡಿದ್ದಾರೆ. ಇತ್ತ ಆರ್ಸಿಬಿ ತಂಡದ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಹೀಗಾಗಿ ಮುಂದಿನ ಆರ್ಸಿಬಿ ತಂಡದ ನಾಯಕ ಯಾರು ಎಂದು ಚರ್ಚೆ ಶುರುವಾಗಿದೆ.ಈ ಮಧ್ಯೆ ರಾಹುಲ್ ಈ ಪೋಸ್ಟ್ ಮಾಡಿರುವುದು, ಮತ್ತೆ ಆರ್ಸಿಬಿ ತಂಡಕ್ಕೆ ಮರಳುತ್ತಾರಾ ಎಂಬ ಪ್ರಶ್ನೆ ಮೂಡಿಸಿದೆ, ಕೇವಲ ಆಟಗಾರನಾಗಿ ಅಲ್ಲದೇ ಆರ್ಸಿಬಿ ತಂಡದ ನಾಯಕನಾಗಿ ಕೆ.ಎಲ್.ರಾಹುಲ್ ಮರಳಿ ಬರುತ್ತಾರೆ ಎಂಬ ಚರ್ಚೆಗಳು ಶುರುವಾಗಿದೆ.
Read Also: T20 World Cup| ಭಾರತ ತಂಡಕ್ಕೆ ನೆಟ್ ಬೌಲರ್ ಆಗಿ ಆಯ್ಕೆಯಾದ ಸನ್ ರೈಸರ್ಸ್ ಪೇಸ್ ಸೆನ್ಸೇಷನ್ ಉಮ್ರಾನ್ ಮಲಿಕ್
ಒಂದು ವೇಳೆ ಪಂಜಾಬ್ ಕಿಂಗ್ಸ್ ತಂಡ ರಾಹುಲ್ರನ್ನ ರಿಲೀಸ್ ಮಾಡಿದರೆ, ಮುಂಬರುವ ಹರಾಜಿನಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ರಾಹುಲ್ರನ್ನ ದೊಡ್ಡ ಮೊತ್ತಕ್ಕೆ ಖರೀದಿಸುವುದರಲ್ಲಿ ಅನುಮಾನವಿಲ್ಲ. ಇನ್ನೂ ಆರ್ಸಿಬಿ ತಂಡದ ಅಭಿಮಾನಿಗಳ ಬೇಡಿಕೆಯೂ ಆದೆ ಆಗಿದೆ. ಯಾರೋ ನಮ್ಮ ತಂಡದ ನಾಯಕನಾಗುವ ಬದಲುನಮ್ಮ ಕನ್ನಡಿಗ ಕೆ.ಎಲ್.ರಾಹುಲ್ ನಾಯಕ ಆಗಲಿ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಹೊಸದಾಗಿ ಸೇರಲಿರುವ 2 ತಂಡಗಳಲ್ಲಿ ಒಂದು ತಂಡಕ್ಕೆ ರಾಹುಲ್ ಕ್ಯಾಪ್ಟನ್ ಆಗಲಿದ್ದಾರೆ ಅನ್ನೊ ಮಾತುಗಳು ಕೇಳಿ ಬರುತ್ತಿವೆ. ಉಳಿದ ಮತ್ತೊಂದು ತಂಡಕ್ಕೆ ಆಸ್ಟ್ರೇಲಿಯಾ ತಂಡದ ದಂತಕಥೆ ಡೇವಿಡ್ ವಾನರ್ರ್ ಕ್ಯಾಪ್ಟನ್ ಆಗಲಿದ್ದಾರೆ ಎಂಬ ಗುಸುಗುಸು ಶುರುವಾಗಿದೆ. ಈ ಬಗ್ಗೆ ಕೆಲವು ದಿನಗಳಲ್ಲೇ ಸ್ಪಷ್ಟ ಉತ್ತರ ಸಿಗಲಿದೆ.
ವರದಿ - ವಾಸುದೇವ್.ಎಂ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ