news18-kannada Updated:November 6, 2020, 5:22 PM IST
Prayer Aunty
IPL 2020ಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದೆ. ಈ ಪಂದ್ಯದ ವೇಳೆ ಪ್ರೇಕ್ಷಕರ ಸ್ಟ್ಯಾಂಡ್ನಲ್ಲಿ ಹಿರಿಯ ಮಹಿಳೆಯೊಬ್ಬರು ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಪಂದ್ಯದ ವೇಳೆ ಪುಸ್ತಕವೊಂದನ್ನು ಓದುತ್ತಿರುವುದನ್ನು ಕ್ಯಾಮೆರಾಮೆನ್ ಸೆರೆ ಹಿಡಿದಿದ್ದರು. ಇದರೊಂದಿಗೆ ಯಾರಾಪ್ಪ ಆ ಮಹಿಳೆ. ಮ್ಯಾಚ್ ನೋಡುವುದನ್ನು ಬಿಟ್ಟು ಪುಸ್ತಕ ಓದುತ್ತಿದ್ದಾರೆ ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿತ್ತು.
ಇವರು ಯಾರು ಎಂದು ತಿಳಿಯಬೇಕಿದ್ರೆ 3 ವರ್ಷಗಳ ಹಿಂದಕ್ಕೆ ಒಮ್ಮೆ ಕಣ್ಣಾಡಿಬೇಕಾಗುತ್ತದೆ. ಏಕೆಂದರೆ ಇದೇ ಮಹಿಳೆ 2017ರ ಐಪಿಎಲ್ ಫೈನಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಪ್ರೇಕ್ಷಕರ ಸ್ಟ್ಯಾಂಡ್ನಲ್ಲಿ ಕೂತು ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡಿದ್ದರು. ಮೇ 21, 2017 ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರೈಸಿಂಗ್ ಪುಣೆ ಜೈಂಟ್ಸ್ ಮುಖಾಮುಖಿಯಾಗಿತ್ತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ನಾಯಕನ ಲೆಕ್ಕಚಾರ ತಲೆಕೆಳಗಾಗಿತ್ತು. ಕೇವಲ 65 ರನ್ಗಳಿಗೆ 5 ಪ್ರಮುಖ ಬ್ಯಾಟ್ಸ್ಮನ್ಗಳು ಔಟ್ ಆಗಿದ್ದರು. ಕೊನೆಗೆ ಏಕಾಂಗಿ ಹೋರಾಟ ನಡೆಸಿದ ಕೃನಾಲ್ ಪಾಂಡ್ಯ 47 ರನ್ಗಳೊಂದಿಗೆ ನಿಗದಿತ 20 ಓವರ್ಗಳಲ್ಲಿ ಮುಂಬೈ ಮೊತ್ತವನ್ನು 129 ಕ್ಕೆ ತಂದು ನಿಲ್ಲಿಸಿದರು.
ಸಾಧಾರಣ ಗುರಿ ಬೆನ್ನತ್ತಿದ ರೈಸಿಂಗ್ ಪುಣೆ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ನಾಯಕ ಸ್ಟೀವ್ ಸ್ಮಿತ್ ಆಕರ್ಷಕ ಅರ್ಧಶತಕ ಬಾರಿಸಿ 11ನೇ ಓವರ್ ಆಗುವಾಗ ತಂಡದ ಮೊತ್ತವನ್ನು 70 ರ ಗಡಿದಾಟಿಸಿದ್ದರು. ಇನ್ನೇನು ಗೆಲ್ಲಲು 54 ಎಸೆತಗಳಲ್ಲಿ 60 ರನ್ಗಳ ಅವಶ್ಯಕತೆಯಿತ್ತು. ಕೇವಲ 1 ವಿಕೆಟ್ ಮಾತ್ರ ಕಳೆದುಕೊಂಡಿತು. ಹೀಗಾಗಿ ಎಲ್ಲರೂ ರೈಸಿಂಗ್ ಪುಣೆ ಜೈಂಟ್ಸ್ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅತ್ತ ಗ್ಯಾಲರಿಯಲ್ಲಿ ಕೂತಿದ್ದ ಹಿರಿಯ ಮಹಿಳೆ ಮಾತ್ರ ಪ್ರಾರ್ಥನೆಯಲ್ಲಿ ನಿರತರಾಗಿದ್ದರು. ಇದನ್ನೇ ಹಲವು ಬಾರಿ ಕ್ಯಾಮೆರಾಮೆನ್ ತೋರಿಸಿದ್ದರು.
ಆ ಬಳಿಕ ನಡೆದಿದ್ದೇ ನಾಟಕೀಯ ತಿರುವು. ಕೇವಲ 58 ಪೇರಿಸುವಷ್ಟರಲ್ಲಿ ತಂಡದ 5 ವಿಕೆಟ್ಗಳು ಉರುಳಿದ್ದವು. ಇತ್ತ ರೋಹಿತ್ ಶರ್ಮಾ ಪಡೆ ಭರ್ಜರಿ ಹೋರಾಟದಲ್ಲಿ 1 ರನ್ಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಗೆಲುವಿಗೆ ಹಿರಿಯಜ್ಜಿಯ ಪ್ರಾರ್ಥನೆಯೇ ಕಾರಣ ಎಂಬ ವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಅಂದಿನ ಈ ಹಿರಿಯ ಮಹಿಳೆಯನ್ನು ಪ್ರೇಯರ್ ಆಂಟಿ ಎಂದೇ ಕರೆಯಲಾಗುತ್ತಿದೆ.
ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಾಗ ಮುಂಬೈ ಇಂಡಿಯನ್ಸ್ ಅರ್ಧ ಸೋತಿತ್ತು. ಆದರೆ ಕೊನೆಯ 6 ಓವರ್ಗಳಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ-ಇಶಾನ್ ಕಿಶನ್ 92 ರನ್ಗಳನ್ನು ಬಾರಿಸಿದ್ದರು. ಈ ಮೂಲಕ ತಂಡದ ಮೊತ್ತವನ್ನು 200ಕ್ಕೆ ತಂದು ನಿಲ್ಲಿಸಿದರು.
ಆ ಬಳಿಕ ಪ್ರೇಕ್ಷಕರ ಸ್ಟ್ಯಾಂಡ್ನಲ್ಲಿ ಕೂತಿದ್ದ ಪ್ರೇಯರ್ ಆಂಟಿಯನ್ನು ತೋರಿಸಲಾಗಿತ್ತು. ಅತ್ತ ಏನೋ ಓದುವಲ್ಲಿ ಮಗ್ನರಾಗಿದ್ದ ಹಿರಿಯಜ್ಜಿಯನ್ನು ನೋಡಿದ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಈ ಸಲ ಗೆಲುವು ನಮ್ದೆ ಎಂದು ಷರಾ ಬರೆದಿದ್ದರು. ಏಕೆಂದರೆ ಪ್ರೇಯರ್ ಆಂಟಿಯನ್ನು ಮುಂಬೈ ಪಾಲಿನ ಲಕ್ಕಿ ಚಾರ್ಮ್ ಎಂದು ಪರಿಗಣಿಸಲಾಗುತ್ತದೆ.
ಅಂದಹಾಗೆ ಈ ಪ್ರೇಯರ್ ಆಂಟಿ ಮತ್ಯಾರೂ ಅಲ್ಲ. ಮುಂಬೈ ಇಂಡಿಯನ್ಸ್ ತಂಡದ ಓನರ್ ನೀತಾ ಅಂಬಾನಿ ಅವರ ತಾಯಿ ಪೂರ್ಣಿಮಾ ದಲಾಲ್. ಹೀಗಾಗಿಯೇ ಫುಲ್ ಸಪೋರ್ಟ್ನೊಂದಿಗೆ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಕಾಣಿಸಿಕೊಳ್ಳುತ್ತಾರೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಅಂದಹಾಗೆ ಈ ಪ್ರೇಯರ್ ಆ್ಯಂಟಿ ಮತ್ಯಾರೂ ಅಲ್ಲ. ಮುಂಬೈ ಇಂಡಿಯನ್ಸ್ ತಂಡದ ಓನರ್ ನೀತಾ ಅಂಬಾನಿ ಅವರ ತಾಯಿ ಪೂರ್ಣಿಮಾ ದಲಾಲ್. ಹೀಗಾಗಿಯೇ ಫುಲ್ ಸಪೋರ್ಟ್ನೊಂದಿಗೆ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಕಾಣಿಸಿಕೊಳ್ಳುತ್ತಾರೆ.
Published by:
zahir
First published:
November 6, 2020, 4:07 PM IST