ಬೆಂಗಳೂರು, ಸೆ. 27: ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕಟ್ಟರ್ ಎದುರಾಳಿಗಳು. ಅದು ಬಿಟ್ಟರೆ ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಪೈಪೋಟಿ ಗಮನ ಸೆಳೆಯುವಂಥದ್ದು. ಇವೆರೆಡು ತಂಡಗಳ ಫ್ಯಾನ್ಸ್ ಕ್ರೇಜ್ ಅಂಥದ್ದು. ಚೆನ್ನೈ ಮತ್ತು ಬೆಂಗಳೂರು ತಂಡಗಳ ನಾಯಕರಾದ ಧೋನಿ ಮತ್ತು ಕೊಹ್ಲಿಯ ಜನಪ್ರಿಯತೆ ಪ್ರಾದೇಶಿಕತೆಗೆ ಸೀಮಿತವಾದುದಲ್ಲ. ಉತ್ತರ ಭಾರತೀಯರನ್ನ ಒಪ್ಪಿಕೊಳ್ಳದ ತಮಿಳುನಾಡು ಜನರು ಎಂಎಸ್ ಧೋನಿಯನ್ನ ಆರಾಧಿಸುತ್ತಾರೆ. ಅಷ್ಟರಮಟ್ಟಿಗೆ ಧೋನಿ ಎಂದರೆ ಸಿಎಸ್ಕೆ ಫ್ಯಾನ್ಸ್ಗೆ ಪ್ರೀತಿ. ಆರ್ಸಿಬಿ ಅಭಿಮಾನಿಗಳೂ ಅಷ್ಟೇ ತೀವ್ರತೆ ಇರುವ ಮಂದಿ. ಬೆಂಗಳೂರು ಮತ್ತು ಚೆನ್ನೈ ಪಂದ್ಯ ನಡೆದರೆ ಇಪಿಎಲ್ನಲ್ಲಿ ಮ್ಯಾಂಚೆಸ್ಟರ್ ಸಿಟಿ, ಮ್ಯಾಂಚೆಸ್ಟರ್ ಯುನೈಟೆಡ್ ತಂಡಗಳ ನಡುವಿನ ಪಂದ್ಯ ನಡೆದಂತೆ ಭಾಸವಾಗುತ್ತದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವ ಮುಂಚೆ ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿ ಸೋತಿತ್ತು. ಈ ಪಂದ್ಯದ ವೇಳೆ ಒಬ್ಬ ಸಿಎಸ್ಕೆ ಅಭಿಮಾನಿ ಹಿಡಿದುಕೊಂಡಿದ್ದ ಪ್ಲೆಕಾರ್ಡ್ ಇದೀಗ ವೈರಲ್ ಆಗುತ್ತಿದೆ. ಆತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ತೊಟ್ಟು ಬಂದಿದ್ದ ಸಿಎಸ್ಕೆ ಫ್ಯಾನ್. ಆತ ಬರೆದಿದ್ದ ಪ್ಲೆಕಾರ್ಡ್ ಮಜವಾಗಿದೆ. “ನನ್ನ ಸಿಎಸ್ಕೆ ಜೆರ್ಸಿ ತೊಡಲು ನನ್ನ ಹೆಂಡತಿ ಅನುಮತಿ ಕೊಡಲಿಲ್ಲ” ಎಂದು ಆತ ತನ್ನ ಪ್ಲೆಕಾರ್ಡ್ನಲ್ಲಿ ಬರೆದುಕೊಂಡಿದ್ದ. ಆರ್ಸಿಬಿ ಜೆರ್ಸಿ ತೊಟ್ಟ ಇತರ ಸಂಗಡಿಗರ ಜೊತೆ ಆತ ಮುಗುಳ್ನಗುತ್ತಾ ಪ್ಲೆಕಾರ್ಡ್ ಇಟ್ಟುಕೊಂಡಿದ್ದ ಆ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಲವ್ ಈಸ್ ಕಲರ್ ಬ್ಲೈಂಡ್ ಎಂದು ಕ್ಯಾಪ್ಷನ್ ಕೊಟ್ಟು ಫೋಟೋ ಸಮೇತ ಮಾಡಿದ್ದ ಆ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 17 ಸಾವಿರಕ್ಕೂ ಹೆಚ್ಚು ಮಂದಿ ಆ ಪೋಸ್ಟ್ಗೆ ಲೈಕ್ ಮಾಡಿದ್ಧಾರೆ. ಸುಮಾರು ಎರಡು ಸಾವಿರದಷ್ಟು ಜನರು ರೀಟ್ವೀಟ್ ಮಾಡಿದ್ದಾರೆ.
Love is colour blind ❤️💛#RCBvCSK #WhistlePodu #Yellove 🦁 pic.twitter.com/C7oMPEJjfI
— Chennai Super Kings - Mask P😷du Whistle P🥳du! (@ChennaiIPL) September 25, 2021
ಇದನ್ನೂ ಓದಿ: IPL 2021- ಎಬಿಡಿ ಔಟ್ ಆಗೋದನ್ನ ನೋಡಿ ಕೈಪೆಟ್ಟು ಮಾಡಿಕೊಂಡ ಮಗ; ಇಲ್ಲಿದೆ ವಿಡಿಯೋ
ಕಳೆದ ಸೀಸನ್ನಲ್ಲಿ ಬಹಳ ನೀರಸ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ವರ್ಷ ಅಮೋಘ ಆಟದ ಮೂಲಕ ಮಾಮೂಲಿಯ ಲಯಕ್ಕೆ ಬಂದಿದೆ. ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಸಿಎಸ್ಕೆ ಸದ್ಯ ಪಾಯಿಂಟ್ ಟೇಬಲ್ನಲ್ಲಿ ಟಾಪ್-2 ಲಿಸ್ಟ್ನಲ್ಲಿ ಸತತವಾಗಿ ಕಾಣಿಸಿಕೊಳ್ಳುತ್ತಿದೆ. ಎಲ್ಲಾ ವಿಭಾಗದಲ್ಲೂ ಪ್ರಬಲವಾಗಿ ತೋರುತ್ತಿದೆ. ಋತುರಾಜ್ ಗಾಯಕ್ವಡ್, ಫ್ಯಾಫ್ ಡುಪ್ಲೆಸಿಸ್ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ಧಾರೆ. ಮೊಯೀನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಹರ್ ಮೊದಲಾದವರೂ ಕೂಡ ತಂಡದ ಗೆಲುವಿನಲ್ಲಿ ಪಾತ್ರ ವಹಿಸುತ್ತಿದ್ದಾರೆ.
RESULT DATA:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡು ಸೋಲಿನ ಬಳಿಕ ಮುಂಬೈ ವಿರುದ್ಧ ಗೆದ್ದು ಮತ್ತೆ ಲಯಕ್ಕೆ ಬಂದಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಅವರು ಫಾರ್ಮ್ನಲ್ಲಿದ್ದಾರೆ. ಎಬಿ ಡೀವಿಲಿಯರ್ಸ್ ಬೇಗ ಔಟಾದರೂ ತಮ್ಮ ಬ್ಯಾಟಿಂಗ್ ಅಗಾಧತೆಯನ್ನ ತೋರಿಸಿದ್ಧಾರೆ. ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್, ಯುಜವೇಂದ್ರ ಚಹಲ್ ಮತ್ತು ಮೊಹಮ್ಮದ್ ಸಿರಾಜ್ ಮಾರಕ ಕಾಂಬಿನೇಶನ್ ಎನಿಸಿದ್ಧಾರೆ. ಮುಂಬೈ ವಿರುದ್ಧ ಆಡಿದ ರೀತಿಯಲ್ಲೇ ಆರ್ಸಿಬಿ ಆಟ ಮುಂದುವರಿಸಿದರೆ ಚೊಚ್ಚಲ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕುವ ಸಾಧ್ಯತೆ ತಳ್ಳಿಹಾಕಲು ಸಾಧ್ಯವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ