PBKS vs SRH, IPL 2021: ಸನ್​ರೈಸರ್ಸ್ ಹೈದರಾಬಾದ್ ವಿರುದ್ದ ಆಲೌಟಾದ ಪಂಜಾಬ್ ಕಿಂಗ್ಸ್

PBKS vs SRH Live Score, IPL 2021: ಉಭಯ ತಂಡಗಳು ಇದುವರೆಗೆ 16 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 11 ಬಾರಿ ಗೆಲುವು ದಾಖಲಿಸಿದರೆ, ಪಂಜಾಬ್ 5 ಬಾರಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

PBKS vs SRH

PBKS vs SRH

  • Share this:
    ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಪಂಜಾಬ್ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

    ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಪಂಜಾಬ್​ಗೆ ಬಿರುಸಿನ ಆರಂಭ ಒದಗಿಸಲಾಗಲಿಲ್ಲ. ಮೊದಲ ಮೂರು ಓವರ್​ನಲ್ಲಿ ಈ ಜೋಡಿ 15 ರನ್​ ಕಲೆಹಾಕಿತು. ಆದರೆ 4ನೇ ಓವರ್​ನ ಮೊದಲ ಎಸೆತದಲ್ಲೇ ಕೆಎಲ್ ರಾಹುಲ್ (4) ಭುವನೇಶ್ವರ್ ಕುಮಾರ್​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

    ಈ ವೇಳೆ ಕ್ರೀಸ್​ಗಿಳಿದ ಕ್ರಿಸ್ ಗೇಲ್ ಕೂಡ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್​ 32 ರನ್​ಗಳಿಸಲಷ್ಟೇ ಶಕ್ತರಾದರು. ಪವರ್​ಪ್ಲೇ ಮುಕ್ತಾಯದ ಬೆನ್ನಲ್ಲೇ ರಶೀದ್ ಖಾನ್ ಹಿಡಿದ ಅದ್ಭುತ ಕ್ಯಾಚ್​ಗೆ ಮಯಾಂಕ್ ಅಗರ್ವಾಲ್ (22) ಬಲಿಯಾದರು. ಇನ್ನು ನಿಕೋಲಸ್ ಪೂರನ್​ (0) ಅವರನ್ನು ರನೌಟ್ ಮಾಡುವ ಮೂಲಕ 3ನೇ ವಿಕೆಟ್ ಪತನಕ್ಕೆ ರಶೀದ್ ಖಾನ್ ಕಾರಣರಾದರು.

    9ನೇ ಓವರ್​ ಎಸೆದ ರಶೀದ್ ಖಾನ್ ಕ್ರಿಸ್ ಗೇ;ಲ್ (15) ವಿಕೆಟ್ ಪಡೆದು ಸನ್​ರೈಸರ್ಸ್​ ಹೈದರಾಬಾದ್​ಗೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಇನ್ನು ತಂಡದ ಮೊತ್ತ 63 ಆಗಿದ್ದ ವೇಳೆ ದೀಪಕ್ ಹೂಡ (13) ಅಭಿಷೇಕ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.

    14ನೇ ಓವರ್​ನಲ್ಲಿ ಮುನ್ನುಗ್ಗಿ ಬಾರಿಸಲು ಯತ್ನಿಸಿದ ಹೆನ್ರಿಕ್ ಮೊಯಿಸಸ್ (14) ಸ್ಟಂಪ್ ಔಟ್ ಆಗಿ ಹೊರ ನಡೆದರು. ಇನ್ನು ಫ್ಯಾಬಿಯೆನ್ ಅಲೆನ್ 6 ರನ್​ಗಳಿಸಿ ಖಲೀಲ್ ಅಹ್ಮದ್​ಗೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಏಕಾಂಗಿಯಾಗಿ ಸನ್​ರೈಸರ್ಸ್​ ಬೌಲರುಗಳನ್ನು ದಂಡಿಸಿದ್ದ ಶಾರುಖ್ ಖಾನ್ (22) 19ನೇ ಓವರ್​ನಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ಮುರುಗನ್ ಅಶ್ವಿನ್ (9) 9ನೇ ವಿಕೆಟ್​ ಆಗಿ ಕೀಪರ್​ಗೆ ಕ್ಯಾಚ್ ನೀಡಿ ಹೊರ ನಡೆದರು.

    ಅಂತಿಮವಾಗಿ ಪಂಜಾಬ್ ಕಿಂಗ್ಸ್ 19.4 ಓವರ್​ನಲ್ಲಿ ಸರ್ವಪತನ ಕಾಣುವ ಮೂಲಕ 120 ರನ್​ ಕಲೆಹಾಕಿತು. ಸನ್​ರೈಸರ್ಸ್​ ಹೈದರಾಬಾದ್ ಪರ ಖಲೀಲ್ ಅಹ್ಮದ್ 4 ಓವರ್​ನಲ್ಲಿ 21 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಅಭಿಷೇಕ್ ಶರ್ಮಾ 24 ರನ್​ ನೀಡಿ 2 ವಿಕೆಟ್ ಪಡೆದರು.

    ಸ್ಕೋರ್: 120/10

    ಓವರ್: 20

    ಎರಡೂ ತಂಡಗಳು ಈವರೆಗೆ ತಲಾ 3 ಪಂದ್ಯಗಳನ್ನಾಡಿದ್ದು, ಪಂಜಾಬ್ ಕಿಂಗ್ಸ್ 1 ಗೆಲುವು ದಾಖಲಿಸಿದರೆ, ಸನ್​ರೈಸರ್ಸ್​ ಮೂರರಲ್ಲೂ ಸೋತು ನಿರಾಸೆ ಮೂಡಿಸಿದೆ. ಹೀಗಾಗಿ ಇಂದಿನ ಪಂದ್ಯವು ಸೋತವರ ನಡುವಿನ ಕದನ ಎಂದೇ ವಿಶ್ಲೇಷಿಸಲಾಗುತ್ತಿದೆ.

    PBKS vs SRH Playing 11: ಪಂಜಾಬ್ ತಂಡದಲ್ಲಿ 3 ಬದಲಾವಣೆ: ಉಭಯ ತಂಡಗಳು ಹೀಗಿವೆ

    ಐಪಿಎಲ್​ನಲ್ಲಿ ಉಭಯ ತಂಡಗಳು ಇದುವರೆಗೆ 16 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 11 ಬಾರಿ ಗೆಲುವು ದಾಖಲಿಸಿದರೆ, ಪಂಜಾಬ್ 5 ಬಾರಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಸನ್​ರೈಸರ್ಸ್ ಹೈದರಾಬಾದ್ ಮೇಲುಗೈ ಹೊಂದಿದೆ. ಇನ್ನು ಕಳೆದ ಸೀಸನ್​ನಲ್ಲಿನ ಮುಖಾಮುಖಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೆಲುವು ದಾಖಲಿಸಿತ್ತು. ಇನ್ನು ಕೊನೆಯ ಹತ್ತು ಮುಖಾಮುಖಿಯಲ್ಲಿ ಪಂಜಾಬ್ 3 ಬಾರಿ ಮಾತ್ರ ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಗೆಲುವು ದಾಖಲಿಸಿದೆ.
    Published by:zahir
    First published: