PBKS vs RR: ಕನ್ನಡಿಗರ ಅದ್ಭುತ ಪ್ರದರ್ಶನದ ನಡುವೆಯೂ, ಪಂಜಾಬ್​ಗೆ ಕಡೆಯ ಬಾಲ್​ನಲ್ಲಿ ಸೋಲು

PBKS vs RR Result Live: ಪಂದ್ಯದ ಕಡೆಯ ಬಾಲ್​ವರೆಗೂ ವಿಜಯ ಯಾರ ಕಡೆ ಎಂಬುದು ಮರೀಚಿಕೆಯಾಗಿತ್ತು. ಮೂರು ಬಾಲ್​ ಉಳಿದಾಗ ನಿಕೋಲಾಸ್​ ಪೂರಾನ್​ ವಿಕೆಟ್​ ಕೊಟ್ಟರು. ಕಡೆಯ ಕ್ಷಣದವರೆಗೂ ಪಂದ್ಯ ಕುತೂಹಲವನ್ನು ಉಳಿಸಿಕೊಂಡ ಪಂದ್ಯ ಕಡೆಯಲ್ಲಿ ರಾಜಸ್ಥಾನದ ಪಾಲಾಗಿದೆ

Sanju Samson File Photo

Sanju Samson File Photo

 • Share this:
  ಪಂಜಾಬ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್​ ರಾಹುಲ್​ ನೇತೃತ್ವದ ಪಂಜಾಬ್​ ತಂಡ ಸೋಲುಣ್ಣಿದೆ. ಆರಂಭಿಕರಾದ ಕನ್ನಡಿದ ಮಯಾಂಕ್​ ಅಗರ್ವಾಲ್​ ಮತ್ತು ಕೆಎಲ್​ ರಾಹುಲ್​ ಉತ್ತಮ ಆರಂಭ ಒದಗಿಸಿದರು. ಅರ್ಧ ಶತಕದ ಒಂದು ಹೆಜ್ಜೆ ಹಿಂದೆ ಕೆಎಲ್​ ರಾಹುಲ್​ ಎಡವಿದರೆ, ಮಯಾಂಕ್​ ಅಗರ್ವಾಲ್​ 43 ಬಾಳ್​ಗಳಲ್ಲಿ 67 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಐಪಿಎಲ್​ 2021ರ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ  ವಿಫಲರಾಗಿದ್ದ ನಿಕೋಲಾಸ್​ ಪೂರನ್​ ಮತ್ತೆ ಫಾರ್ಮ್​ಗೆ ಬಂದಿರುವುದು ಪಂಜಾಬ್​ ತಂಡಕ್ಕೆ ಇನ್ನಷ್ಟು ಬಲ ತಂದುಕೊಟ್ಟಿದೆ. ಮಯಾಂಕ್​ ಅಗರ್ವಾಲ್​ ಕೂಡ ಅದ್ಭುತವಾಗಿ ಆಡಿದರೂ ಕೂಡ ಪಂಜಾಬ್​ ಸೋಲು ಕಂಡಿದೆ.

  ಪಂಜಾಬ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ಇಬ್ಬರಿಗೂ ಗೆಲುವು ಬಹಳ ಪ್ರಮುಖವಾಗಿತ್ತು. ಟೇಬಲ್ಸ್​ನಲ್ಲಿ ಮೇಲೆ ಹೋಗಬೇಕು ಎಂದರೆ, ಎರಡೂ ಟೀಂಗಳು ಎಲ್ಲಾ ಪಂದ್ಯಗಳನ್ನೂ ಗೆಲ್ಲುವ ಅನಿವಾರ್ಯತೆಯಿದೆ. ಈ ಇರಾದೆಯಿಂದಲೇ, ಎರಡೂ ತಂಡಗಳೂ ಈ ಪಂದ್ಯವನ್ನು ಗೆಲ್ಲಲೇಬೇಕು ಎಂಬ ಪ್ರಯತ್ನದಲ್ಲಿದ್ದರು. ಆದರೆ ಇಂದು ಗೆಲುವು ಪಂಜಾಬ್​ ತಂಡದ ಕಡೆಗೆ ತಿರುಗಿದೆ. ಯೂನಿವರ್ಸಲ್​ ಬಾಸ್​ ಕ್ರಿಸ್​ ಗೇಲ್​ ಅವರನ್ನು ಕೂರಿಸಿ ದಕ್ಷಿಣ ಆಫ್ರಿಕಾದ ದಾಂಡಿಗ ಮರ್ಕರಮ್​ ಅವರನ್ನು ಆಡಿಸಿದ ಬಗ್ಗೆ ಬೇಸರ ವ್ಯಕ್ತಿವಾಗಿತ್ತು. ಆದರೆ ಮರ್ಕರಮ್​ ಉತ್ತಮ ಆಟವಾಡುವಾಡಿದರಾದರೂ, ಗೆಲುವು ತಂದುಕೊಡುವುದರಲ್ಲಿ ವಿಫಲರಾಗಿ, ಗೇಲ್​ ಆಚೆ ಇಟ್ಟು ತಮ್ಮನ್ನು ಆಡಿಸಿದರುವುದು ತಪ್ಪು ಎಂಬ ಆರೋಪ ಸರಿ ಎಂಬಂತೆ ಮಾಡಿದರು.

  ಎರಡೂ ತಂಡಗಳೂ ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇಡೀ ಐಪಿಎಲ್​ ಎಲ್ಲಾ ಆವೃತ್ತಿಗಳನ್ನು ತೆಗೆದುಕೊಂಡರೆ ಪಂಜಾಬ್​ ತಂಡ ಹಲವು ನಾಯಕರು, ಕೋಚ್​ಗಳು, ಜೆರ್ಸಿಯಿಂದ ಹಿಡಿದು ನೂರೆಂಟು ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ. ಇದರಿಂದ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ. ತಂಡ ಸೆಟಲ್​ ಆಗಿ ಆಡುವ ಬದಲು, ಬದಲಾವಣೆಗೆ ಹೊಂದಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಆದರೆ ಈಗ ಬಹುತೇಕ ಕನ್ನಡಿಗರೇ ತುಂಬಿರುವ ತಂಡವನ್ನು ಕನ್ನಡಿಗರಾದ ಕೆಎಲ್​ ರಾಹುಲ್​ ಮತ್ತು ಕೋಚ್​ ಅನಿಲ್​ ಕುಂಬ್ಳೆ ಮತ್ತೆ ಲಯಕ್ಕೆ ಕರೆದು ತರುತ್ತಾರ ಎಂಬುದನ್ನು ಕಾದುನೋಡಬೇಕಿದೆ.

  ಇದನ್ನೂ ಓದಿ: PBKS vs RR: ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಪಂಜಾಬ್​ - ರಾಜಸ್ಥಾನ; ಟಾಸ್​ ಗೆದ್ದ ರಾಹುಲ್​ ಬೌಲಿಂಗ್​ ಆಯ್ಕೆ

  ಇನ್ನೂ ಎರಡೂ ತಂಡಗಳಿಗೂ ಐಪಿಎಲ್​ನಲ್ಲಿ ತಮ್ಮ ಪಯಣ ಜೀವಂತವಾಗಿಟ್ಟುಕೊಳ್ಳಲು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಟಾಸ್​ ಇಂದು ಪ್ರಮುಖ ಪಾತ್ರ ವಹಿಸಲಿದೆ. ತಜ್ಞರ ಪ್ರಕಾರ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ತಂಡ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ ಇಂದಿನ ಹೈ ವೋಲ್ಟೇಜ್​ ಪಂದ್ಯದಲ್ಲಿ ಟಾಸ್​ ಗೆಲ್ಲಲು ಕೆಎಲ್​ ರಾಹುಲ್​ ಮತ್ತು ಸಂಜು ಸ್ಯಾಮ್ಸನ್​ ಯೋಚಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡದ ನಡುವೆ ಮೊದಲ ಬ್ಯಾಟಿಂಗ್​ ಮಾಡಿದ ಸಿಎಸ್​ಕೆ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯ ಕೆಕೆಆರ್​ ಮತ್ತು ಆರ್​ಸಿಬಿಯಲ್ಲಿ ಇದು ಉಲ್ಟಾ ಆಗಿತ್ತು. ಎರಡನೇ ಬ್ಯಾಟಿಂಗ್​ ಮಾಡಿದ ಕೊಲ್ಕತ್ತಾ ತಂಡಕ್ಕೆ ಸುಲಭದ ಗೆಲುವು ಸಿಕ್ಕಿತ್ತು. ಇದೀಗ ಪಂಜಾಬ್​ ಕಿಂಗ್ಸ್​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

  ಇದನ್ನೂ ಓದಿ: KKR vs RCB: ತಂಡದ ಆಯ್ಕೆಯಲ್ಲಿ ಎಡವಿದ ವಿರಾಟ್​ ಕೊಹ್ಲಿ; ಸೋಲಿನಿಂದಾದರೂ ಪಾಠ ಕಲಿಯಬೇಕು

  ಕನ್ನಡಿಗರದ್ದೇ ಪಾರುಪತ್ಯ:

  ಪಂಜಾಬ್​ ತಂಡದ ಕೋಚ್​ ಅನಿಲ್​ ಕುಂಬ್ಳೆ, ನಾಯಕ ಕೆಎಲ್​ ರಾಹುಲ್​, ಆರಂಭಿಕ ದಾಂಡಿಗ ಮಯಾಂಕ್​ ಅಗರ್ವಾಲ್​ ತಂಡದಲ್ಲಿದ್ದಾರೆ. ಈ ಮೂವರೂ ಒಂದೇ ರಾಜ್ಯದವರಾಗಿದ್ದು, ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ. ಕೋಚ್​ ಕುಂಬ್ಳೆ ಯುವ ಆಟಗಾರರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಮಯಾಂಕ್​ ಮತ್ತು ರಾಹುಲ್​ ಕರ್ನಾಟಕ ತಂಡವನ್ನು ಆರಂಭಿಕರಾಗಿ ಪ್ರತಿನಿಧಿಸುತ್ತಿದ್ದವರು. ಇಬ್ಬರ ನಡುವೆಯೂ ಉತ್ತಮ ಗೆಳೆತನದ ಜೊತೆಗೆ ಆಡುವ ವೇಳೆ ಕೋಆರ್ಡಿನೇಷನ್​ ಚೆನ್ನಾಗಿದೆ. ಇದು ತಂಡಕ್ಕೆ ಸಹಾಯ ಮಾಡಲಿದೆ.
  Published by:Sharath Sharma Kalagaru
  First published: