PBKS vs RR Match Preview: ಗೆಲುವಿನ ನಿರೀಕ್ಷೆಯಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​; ಯಾರು ಫೇವರೇಟ್​?

PBKS vs RR Match Prediction: ಎರಡೂ ತಂಡಗಳೂ ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇಡೀ ಐಪಿಎಲ್​ ಎಲ್ಲಾ ಆವೃತ್ತಿಗಳನ್ನು ತೆಗೆದುಕೊಂಡರೆ ಪಂಜಾಬ್​ ತಂಡ ಹಲವು ನಾಯಕರು, ಕೋಚ್​ಗಳು, ಜೆರ್ಸಿಯಿಂದ ಹಿಡಿದು ನೂರೆಂಟು ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ. ಇದರಿಂದ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ

ಕೆ.ಎಲ್​ ರಾಹುಲ್

ಕೆ.ಎಲ್​ ರಾಹುಲ್

 • Share this:
  ದುಬೈ: ಲಿಯಾಂ ಲಿವಿಂಗ್​ಸ್ಟೋನ್​ ಮತ್ತು ಎವಿನ್​ ಲೆವಿಸ್​ ರಾಜಸ್ಥಾನ ತಂಡದ ಪರವಾಗಿ ಸ್ಪೋಟಕ ಇನ್ನಿಂಗ್ಸ್​ ಆಡಲು ಸರ್ವ ಸನ್ನದ್ಧರಾಗಿದ್ದರೆ, ಪಂಜಾಬ್​ ಕಡೆಗೆ ಯೂನಿವರ್ಸಲ್​ ಬಾಸ್​ ಕ್ರಿಸ್​ ಗೇಲ್​ ಮತ್ತು ನಿಕೋಲಾಸ್​ ಪೂರನ್​ ಕೂಡ ತಾವೇನು ಕಡಿಮೆ ಇಲ್ಲ ಎಂದು ಸಿದ್ಧತೆ ನಡೆಸಿದ್ದಾರೆ. ಐಪಿಎಲ್​ 2021ರ ಮೊದಲಾರ್ಧದಲ್ಲಿ ಕ್ರಿಸ್​ ಗೇಲ್ಸ್​ ಬ್ಯಾಟ್​ನಿಂದ ಉತ್ತಮ ಪ್ರದರ್ಶನ ಕಂಡುಬಂದಿತ್ತು. ಇನ್ನೂ ನಿಕೋಲಾಸ್​ ಪೂರನ್​ ಪಂದ್ಯದ ಗತಿಯನ್ನೇ ಬದಲಿಸುವ ಆಟಗಾರ. ಆದರೆ ಪೂರನ್​ಗೆ ಫಾರ್ಮ್​ನದ್ದೇ ಕಾಟವಾಗಿದೆ. ಪಂಜಾಬ್​ ತಂಡದ ನಾಯಕ ಕೆ ಎಲ್​ ರಾಹುಲ್​ ಈ ಆವೃತ್ತಿಯಲ್ಲಿ ಹೆಚ್ಚು ರನ್​ಗಳಿಸಿ ಆರೇಂಜ್​ ಕ್ಯಾಪ್​ ಹೊಂದಿದ್ದಾರೆ. ಆದರೆ ಅವರು ಎಷ್ಟು ರನ್​ ಗಳಿಸುತ್ತಾರೆ ಎನ್ನುವದಕ್ಕಿಂತ ತಂಡವನ್ನು ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೆ ತರುವುದೇ ಮುಖ್ಯವಾಗಿದೆ. ಇತ್ತ ಸಂಜು ಸ್ಯಾಮ್ಸನ್​ ಕೂಡ ಕಳಪೆ ಫಾರ್ಮ್​ನಲ್ಲಿದ್ದಾರೆ. ಅವರೂ ಕೂಡ ಉತ್ತಮ ಲಯ ಕಂಡುಕೊಳ್ಳುವ ಜತೆಗೆ, ತಂಡಕ್ಕೆ ಗೆಲುವನ್ನು ತಂದುಕೊಡುವ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.

  ಎರಡೂ ತಂಡಗಳೂ ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇಡೀ ಐಪಿಎಲ್​ ಎಲ್ಲಾ ಆವೃತ್ತಿಗಳನ್ನು ತೆಗೆದುಕೊಂಡರೆ ಪಂಜಾಬ್​ ತಂಡ ಹಲವು ನಾಯಕರು, ಕೋಚ್​ಗಳು, ಜೆರ್ಸಿಯಿಂದ ಹಿಡಿದು ನೂರೆಂಟು ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ. ಇದರಿಂದ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ. ತಂಡ ಸೆಟಲ್​ ಆಗಿ ಆಡುವ ಬದಲು, ಬದಲಾವಣೆಗೆ ಹೊಂದಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಆದರೆ ಈಗ ಬಹುತೇಕ ಕನ್ನಡಿಗರೇ ತುಂಬಿರುವ ತಂಡವನ್ನು ಕನ್ನಡಿಗರಾದ ಕೆಎಲ್​ ರಾಹುಲ್​ ಮತ್ತು ಕೋಚ್​ ಅನಿಲ್​ ಕುಂಬ್ಳೆ ಮತ್ತೆ ಲಯಕ್ಕೆ ಕರೆದು ತರುತ್ತಾರ ಎಂಬುದನ್ನು ಕಾದುನೋಡಬೇಕಿದೆ.

  ಕನ್ನಡಿಗರದ್ದೇ ಪಾರುಪತ್ಯ:

  ಪಂಜಾಬ್​ ತಂಡದ ಕೋಚ್​ ಅನಿಲ್​ ಕುಂಬ್ಳೆ, ನಾಯಕ ಕೆಎಲ್​ ರಾಹುಲ್​, ಆರಂಭಿಕ ದಾಂಡಿಗ ಮಯಾಂಕ್​ ಅಗರ್ವಾಲ್​ ತಂಡದಲ್ಲಿದ್ದಾರೆ. ಈ ಮೂವರೂ ಒಂದೇ ರಾಜ್ಯದವರಾಗಿದ್ದು, ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ. ಕೋಚ್​ ಕುಂಬ್ಳೆ ಯುವ ಆಟಗಾರರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಮಯಾಂಕ್​ ಮತ್ತು ರಾಹುಲ್​ ಕರ್ನಾಟಕ ತಂಡವನ್ನು ಆರಂಭಿಕರಾಗಿ ಪ್ರತಿನಿಧಿಸುತ್ತಿದ್ದವರು. ಇಬ್ಬರ ನಡುವೆಯೂ ಉತ್ತಮ ಗೆಳೆತನದ ಜೊತೆಗೆ ಆಡುವ ವೇಳೆ ಕೋಆರ್ಡಿನೇಷನ್​ ಚೆನ್ನಾಗಿದೆ. ಇದು ತಂಡಕ್ಕೆ ಸಹಾಯ ಮಾಡಲಿದೆ.

  ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಕೊಹ್ಲಿ ಪಡೆ; ಹೀನಾಯ ಸೋಲಿಗೆ ಏನಂದ್ರು ಆರ್​ಸಿಬಿ ಪ್ರೇಮಿಗಳು?

  ಸಿಡಿಯಬೇಕಿದೆ ಸಂಜು ಬ್ಯಾಟ್​:

  ಸಂಜು ಸ್ಯಾಮ್ಸನ್​ ಉತ್ತಮ ಲಯಕ್ಕೆ ಬರಲೇಬೇಕಾದ ಅನಿವಾರ್ಯತೆಯಿದೆ. ಆರಂಭದಲ್ಲಿ ಉತ್ತಮವಾಗಿ ಕಂಡು ಬರುವ ಸಂಜು ಸ್ಯಾಮ್ಸನ್​ ಬೇಗ ತಾಳ್ಮೆ ಕಳೆದುಕೊಂಡು ಹೊಡೆಯಲು ಮುಂದಾಗಿ ವಿಕೆಟ್​ ಒಪ್ಪಿಸುತ್ತಿದ್ದಾರೆ. ಇದು ತಂಡಕ್ಕೆ ಸಮಸ್ಯೆಯಾಗಿ ಕಾಡುತ್ತಿದೆ. ಇನ್ನೂ ಲಿವಿಂಗ್​ಸ್ಟೋನ್​ ಮತ್ತು ಎವಿನ್​ ಲೆವಿಸ್​ ತಂಡ ಸೇರಿಕೊಂಡಿರುವುದು ಹೊಸ ಆಶಾಕಿರಣವಾಗಿ ಕಾಣುತ್ತಿದೆ. ಇಬ್ಬರೂ ಟ್ವೆಂಟಿ 20 ಪಂದ್ಯಗಳಲ್ಲಿ ಉತ್ತಮ ಸ್ಟ್ರೈಕ್​ರೇಟ್​ನಲ್ಲಿ ಆಡುತ್ತಾರೆ. ಇಬ್ಬರನ್ನೂ ಇಂದಿನ ಮ್ಯಾಚ್​ನಲ್ಲಿ ಆಡಿಸುವ ಸಾಧ್ಯತೆ ಹೆಚ್ಚಿದೆ. ಇನ್ನುಳಿದ ಇಬ್ಬರು ವಿದೇಶಿ ಆಟಗಾರರಾಗಿ ಕ್ರಿಸ್​ ಮಾರಿಸ್​ ಮತ್ತು ಮುಸ್ತಫಿಜುರ್​ ರಹೀಂ ಆಡುವ ಸಾಧ್ಯತೆಯಿದೆ. ಎಂದಿನಂತೆ ಪಂಜಾಬ್​ಗೆ ರಾಹುಲ್​ ಮತ್ತು ರಾಜಸ್ಥಾನಕ್ಕೆ ಸಂಜು ಸ್ಯಾಮ್ಸನ್​ ವಿಕೆಟ್​ ಕೀಪಿಂಗ್​ ಮಾಡಲಿದ್ದಾರೆ.

  ಇದನ್ನೂ ಓದಿ: KKR vs RCB: ತಂಡದ ಆಯ್ಕೆಯಲ್ಲಿ ಎಡವಿದ ವಿರಾಟ್​ ಕೊಹ್ಲಿ; ಸೋಲಿನಿಂದಾದರೂ ಪಾಠ ಕಲಿಯಬೇಕು

  ತಂಡಗಳ ವಿವರ:

  Punjab Kings: KL Rahul (captain), Mayank Agarwal, Arshdeep Singh, Ishan Porel, Shahrukh Khan, Mohammed Shami, Nathan Ellis, Adil Rashid, Murugan Ashwin, Harpreet Brar, Moises Henriques, Chris Jordan, Aiden Markram, Mandeep Singh, Darsan Nalkande, Prabhsimran Singh, Ravi BIshnoi, Utkarsh Singh, Fabian Allen, Saurabh Kumar, Jalaj Saxena.

  Rajasthan Royals: Sanju Samson (captain), Liam Livingstone, Evin Lewis, David Miller, Chris Morris, Oshane Thomas, Mustafizur Rahaman, Tabraiz Shamsi, Glenn Phillips, Chetan Sakariya, Riyan Parag, Rahul Tewatia, Akash Singh, Anuj Rawat, KC Cariappa, Yashashvi Jaiswal, Shivam Dube, Shreyas Gopal, Kartik Tyagi, Mayank Markande, Jaydev Unadkat, Kuldip Yadav, Mahipal Lomror
  Published by:Sharath Sharma Kalagaru
  First published: