PBKS vs MI: ಪಂಜಾಬ್ ತಂಡದಲ್ಲಿ ಬದಲಾವಣೆ ಸಾಧ್ಯತೆ: ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ

ಅತ್ತ ಮುಂಬೈ ಇಂಡಿಯನ್ಸ್ 2 ಪಂದ್ಯಗಳನ್ನು ಸೋತರೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ಇದಾಗ್ಯೂ ತಂಡದ ಬ್ಯಾಟ್ಸ್​ಮನ್​ಗಳು ಅಬ್ಬರಿಸದಿರುವುದು ರೋಹಿತ್ ಪಡೆಯ ಚಿಂತೆಗೆ ಕಾರಣವಾಗಿದೆ.

mi vs pbks

mi vs pbks

 • Share this:
  ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಸೆಣಸಲಿದೆ. ಉಭಯ ತಂಡಗಳ ಬಲಿಷ್ಠವಾಗಿದ್ದರೂ, ಎರಡೂ ತಂಡಗಳಿಂದು ಇದುವರೆಗೆ ನಿರೀಕ್ಷಿತ ಮಟ್ಟದ ಆಟ ಮೂಡಿ ಬಂದಿಲ್ಲ ಎಂಬುದು ವಿಶೇಷ. ಪಂಜಾಬ್ ಕಿಂಗ್ಸ್​ ಆಡಿರುವ 4 ಪಂದ್ಯಗಳಲ್ಲಿ 3 ರಲ್ಲಿ ಸೋತಿದೆ. ಅತ್ತ ಮುಂಬೈ ಇಂಡಿಯನ್ಸ್ ತಂಡವು 4 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಜಯ ಸಾಧಿಸಿದೆ. ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನ ಎರಡೂ ತಂಡಗಳ ಚಿಂತೆಗೆ ಕಾರಣವಾಗಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

  ಪಂಜಾಬ್ ತಂಡದ ಆರಂಭಿಕರನ್ನು ಹೊರತುಪಡಿಸಿ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಕೈಕೊಡುತ್ತಿರುವುದು ಒಂದು ಚಿಂತೆಯಾದರೆ, ಬೌಲಿಂಗ್ ವಿಭಾಗವು ಸಂಪೂರ್ಣ ನೆಲಕಚ್ಚಿರುವುದು ಮತ್ತೊಂದು ಚಿಂತೆಗೆ ಕಾರಣವಾಗಿದೆ. ನಾಯಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಹಾಗೂ ಕೆಳ ಕ್ರಮಾಂಕದಲ್ಲಿ ಶಾರುಖ್ ಖಾನ್ ಮಿಂಚಿದ್ದು ಬಿಟ್ಟರೆ ಪಂಜಾಬ್ ತಂಡದ ದೈತ್ಯರಾದ ಕ್ರಿಸ್ ಗೇಲ್, ಸ್ಪೋಟಕ ಬ್ಯಾಟ್ಸ್​ಮನ್ ನಿಕೋಲಸ್ ಪೂರನ್ ಹಾಗೂ ಆಲ್​ರೌಂಡರ್​ಗಳಾದ ಹೆನ್ರಿಕ್ ಮೊಯಿಸಸ್​ ಕಡೆಯಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿಲ್ಲ.

  ಇನ್ನು ಬೌಲಿಂಗ್​ನಲ್ಲಿ ಮೊಹಮ್ಮದ್ ಶಮಿ ಕೆಲ ಓವರ್​ಗಳಲ್ಲಿ ಮಿಂಚಿದರೆ ಮತ್ತೆ ಕೆಲ ಓವರ್​ಗಳಲ್ಲಿ ದುಬಾರಿಯಾಗುತ್ತಿದ್ದಾರೆ. ಹಾಗೆಯೇ ತಂಡದಲ್ಲಿ ಸ್ಥಾನ ಪಡೆದ ವಿದೇಶಿ ವೇಗಿಗಳಾದ ಜೈ ರಿಚರ್ಡ್ಸನ್ ಹಾಗೂ ರಿಲೆ ಮೆರಿಡಿತ್ ಓವರ್​ಗಳನ್ನು ಎದುರಾಳಿ ಬ್ಯಾಟ್ಸ್​ಮನ್​ಗಳು ಧೂಳೀಪಟ ಮಾಡುತ್ತಿದ್ದಾರೆ. ಇದಾಗ್ಯೂ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಮಾತ್ರ ಪಂಜಾಬ್ ಪರ ಕೊಂಚ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ಕೆಲ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಅದರಂತೆ 4 ಪಂದ್ಯಗಳಲ್ಲಿ ವಿಫಲರಾಗಿರುವ ನಿಕೋಲಸ್ ಪೂರನ್ ಸ್ಥಾನದಲ್ಲಿ ಈ ಸಲ ಡೇವಿಡ್ ಮಲಾನ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಅದರ ಜೊತೆ ಮುರುಗನ್ ಅಶ್ವಿನ್ ಬದಲಿಗೆ ರವಿ ಬಿಷ್ಣೋಯ್ ಅವರನ್ನು ಕಣಕ್ಕಿಳಿಸಬಹುದು.

  ಅತ್ತ ಮುಂಬೈ ಇಂಡಿಯನ್ಸ್ 2 ಪಂದ್ಯಗಳನ್ನು ಸೋತರೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ಇದಾಗ್ಯೂ ತಂಡದ ಬ್ಯಾಟ್ಸ್​ಮನ್​ಗಳು ಅಬ್ಬರಿಸದಿರುವುದು ರೋಹಿತ್ ಪಡೆಯ ಚಿಂತೆಗೆ ಕಾರಣವಾಗಿದೆ. ಮುಖ್ಯವಾಗಿ ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಕೈಕೊಡುತ್ತಿರುವುದು ತಂಡದ ಬೃಹತ್ ಮೊತ್ತದ ಆಸೆಗೆ ಹಿನ್ನಡೆಯಾಗುತ್ತಿದೆ. ಇನ್ನು ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಕಡೆಯಿಂದ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬರುತ್ತಿಲ್ಲ. ಹಾಗೆಯೇ ಆರಂಭಿಕರಾಗಿ ರೋಹಿತ್ ಶರ್ಮಾ-ಡಿಕಾಕ್ ಅಬ್ಬರಿಸಿದರೂ, ಈ ಅಬ್ಬರವನ್ನು ದೊಡ್ಡ ಮೊತ್ತವಾಗಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದಾಗ್ಯೂ ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ.

  ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ;

  ಮುಂಬೈ ಇಂಡಿಯನ್ಸ್

  1. ರೋಹಿತ್ ಶರ್ಮಾ (ನಾಯಕ)

  2. ಕ್ವಿಂಟನ್ ಡಿ ಕಾಕ್

  3. ಸೂರ್ಯಕುಮಾರ್ ಯಾದವ್

  4. ಇಶಾನ್ ಕಿಶನ್

  5. ಕೀರನ್ ಪೊಲಾರ್ಡ್

  6. ಹಾರ್ದಿಕ್ ಪಾಂಡ್ಯ

  7. ಕೃನಾಲ್ ಪಾಂಡ್ಯ

  8. ಜಯಂತ್ ಯಾದವ್

  9. ರಾಹುಲ್ ಚಹರ್

  10. ಟ್ರೆಂಟ್ ಬೌಲ್ಟ್

  11. ಜಸ್ಪ್ರಿತ್ ಬುಮ್ರಾ

  ಪಂಜಾಬ್ ಕಿಂಗ್ಸ್

  1. ಕೆ.ಎಲ್ ರಾಹುಲ್ (ನಾಯಕ)

  2. ಮಾಯಾಂಕ್ ಅಗರ್ವಾಲ್

  3. ಕ್ರಿಸ್ ಗೇಲ್

  4. ದೀಪಕ್ ಹೂಡಾ

  5. ಡೇವಿಡ್ ಮಲಾನ್

  6. ಮೊಯಿಸಸ್ ಹೆನ್ರಿಕ್ಸ್

  7. ಶಾರುಖ್ ಖಾನ್

  8. ಫ್ಯಾಬಿಯನ್ ಅಲೆನ್

  9. ರವಿ ಬಿಷ್ಣೋಯ್

  10. ಅರ್ಷ್‌ದೀಪ್ ಸಿಂಗ್

  11. ಮೊಹಮ್ಮದ್ ಶಮಿ

  ಪಂದ್ಯದ ಸ್ಥಳ: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ

  ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್​, ಹಾಟ್​ ಸ್ಟಾರ್

  ಸಮಯ: 7.30
  Published by:zahir
  First published: