HOME » NEWS » Ipl » PBKS VS MI LIVE SCORE IPL 2021 MUMBAI INDIANS ROHIT SHARMA OUT ZP

PBKS vs MI, IPL 2021: ಪಂಜಾಬ್​ಗೆ ಸುಲಭ ಸವಾಲು ನೀಡಿದ ಮುಂಬೈ ಇಂಡಿಯನ್ಸ್​

ಉಭಯ ತಂಡಗಳು ಐಪಿಎಲ್​ನಲ್ಲಿ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್​ 14 ಬಾರಿ ಗೆಲುವು ದಾಖಲಿಸಿದೆ. ಆದರೆ ಬಲಿಷ್ಠ ಮುಂಬೈಗೆ ಪೈಪೋಟಿ ನೀಡಿರುವ ಪಂಜಾಬ್ 12 ಬಾರಿ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

news18-kannada
Updated:April 23, 2021, 9:21 PM IST
PBKS vs MI, IPL 2021: ಪಂಜಾಬ್​ಗೆ ಸುಲಭ ಸವಾಲು ನೀಡಿದ ಮುಂಬೈ ಇಂಡಿಯನ್ಸ್​
PBKS vs MI
  • Share this:
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್​ ಲೀಗ್​ನ 17ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದಿರುವ ಪಂಜಾಬ್ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್​ಗೆ ಆರಂಭಿಕ ಆಘಾತ ನೀಡುವಲ್ಲಿ ಪಂಜಾಬ್ ಕಿಂಗ್ಸ್​ ಯಶಸ್ವಿಯಾಯಿತು. 2ನೇ ಓವರ್​ನ ಅಂತಿಮ ಎಸೆತದಲ್ಲಿ ದೀಪಕ್ ಹೂಡಾ ಕ್ವಿಂಟನ್ ಡಿಕಾಕ್ (3) ವಿಕೆಟ್ ಪಡೆಯುವ ಮೂಲಕ ಮೊದಲ ಯಶಸ್ಸು ತಂದುಕೊಟ್ಟರು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಇಶಾನ್ ಕಿಶನ್ ಕೂಡ ರನ್​ಗಳಿಸಲು ಪರದಾಡಿದರು. ಮೊದಲ 6 ಓವರ್​ನಲ್ಲಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್​ರನ್ನು ಸಂಪೂರ್ಣವಾಗಿ ನಿಯಂತ್ರಿಸಿದ ಪಂಜಾಬ್ ಬೌಲರ್​ಗಳು ನೀಡಿದ್ದ ಕೇವಲ 21 ರನ್ ಮಾತ್ರ.

ಪವರ್​ಪ್ಲೇ ಮುಕ್ತಾಯದ ಬೆನ್ನಲ್ಲೇ ರವಿ ಬಿಷ್ಣೋಯ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಇಶಾನ್ ಕಿಶನ್ (6) ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ರೋಹಿತ್-ಸೂರ್ಯಕುಮಾರ್ ಯಾದವ್ ರನ್​ಗತಿಯನ್ನು ತುಸು ಹೆಚ್ಚಿಸಿದರು. ಪರಿಣಾಮ ಮೊದಲ 10 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತ 49ಕ್ಕೆ ಬಂದು ನಿಂತಿತು.

ಇನ್ನು 40 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ 14 ಓವರ್ ವೇಳೆಗೆ ತಂಡದ ಮೊತ್ತವನ್ನು 88ಕ್ಕೆ ತಂದು ನಿಲ್ಲಿಸಿದರು.  16ನೇ ಓವರ್​ನಲ್ಲಿ ಮುಂಬೈ ಸ್ಕೋರ್ ನೂರರ ಗಡಿ ದಾಟಿತು. 17ನೇ ಓವರ್​ನಲ್ಲಿ ರವಿ ಬಿಷ್ಣೋಯ್, ಸೂರ್ಯಕುಮಾರ್ ಯಾದವ್ (33)​ ಅವರ ವಿಕೆಟ್ ಪಡೆದರು. ಇದರೊಂದಿಗೆ 3ನೇ ವಿಕೆಟ್​ನ 79 ರನ್​ಗಳ ಜೊತೆಯಾಟ ಅಂತ್ಯವಾಯಿತು.

ಮೊಹಮ್ಮದ್ ಶಮಿ ಎಸೆದ 18ನೇ ಓವರ್​ನಲ್ಲಿ ಬೌಂಡರಿ ಲೈನ್​ ಫ್ಯಾಬಿಯನ್ ಅಲೆನ್ ಹಿಡಿದ ಅದ್ಭುತ ಕ್ಯಾಚ್​ಗೆ ರೋಹಿತ್ ಶರ್ಮಾ ಔಟಾದರು. ಇದಕ್ಕೂ ಮುನ್ನ ಹಿಟ್​ಮ್ಯಾನ್ 52 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿಗಳೊಂದಿಗೆ 63 ರನ್​ ಬಾರಿಸಿದ್ದರು. 19ನೇ ಓವರ್​ನಲ್ಲಿ ಅರ್ಷದೀಪ್ ಸಿಂಗ್ 11 ರನ್ ನೀಡಿದರೂ ಹಾರ್ದಿಕ್ ಪಾಂಡ್ಯ (1) ವಿಕೆಟ್ ಪಡೆದರು.

ಅಂತಿಮ ಓವರ್​ನಲ್ಲಿ 6 ರನ್ ನೀಡಿ ಒಂದು ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಶಮಿ ಮುಂಬೈ ಇಂಡಿಯನ್ಸ್ ಮೊತ್ತವನ್ನು 6 ವಿಕೆಟ್​ಗೆ 131 ಕ್ಕೆ ನಿಯಂತ್ರಿಸಿದರು.  ಪಂಜಾಬ್ ಪರ ಶಮಿ ಹಾಗೂ ರವಿ ಬಿಷ್ಣೋಯ್ 2 ವಿಕೆಟ್ ಪಡೆದು ಮಿಂಚಿದರು.

ಸ್ಕೋರ್: 131/6ಓವರ್: 20

ಎರಡೂ ತಂಡಗಳು ಈಗಾಗಲೇ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಪಂಜಾಬ್ ಕಿಂಗ್ಸ್​ ಸತತ ಮೂರು ಸೋಲನುಭವಿಸಿದೆ. ಅತ್ತ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ ಮುಂಬೈ ಇಂಡಿಯನ್ಸ್ 4 ರಲ್ಲಿ 2 ಗೆಲುವು ದಾಖಲಿಸಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಶರಣಾಗಿರುವ ರೋಹಿತ್ ಪಡೆ ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ.

ಉಭಯ ತಂಡಗಳು ಐಪಿಎಲ್​ನಲ್ಲಿ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್​ 14 ಬಾರಿ ಗೆಲುವು ದಾಖಲಿಸಿದೆ. ಆದರೆ ಬಲಿಷ್ಠ ಮುಂಬೈಗೆ ಪೈಪೋಟಿ ನೀಡಿರುವ ಪಂಜಾಬ್ 12 ಬಾರಿ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಸೀಸನ್​ನ 2 ಪಂದ್ಯಗಳಲ್ಲಿ ತಲಾ ಒಂದೊಂದು ಜಯ ಸಾಧಿಸಿರುವುದು ವಿಶೇಷ. ಹಾಗೆಯೇ ಕೊನೆಯ 5 ಮುಖಾಮುಖಿಯಲ್ಲಿ ಪಂಜಾಬ್ ಮುಂಬೈ ವಿರುದ್ದ 2 ಬಾರಿ ಗೆಲುವು ದಾಖಲಿಸಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಮುಂಬೈಗೆ ಪಂಜಾಬ್ ಕಡೆಯಿಂದ ಕಠಿಣ ಪೈಪೋಟಿ ಎದುರಾಗಲಿದೆ ಎಂದೇ ಹೇಳಬಹುದು.
Published by: zahir
First published: April 23, 2021, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories