MI vs PBKS- ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟ ಮುಂಬೈ ಇಂಡಿಯನ್ಸ್​ಗೆ ಪಂಜಾಬ್ ಸವಾಲು

IPL 2021 Match no. 41st, Punjab Kings vs Mumbai Indians at Abu Dhabi: ಸತತ ಮೂರು ಪಂದ್ಯಗಳನ್ನ ಸೋತಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇಂದು ಪಂಜಾಬ್ ಕಿಂಗ್ಸ್ ಸವಾಲು ಎದುರಾಗಿದೆ. ಎರಡೂ ತಂಡಗಳಿಗೆ ಬ್ಯಾಟಿಂಗ್ ಸಮಸ್ಯೆ ಕಾಡುತ್ತಿದೆ. ಬೌಲಿಂಗ್ ವಿಭಾಗ ಪ್ರಬಲವಾಗಿದೆ.

ಮುಂಬೈ ಇಂಡಿಯನ್ಸ್ ತಂಡ

ಮುಂಬೈ ಇಂಡಿಯನ್ಸ್ ತಂಡ

 • Cricketnext
 • Last Updated :
 • Share this:
  ಅಬುಧಾಬಿ, ಸೆ. 28: ಇಲ್ಲಿ ನಡೆಯಲಿರುವ ಈ ಸೀಸನ್ ಐಪಿಎಲ್​ನ 41ನೇ ಪಂದ್ಯದಲ್ಲಿ ಮುಂಬೈ ಮತ್ತು ಪಂಜಾಬ್ ತಂಡಗಳು ಹಣಾಹಣಿ ನಡೆಸಲಿವೆ. ಎರಡೂ ತಂಡಗಳು ಸಮಾನ 8 ಅಂಕಗಳನ್ನ ಹೊಂದಿದ್ದರೂ ಮನಃಸ್ಥಿತಿ ತುಸು ಭಿನ್ನವಾಗಿದೆ. ಮುಂಬೈ ಇಂಡಿಯನ್ಸ್ ತಂಡ ಸತತ ಮೂರು ಸೋಲುಗಳಿಂದ ಅಕ್ಷರಶಃ ಕಂಗೆಟ್ಟಿದೆ. ಯಾವುದೇ ಐಪಿಎಲ್ ಸೀಸನ್​ನಲ್ಲೂ ಮುಂಬೈ ಇಷ್ಟು ಆಘಾತಕ್ಕೊಳಗಾಗಿದ್ದು ಇಲ್ಲ. ಇನ್ನೊಂದೆಡೆ ಕನ್ನಡಿಗ ಕೆ ಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ತುಸು ಆತ್ಮವಿಶ್ವಾಸದಲ್ಲಿದೆ. ಕೆಲವೊಂದು ಅಂಶಗಳಲ್ಲಿ ಕೊರತೆ ಕಾಡುತ್ತಿರುವುದು ಬಿಟ್ಟರೆ ಪಂಜಾಬ್ ತಂಡ ಈ ಪಂದ್ಯ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

  ಮುಂಬೈ ತಂಡದಲ್ಲಿ ನೂರೆಂಟು ಸಮಸ್ಯೆ ಕಾಡುತ್ತಿರುವಂತಿದೆ. ಅದರ ಪ್ರಮುಖ ಬ್ಯಾಟರ್ಸ್ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಇಬ್ಬರೂ ಔಟ್ ಆಫ್ ಫಾರ್ಮ್​ನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಗೆ ಫಿಟ್ನೆಸ್ ಸಮಸ್ಯೆ ಕಾಡುತ್ತಿದೆ. ಅವರೂ ಪೂರ್ಣ ಪ್ರಮಾಣದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ರೋಹಿತ್ ಶರ್ಮಾ, ಕ್ವಿಂಟಾನ್ ಡೀಕಾಕ್ ಮತ್ತು ಕೀರಾನ್ ಪೊಲಾರ್ಡ್ ಮೇಲೆ ಮುಂಬೈ ಬ್ಯಾಟಿಂಗ್ ಹೆಚ್ಚು ಅವಲಂಬಿತವಾಗಬೇಕಾಗಿದೆ. ಮುಂಬೈನ ಬೌಲಿಂಗ್ ವಿಭಾಗ ಮಾತ್ರ ಬಲಿಷ್ಠವಾಗಿದೆ.

  ಅತ್ತ, ಪಂಜಾಬ್ ತಂಡಕ್ಕೂ ಹೆಚ್ಚೂ ಕಡಿಮೆ ಮುಂಬೈ ರೀತಿಯದ್ದೇ ಸಮಸ್ಯೆ. ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಇನ್ನೂ ಸಿಡಿಯುತ್ತಿಲ್ಲ. ನಿಕೋಲಾಸ್ ಪೂರನ್ ಕೂಡ ರನ್ ಗಳಿಸುತ್ತಿಲ್ಲ. ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮತ್ತು ಮಯಂಕ್ ಅಗರ್ವಾಲ್ ಒಳ್ಳೆಯ ಫಾರ್ಮ್​ನಲ್ಲಿರುವುದರಿಂದ ಪಂಜಾಬ್ ಬ್ಯಾಟಿಂಗ್ ತಕ್ಕಮಟ್ಟಿಗೆ ನಿಲ್ಲಲು ಸಾಧ್ಯವಾಗಿದೆ. ಮುಂಬೈನಂತೆ ಪಂಜಾಬ್ ತಂಡದ ಬೌಲಿಂಗ್ ಕೂಡ ಉತ್ತಮವಾಗಿದೆ. ಮೊಹಮ್ಮದ್ ಶಮಿ, ಅರ್ಶ್​ದೀಪ್ ಸಿಂಗ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ರವಿ ಬಿಷ್ಣೋಯ್ ಸ್ಟಾರ್ ಬೌಲರ್ ಆಗಿ ಪರಿಣಮಿಸಿದ್ಧಾರೆ. ಹರ್​ಪ್ರೀತ್ ಬ್ರಾರ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡಬಲ್ಲರು.

  ಕ್ರಿಸ್ ಗೇಲ್ ಓಪನಿಂಗ್ ಬರುತ್ತಾರಾ?: ಕ್ರಿಸ್ ಗೇಲ್ ಈ ಸೀಸನ್​ನಲ್ಲಿ ಸ್ಪಿನ್ನರ್ಸ್ ಎದುರು ಆಡುವಾಗ ಹೆಚ್ಚು ಎಡವುತ್ತಿದ್ದಾರೆ. 27 ಟಿ20 ಪಂದ್ಯಗಳಲ್ಲಿ 13 ಬಾರಿ ಸ್ಪಿನ್ನರ್ಸ್​ಗೆ ಬಲಿಯಾಗಿದ್ದಾರೆ. ಸ್ಪಿನ್ನರ್​ಗಳ ಎದುರು ಸರಾಸರಿ ಪ್ರತೀ 16.5 ಬಾಲ್​ಗೆ ಅವರು ಔಟಾಗಿದ್ದಾರೆ. ಸ್ಪಿನ್ ದಾಳಿಯಿಂದ ಗೇಲ್ ಅವರನ್ನ ರಕ್ಷಿಸಲು ಪಂಜಾಬ್ ಕಿಂಗ್ಸ್ ಬೇರೊಂದು ರಣತಂತ್ರ ಹೂಡುವುದು ಒಳ್ಳೆಯದರು ಕೆಎಲ್ ರಾಹುಲ್ ಜೊತೆ ಮಯಂಕ್ ಬದಲು ಕ್ರಿಸ್ ಗೇಲ್ ಅವರನ್ನ ಓಪನಿಂಗ್​ಗೆ ಕಳುಹಿಸುವುದು ಉತ್ತಮವೆಂಬ ಅಭಿಪ್ರಾಯ ಇದೆ. ಇದಕ್ಕೆ ಪುಷ್ಟಿ ನೀಡುವಂತೆ, ಮಯಂಕ್ ಅಗರ್ವಾಲ್ ಅವರು ಮುಂಬೈ ವೇಗಿ ಜಸ್​ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಎರಡು ಬಾರಿ ಔಟಾಗಿದ್ದಾರೆ. ಅದೂ ಒಂದೂ ರನ್ ಗಳಿಸದೆಯೇ. ಹೀಗಾಗಿ, ಮಯಂಕ್ ಅವರು ಫಸ್ಟ್ ಡೌನ್ ಬಂದರೆ ಬುಮ್ರಾ ಬೌಲಿಂಗ್ ಎದುರಿಸುವ ಪ್ರಮೇಯವನ್ನೂ ತಪ್ಪಿಸಬಹುದು ಎಂಬ ಚಿಂತನೆ ಪಂಜಾಬ್ ತಂಡದಲ್ಲಿದೆ.

  ಇದನ್ನೂ ಓದಿ: IPL 2021- ಟಿ20 ವಿಶ್ವಕಪ್​ನ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನ ಐಪಿಎಲ್​ನಲ್ಲಿ ಹೀಗಿದೆ

  ತಂಡಗಳು:

  ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕ್ವಿಂಟನ್ ಡೀಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರಾನ್ ಪೊಲಾರ್ಡ್, ಕೃಣಾಲ್ ಪಾಂಡ್ಯ, ಅಡಂ ಮಿಲ್ನೆ/ನೇಥನ್ ಕೌಲ್ಟರ್ ನೈಲ್, ರಾಹುಲ್ ಚಾಹರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.

  ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ: ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್, ಕ್ರಿಸ್ ಗೇಲ್, ಏಡನ್ ಮರ್ಕ್ರಮ್, ನಿಕೋಲಾಸ್ ಪೂರನ್, ದೀಪಕ್ ಹೂಡ, ಹರ್​ಪ್ರೀತ್ ಬ್ರಾರ್, ರವಿ ಬಿಷ್ಣೋಯ್, ನೇಥನ್ ಎಲಿಸ್/ಕ್ರಿಸ್ ಜಾರ್ಡನ್, ಅರ್ಶ್​ದೀಪ್ ಸಿಂಗ್, ಮೊಹಮ್ಮದ್ ಶಮಿ.
  Published by:Vijayasarthy SN
  First published: