ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ, ಶನಿವಾರದ ದಿನದ ಮೊದಲ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ಅನ್ನು (KKR vs PBKS) ಎದುರಿಸುತ್ತಿದೆ. ಎರಡೂ ತಂಡಗಳು ಹೊಸ ನಾಯಕನೊಂದಿಗೆ ಈ ಟೂರ್ನಿಯ ಹೊಸ ಋತುವನ್ನು ಪ್ರವೇಶಿಸಿದೆ. ಪಂಜಾಬ್ ತಂಡದ ನಾಯಕತ್ವವನ್ನು ಶಿಖರ್ ಧವನ್ ನಿರ್ವಹಿಸಲಿದ್ದು, ಕೋಲ್ಕತ್ತಾವನ್ನು ನಿತೀಶ್ ರಾಣಾ ನಾಯಕತ್ವ ವಹಿಸಲಿದ್ದಾರೆ. ಟಾಸ್ ಗೆದ್ದ ಕೋಲ್ಕತ್ತಾ ಮೊದಲು ಬೌಲಿಂಗ್ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ ಕೆಕೆಆರ್ ತಂಡಕ್ಕೆ 192 ರನ್ ಟಾರ್ಗೆಟ್ ನೀಡಿದೆ.
ಪಂಜಾಬ್ ಭರ್ಜರಿ ಬ್ಯಾಟಿಂಗ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಶಿಖರ್ ಧವನ್ 40 ರನ್, ಪ್ರಭಾಸಿಮ್ರಾನ್ ಸಿಂಗ್ 23 ರನ್, ಭಾನುಕಾ ರಾಜಪಕ್ಸೆ 50 ರನ್, ಜಿತೇಶ್ ಶರ್ಮಾ 21 ರನ್, ಸಿಕಂದರ್ ರಜಾ 16 ರನ್, ಸ್ಯಾಮ್ ಕರಣ್ 26 ರನ್ ಮತ್ತು ಶಾರುಖ್ ಖಾನ್ 11 ರನ್ ಗಳಿಸಿದರು.
Innings Break!@PunjabKingsIPL post a commanding total of 191/5 on the board 👌🏻👌🏻@KKRiders have a challenging task ahead of them. Can they do it 🤔
Scorecard ▶️ https://t.co/UeBnlhdZdr#TATAIPL | #PBKSvKKR pic.twitter.com/LiybpL5fEy
— IndianPremierLeague (@IPL) April 1, 2023
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಲಿಲ್ಲ. ಕೆಕೆಆರ್ ಪರ ಟೀಮ್ ಸೌಥಿ 2 ವಿಕೆಟ್ ಪಡೆದರು. ಉಳಿದಂತೆ ಉಮೇಶ್ ಯಾದವ್, ಸುನೀಲ್ ನರೇನ್ ಮತ್ತು ವರುಣ್ ಚರ್ಕವರ್ತಿ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: LSG vs DC: ಲಕ್ನೋದಲ್ಲೂ ಕನ್ನಡಿಗನದ್ದೇ ಹವಾ! ಕೆಎಲ್ ರಾಹುಲ್ ಟೀ-ಶರ್ಟ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಮಳೆ ಅಡ್ಡಿಪಡಿಸುತ್ತಾ?:
ಪಂಜಾಬ್ ಕಿಂಗ್ಸ್ ತಂಡವು ಮೊಹಾಲಿಯ ತವರು ಮೈದಾನದಲ್ಲಿ ಕೋಲ್ಕತ್ತಾ ವಿರುದ್ಧ ಆಡಲಿದೆ. ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಮಳೆಯ ಛಾಯೆ ಆವರಿಸಿದೆ. ಪಂದ್ಯದ ವೇಳೆ ಶೇ.50ರಷ್ಟು ಮಳೆ ಬೀಳುವ ಸಾಧ್ಯತೆ ಇದೆ. ಪಂದ್ಯಕ್ಕೂ ಒಂದು ದಿನ ಮೊದಲು ಮಳೆ ಸುರಿದಿದ್ದರಿಂದ ಕೋಲ್ಕತ್ತಾ ನಾಯಕ ನಿತೀಶ್ ರಾಣಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಕಾರ್ ಮೇಲೆ ಬಾಲ್ ಬಿದ್ರೆ 5 ಲಕ್ಷ:
ಜೊತೆಗೆ Tiago.ev ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ವಿಜೇತರು ಹೊಚ್ಚಹೊಸ Tata Tiago.ev ಅನ್ನು ಚಾಲನೆ ಮಾಡುತ್ತಾರೆ. ಅಲ್ಲದೆ, ಟಾಟಾ ಮೋಟಾರ್ಸ್ ಕರ್ನಾಟಕದಲ್ಲಿ ಕಾಫಿ ತೋಟಗಳ ಜೈವಿಕ ವೈವಿಧ್ಯತೆಯನ್ನು ಸುಧಾರಿಸಲು ಮರಗಳನ್ನು ನೆಡಲು 5,00,000 ರೂ. ನೀಡಲು ಮುಂದಾಗಿದೆ. ಆದರೆ IPL-2023 ರಲ್ಲಿ ಬ್ಯಾಟ್ಸ್ಮನ್ Tiago.ev ನ ಕಾರಿಗೆ ಚೆಂಡು ಬಡಿದರೆ ಟಾಟಾ ಮೋಟಾರ್ಸ್ ಈ ಕೊಡುಗೆಯನ್ನು ಅಂದರೆ 5 ಲಕ್ಷ ನೀಡುತ್ತದೆ. ಕಾರಿಗೆ ಚೆಂಡು ಎಷ್ಟು ಬಾರಿ ಬಡಿದರೂ ಅಷ್ಟೂ ಹಣವನ್ನು ದಾನ ಮಾಡುವುದಾಗಿ ಘೋಷಿಸಿದೆ.
ಪಂಜಾಬ್ ಮತ್ತು ಕೋಲ್ಕತ್ತಾ ಪ್ಲೇಯಿಂಗ್ 11:
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಶಿಖರ್ ಧವನ್ (c), ಪ್ರಭಾಸಿಮ್ರಾನ್ ಸಿಂಗ್ (WK), ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕರಣ್, ಸಿಕಂದರ್ ರಜಾ, ನಾಥನ್ ಎಲ್ಲಿಸ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.
ಕೋಲ್ಕತ್ತಾ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್ (WK), ಮನದೀಪ್ ಸಿಂಗ್, ನಿತೀಶ್ ರಾಣಾ (c), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ, ಅನುಕುಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ