HOME » NEWS » Ipl » PBKS VS CSK WHO WILL WIN TODAYS IPL 2021 MATCH ZP

PBKS vs CSK: ಇಂದು ಪಂಜಾಬ್ ಕಿಂಗ್ಸ್​ಗೆ ಸೂಪರ್ ಕಿಂಗ್ಸ್​ ಸವಾಲು..!

ಇನ್ನು ಎರಡೂ ತಂಡಗಳನ್ನು ಮುನ್ನಡೆಸುತ್ತಿರುವು ವಿಕೆಟ್ ಕೀಪರ್​ಗಳು ಎಂಬುದು ವಿಶೇಷ. ಹೌದು, ಪಂಜಾಬ್ ಪರ ರಾಹುಲ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದರೆ, ಕಳೆದ 13 ಸೀಸನ್​ಗಳಿಂದ ಸಿಎಸ್​ಕೆ ನಾಯಕ+ಕೀಪರ್​ ಆಗಿ ಧೋನಿ ಕಾಣಿಸಿಕೊಳ್ಳುತ್ತಿದ್ದಾರೆ.

news18-kannada
Updated:April 16, 2021, 2:50 PM IST
PBKS vs CSK: ಇಂದು ಪಂಜಾಬ್ ಕಿಂಗ್ಸ್​ಗೆ ಸೂಪರ್ ಕಿಂಗ್ಸ್​ ಸವಾಲು..!
PBKS-vs-CSK
  • Share this:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ಗೆ ಪಂಜಾಬ್ ಕಿಂಗ್ಸ್​ ಸವಾಲೆಸೆಯಲಿದೆ. ಉಭಯ ತಂಡಗಳು ಈಗಾಗಲೇ ಒಂದೊಂದು ಪಂದ್ಯಗಳನ್ನಾಡಿದ್ದು, ಮಹೇಂದ್ರ ಸಿಂಗ್ ಧೋನಿ ಪಡೆ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಗ್ಗರಿಸಿದೆ. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಪಂಜಾಬ್ ಕಿಂಗ್ಸ್​ ಮೊದಲ ಜಯ ಸಾಧಿಸಿದೆ.

ಇನ್ನು ಎರಡೂ ತಂಡಗಳನ್ನು ಮುನ್ನಡೆಸುತ್ತಿರುವು ವಿಕೆಟ್ ಕೀಪರ್​ಗಳು ಎಂಬುದು ವಿಶೇಷ. ಹೌದು, ಪಂಜಾಬ್ ಪರ ರಾಹುಲ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದರೆ, ಕಳೆದ 13 ಸೀಸನ್​ಗಳಿಂದ ಸಿಎಸ್​ಕೆ ನಾಯಕ+ಕೀಪರ್​ ಆಗಿ ಧೋನಿ ಕಾಣಿಸಿಕೊಳ್ಳುತ್ತಿದ್ದಾರೆ. ಉಭಯ ತಂಡಗಳಲ್ಲೂ ಬಲಿಷ್ಠ ಆಟಗಾರರಿದ್ದರೂ ಚೆನ್ನೈ ಕಡೆಯಿಂದ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡು ಬಂದಿರಲಿಲ್ಲ.

ಇತ್ತ ಪಂಜಾಬ್ ಕಿಂಗ್ಸ್ ರಾಜಸ್ಥಾನ್ ವಿರುದ್ದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ, ತಂಡದ ಫೀಲ್ಡಿಂಗ್ ಹಾಗೂ ಬೌಲಿಂಗ್​ ಕೈಕೊಟ್ಟಿತ್ತು ಎಂದರೆ ತಪ್ಪಾಗಲಾರದು. ಹೀಗಾಗಿ ಆರ್​ಆರ್​ ವಿರುದ್ದ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವು ಅಂತಿಮ ಓವರ್​ನ ಕೊನೆಯ ಎಸೆತದಲ್ಲಿ 4 ರನ್​ಗಳಿಂದ ರೋಚಕವಾಗಿ ಗೆಲ್ಲುವಂತಾಯಿತು.

ಇದಾಗ್ಯೂ ಸಿಎಸ್​ಕೆ ತಂಡಕ್ಕೆ ತಮ್ಮ ಆಗಮನವನ್ನು ಸುರೇಶ್ ರೈನಾ ಅರ್ಧಶತಕದೊಂದಿಗೆ ಘೋಷಿಸಿದ್ದು, ಹಾಗೆಯೇ ಅಂತಿಮ ಹಂತದಲ್ಲಿ ಮಿಂಚುವ ಮೂಲಕ ಸ್ಯಾಮ್ ಕರನ್ ಕೂಡ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದರ ಹೊರತಾಗಿ ಉಳಿದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿ ಬರದಿರುವುದು ಧೋನಿಯ ಚಿಂತೆಯನ್ನು ಹೆಚ್ಚಿಸಿದೆ. ಪ್ರಮುಖ ಬ್ಯಾಟ್ಸ್​ಮನ್​ಗಳ ವೈಫಲ್ಯದ ಹೊರತಾಗಿಯೂ ಡೆಲ್ಲಿ ವಿರುದ್ದ 188 ರನ್ ಬಾರಿಸಿದ್ದ ಸಿಎಸ್​ಕೆ ಇಂದು ಕೂಡ ಬೃಹತ್ ಮೊತ್ತ ಪೇರಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಎರಡು ಬಲಿಷ್ಠ ಬ್ಯಾಟಿಂಗ್ ಪಡೆಗಳ ನಡುವಣ ಕದನ ಇಂದು ನಡೆಯಲಿದ್ದು, ಯಾವ ತಂಡದ ವಿಕೆಟ್ ಕೀಪರ್​ಗೆ ಜಯ ದಕ್ಕಲಿದೆ ಕಾದು ನೋಡಬೇಕಿದೆ.

ಸ್ಥಳ: ವಾಂಖೆಡೆ ಸ್ಟೇಡಿಯಂ
ಪಂದ್ಯದ ಸಮಯ: 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್​, ಹಾಟ್​ಸ್ಟಾರ್ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ, ಸುರೇಶ್ ರೈನಾ, ನಾರಾಯಣ್ ಜಗದೀಸನ್, ರುತುರಾಜ್ ಗೈಕ್ವಾಡ್, ಕೆ.ಎಂ.ಆಸಿಫ್, ಕರ್ನ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಎಂ.ಹರಿಶಂಕರ್ ರೆಡ್ಡಿ, ಕೆ.ಭಗತ್ ವರ್ಮಾ, ಸಿ ಹರಿ ನಿಶಾಂತ್

ಪಂಜಾಬ್ ಕಿಂಗ್ಸ್​: ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಅರ್ಷ್​ದೀಪ್ ಸಿಂಗ್ , ಡೇವಿಡ್ ಮಲಾನ್, ಜೇ ರಿಚರ್ಡ್ಸನ್, ಶಾರುಖ್ ಖಾನ್, ರಿಲೆ ಮೆರೆಡಿತ್, ಮೊಯಿಸಸ್ ಹೆನ್ರಿಕ್ಸ್, ಜಲಜ್ ಸಕ್ಸೇನಾ, ಉತ್ಕರ್ಶ್ ಸಿಂಗ್, ಫ್ಯಾಬಿಯನ್ ಅಲೆನ್, ಸುಮಿತ್ ಕುಮಾರ್
Published by: zahir
First published: April 16, 2021, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories