Devdutt Padikkal| ದೇವದತ್ ಪಡಿಕ್ಕಲ್‌ ಅನ್ನು ಧೋನಿಗೆ ಹೋಲಿಸಿ ಟ್ರೋಲ್ ಮಾಡಿದ ನೆಟ್ಟಿಗರು!

ಕ್ರಿಕೆಟ್ ಪಂಡಿತ್ ಹಾಗೂ ಕಮೆಂಟೇಟರ್ ಹರ್ಷ ಭೋಗ್ಲೆ ಪಡಿಕ್ಕಲ್ ಅವರನ್ನು ಬೆಂಬಲಿಸಿದ್ದಾರೆ. ಪಡಿಕಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡದೇ ಇದ್ದರೂ ಯುವ ಆಟಗಾರ ಹಾಗೂ ಆಟದ ಒಂದು ಭಾಗವಾಗಿದೆ. ಆತ ಉತ್ತಮ ಆಟಗಾರನಾಗುತ್ತಾನೆ ಎಂದು ಟ್ವೀಟ್ ಮಾಡಿದ್ದಾರೆ.

ವೈರಲ್ ಆಗಿರುವ ಪೋಸ್ಟರ್​.

ವೈರಲ್ ಆಗಿರುವ ಪೋಸ್ಟರ್​.

  • Share this:
    ಸನ್ ರೈಸರ್ಸ್ ಹೈದರಾಬಾದ್‌ನ (Sunrisers Hyderabad) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಸೋಲನ್ನು ಅನುಭವಿಸಿದ್ದು ಬೆಂಗಳೂರು ತಂಡವು, ಸನ್ ರೈಸರ್ಸ್ ಹೈದರಾಬಾದ್‌ನ ಅಸಾಧಾರಣ ಬೌಲಿಂಗ್ ದಾಳಿಯಿಂದ ದಿಗ್ಭ್ರಮೆಗೊಂಡಿತು ಎಂದೇ ಹೇಳಬಹುದು. ವಿರಾಟ್ ಕೊಹ್ಲಿ ಹಾಗೂ ತಂಡವನ್ನು ಐಪಿಎಲ್ 2021 ರಲ್ಲಿ ಅಗ್ರ ಎರಡು ಸ್ಥಾನವನ್ನು ಪ್ರವೇಶಿಸಲು ಈ ಸೋಲು ನಿರ್ಬಂಧವನ್ನೊಡ್ಡಿತು ಎಂದೇ ಹೇಳಬಹುದು. ರಾಯಲ್ ಚಾಲೆಂಜರ್ಸ್ 4 ರನ್‌ಗಳಿಂದ ಹೈದ್ರಾಬಾದ್‌ ಮುಂದೆ ಸೋಲುಣ್ಣಬೇಕಾಯಿತು. ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡ SRH (ಸನ್ ರೈಸರ್ಸ್ ಹೈದರಾಬಾದ್) ಕೊಹ್ಲಿ ತಂಡಕ್ಕೆ 141 ರನ್‌ಗಳ ಪಣವೊಡ್ಡಿತು. ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (Devdutt Padikkal) 52 ಎಸೆತಗಳಲ್ಲಿ 41 ರನ್‌ಗಳನ್ನು ಗಳಿಸಲು ಮಾತ್ರವೇ ಸಾಧ್ಯವಾಯಿತು.



    ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿಡಿ ವಿಲಿಯರ್ಸ್ ಕೊನೆಯ ಓವರ್‌ನಲ್ಲಿ ಸಿಕ್ಸ್ ಸಿಡಿಸಿದ್ದು ಗೆಲುವಿನ ಭರವಸೆಯನ್ನು ಮೂಡಿಸಿದ್ದಂತೂ ಸುಳ್ಳಲ್ಲ. ಭುವನೇಶ್ವರ್ ಕುಮಾರ್ ಅವರ ಅದ್ಭುತ ಅಂತಿಮ ಓವರ್ SRH ಗೆ ಅದ್ಭುತ ವಿಜಯವನ್ನು ತಂದುಕೊಟ್ಟಿತು. ಪಡಿಕ್ಕಲ್ ಪಂದ್ಯದಲ್ಲಿ ಚೆನ್ನಾಗಿ ಆಡಲಿಲ್ಲವೆಂಬುದು ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯವಾಗಿದ್ದು ರಾಯಲ್ ಚಾಲೆಂಜರ್ಸ್ ಸೋಲಿಗೆ ಇದು ಪ್ರಮುಖ ಕಾರಣವಾಗಿದೆ ಎಂದು ಸಾಮಾಜಿಕ ತಾಣದಲ್ಲಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಿಎಸ್‌ಕೆ ನಾಯಕನಾಗಿರುವ ಧೋನಿಗೆ ಪಡಿಕ್ಕಲ್ ಅವರನ್ನು ಹೋಲಿಸಿದ್ದು ಧೋನಿ ಈ ಹಿಂದೆ ಬಾಲ್‌ಗಳನ್ನು ವ್ಯರ್ಥಮಾಡುವುದರಲ್ಲಿ ನಿಸ್ಸೀಮರಾಗಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.



    ಸಾಮಾಜಿಕ ತಾಣದಲ್ಲಿ ಹಲವಾರು ಬಳಕೆದಾರರು ಧೋನಿಯ ಶಿಷ್ಯ ಪಡಿಕ್ಕಲ್ ಎಂಬ ವ್ಯಂಗ್ಯೋಕ್ತಿಗಳನ್ನು ಬಳಸಿದ್ದು ಧೋನಿಯಿಂದ ಪಡಿಕ್ಕಲ್ ತರಬೇತಿ ಪಡೆದುಕೊಂಡಿದ್ದಾರೆ ಎಂದು ಹಾಸ್ಯಮಾಡಿದ್ದಾರೆ. ತಂಡದ ಅತ್ಯಂತ ಮೌಲ್ಯಯುತ ಆಸ್ತಿಯಿಂದಲೇ ತಂಡಕ್ಕೆ ಸೋಲು ಎಂಬುದಾಗಿ ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ಈತ ಗೇಮ್ ಚೇಂಜರ್ ಎಂದು ಮತ್ತೊಬ್ಬ ಬಳಕೆದಾರರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.



    ಇನ್ನು ಕೆಲವು ಬಳಕೆದಾರರು ಹಾಸ್ಯಮಯ ಚಿತ್ರದ ತುಣುಕುಗಳನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿ 52 ಬಾಲ್‌ಗೆ ಪಡಿಕ್ಕಲ್ 41 ರನ್‌ಗಳನ್ನು ನೋಡಿ ಕಣ್ಣೀರು ಹಾಕಿದ ತುಣುಗಳನ್ನು ಸೇರಿಸಿ ಹಾಸ್ಯಮಯ ಕಾಮೆಂಟ್‌ಗಳನ್ನು ನೀಡಿದ್ದಾರೆ.









    ಇಂದು ಸನ್ ರೈಸರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಪಂದ್ಯದಲ್ಲಿ ಪಡಿಕ್ಕಲ್ ಧೋನಿಯಂತೆ ಆಡಿದ್ದಾರೆ ಹೀಗಾಗಿ ಸಿಎಸ್‌ಕೆ ಯನ್ನು 2 ನೇ ಸ್ಥಾನಕ್ಕೆ ಅರ್ಹವಾಗಿಸಲು ಕಾರಣವಾಗಿದೆ ಎಂದು ಶೀರ್ಷಿಕೆ ನೀಡಿ ವ್ಯಕ್ತಿಯೊಬ್ಬರು ಅಳುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

    ಧೋನಿಯನ್ನು ಟ್ರೋಲ್ ಮಾಡಿದ್ದೇಕೆ?

    ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ಕೀಪರ್ ಧೋನಿ ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟ್ ಅಭಿಮಾನಿಗಳ ಅಸಮಾಧಾನಕ್ಕೆ ಗುರಿಯಾದರು. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 137 ಟಾರ್ಗೆಟ್‌ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ನಿಧಾನವಾಗಿ ಆದರೆ ಖಚಿತವಾಗಿ ಮೂರು ವಿಕೆಟ್‌ಗಳೊಂದಿಗೆ ಗೆಲುವಿನ ಅಗ್ರಸ್ಥಾನಕ್ಕೇರಿದೆ. ಶಿಮ್ರೊನ್ ಹೆಟ್ಮೆಯರ್ ಅಬ್ಬರದ ಹೊಡೆತದಿಂದ 19.4 ಓವರ್‌ಗಳಲ್ಲಿ ಡೆಲ್ಲಿ 3 ವಿಕೆಟ್ ಗೆಲುವು ಕಂಡಿತು. ಎರಡೂ ತಂಡಗಳು ಈಗಾಗಲೇ ಪ್ಲೇಆಫ್‌ಗಳಲ್ಲಿ ಇರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಅಷ್ಟೇನೂ ಕಹಿಭಾವನೆಯುಂಟು ಮಾಡಲಿಲ್ಲ ಆದರೆ ಧೋನಿಯವರು 67 ಸ್ಟ್ರೈಕ್ ರೇಟ್‌ನಲ್ಲಿ 27 ಎಸೆತಗಳಿಗೆ 18 ರನ್‌ಗಳನ್ನು ದಾಖಲಿಸಿದ್ದು ಅಭಿಮಾನಿಗಳಿಗೆ ವಿಷಾದವನ್ನುಂಟು ಮಾಡಿತು.

    ಕಲಿಯುವ ಸಮಯ:

    ಕ್ರಿಕೆಟ್ ಪಂಡಿತ್ ಹಾಗೂ ಕಮೆಂಟೇಟರ್ ಹರ್ಷ ಭೋಗ್ಲೆ ಪಡಿಕ್ಕಲ್ ಅವರನ್ನು ಬೆಂಬಲಿಸಿದ್ದಾರೆ. ಪಡಿಕಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡದೇ ಇದ್ದರೂ ಯುವ ಆಟಗಾರ ಹಾಗೂ ಆಟದ ಒಂದು ಭಾಗವಾಗಿದೆ. ಆತ ಉತ್ತಮ ಆಟಗಾರನಾಗುತ್ತಾನೆ ಎಂದು ಟ್ವೀಟ್ ಮಾಡಿದ್ದಾರೆ.
    First published: