• Home
  • »
  • News
  • »
  • ipl
  • »
  • IPL 2023: ನವೆಂಬರ್ 15ರೊಳಗೆ ಉಳಿಸಿಕೊಂಡಿರುವ ಆಟಗಾರರ ಲಿಸ್ಟ್ ಸಲ್ಲಿಕೆಗೆ ಸೂಚನೆ, ಐಪಿಎಲ್ ಅಪ್ಡೇಟ್​

IPL 2023: ನವೆಂಬರ್ 15ರೊಳಗೆ ಉಳಿಸಿಕೊಂಡಿರುವ ಆಟಗಾರರ ಲಿಸ್ಟ್ ಸಲ್ಲಿಕೆಗೆ ಸೂಚನೆ, ಐಪಿಎಲ್ ಅಪ್ಡೇಟ್​

ಐಪಿಎಲ್‌ - 2023

ಐಪಿಎಲ್‌ - 2023

ಬಿಸಿಸಿಐ ಐಪಿಎಲ್‌ 2022ರ ಹರಾಜು ಪ್ರಕ್ರಿಯೆಯಲ್ಲಿ ಖರೀದಿಯಾಗದ ಮತ್ತು ಉಳಿದುಕೊಂಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಸಲ್ಲಿಸಲು ಎಲ್ಲಾ ಹತ್ತು ಐಪಿಎಲ್‌ ಫ್ರಾಂಚೈಸಿಗಳನ್ನು ಕೇಳಿದೆ. ಈ ಮೂಲಕ ಮುಂಬರುವ ಕಿರು-ಹರಾಜಿನ ಪ್ರಕ್ರಿಯೆಗೆ ಬಿಸಿಸಿಐ ಚಾಲನೆ ನೀಡಿದೆ. 

  • Share this:

ಐಪಿಎಲ್‌ - 2023ರ (IPL-2023) ಹರಾಜು ಪ್ರಕ್ರಿಯೆಗೆ ಮೂಹೂರ್ತ ಫಿಕ್ಸ್‌ ಆಗಿದ್ದು, ಡಿಸೆಂಬರ್‌ 16 ರಂದು ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಇತ್ತ ಬಿಸಿಸಿಐ ಐಪಿಎಲ್‌ 2022ರ ಹರಾಜು (Auction) ಪ್ರಕ್ರಿಯೆಯಲ್ಲಿ ಖರೀದಿಯಾಗದ ಮತ್ತು ಉಳಿದುಕೊಂಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಸಲ್ಲಿಸಲು ಎಲ್ಲಾ ಹತ್ತು ಐಪಿಎಲ್‌ ಫ್ರಾಂಚೈಸಿಗಳನ್ನು (IPL Franchise) ಕೇಳಿದೆ. ಈ ಮೂಲಕ ಮುಂಬರುವ ಕಿರು-ಹರಾಜಿನ ಪ್ರಕ್ರಿಯೆಗೆ ಬಿಸಿಸಿಐ ಚಾಲನೆ ನೀಡಿದೆ. ಮೆಗಾ ಹರಾಜಿಗೂ ಮೊದಲು ಎಲ್ಲ ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. 


5 ಕೋಟಿ ರೂಪಾಯಿ ಹೆಚ್ಚಳ
ಆದರೆ ಈ ಮಿನಿ ಹರಾಜಿನಲ್ಲಿ ಅಂತಹ ಆಯ್ಕೆ ಇರುವುದಿಲ್ಲ. ತಂಡ ಹಿಂದಿನ ಹರಾಜಿನಲ್ಲಿ ಖರ್ಚು ಮಾಡಿದ ಹಣದ ಮೇಲೆ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ (ಅಂದಾಜು US $607,000) ಖರ್ಚು ಮಾಡಲು ಈ ಬಾರಿ ಅವಕಾಶವಿದೆ. ಇದು ಒಟ್ಟಾರೆ 95 ಕೋಟಿ ರೂಪಾಯಿ (ಸುಮಾರು US $ 11.5 ಮಿಲಿಯನ್) ಮೀರಬಾರದು ಎಂಬ ಷರತ್ತುಗಳನ್ನು ಹೊಂದಿದೆ.


ಯಾವ ತಂಡದ ಬಳಿ ಎಷ್ಟು ಹಣ ಬಾಕಿಯಿದೆ?
ಕಳೆದ ವರ್ಷದ ಹರಾಜಿನ ನಂತರ ಪಂಜಾಬ್ ಕಿಂಗ್ಸ್‌ ತಂಡ 3.45 ಕೋಟಿ ರೂಪಾಯಿ ಉಳಿಸಿಕೊಂಡಿದ್ದು, ಹೆಚ್ಚು ಹಣವನ್ನು ಉಳಿಸಿಕೊಂಡ ತಂಡವಾಗಿದೆ. ಆದರೆ ಇತ್ತ ಲಕ್ನೋ ಸೂಪರ್ ಜೈಂಟ್ಸ್ ತನ್ನ ಎಲ್ಲಾ ಹಣವನ್ನು ಬಿಡ್‌ನಲ್ಲಿ ಬಳಸಿಕೊಂಡು ಖಜಾನೆಯನ್ನು ಬರಿದು ಮಾಡಿಕೊಂಡಿದೆ.


ಇದನ್ನೂ ಓದಿ: T20 WC 2022 IND vs PAK: ಭಾರತ-ಪಾಕ್​ ಪಂದ್ಯ; ಲೈವ್ ಸ್ಟ್ರೀಮಿಂಗ್, ಮ್ಯಾಚ್​ ಸಮಯದ ಸಂಪೂರ್ಣ ವಿವರ


ಚೆನ್ನೈ ಸೂಪರ್ ಕಿಂಗ್ಸ್ 2.95 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 1.55 ಕೋಟಿ, ರಾಜಸ್ಥಾನ್ ರಾಯಲ್ಸ್ 0.95 ಕೋಟಿ ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್ 0.45 ಕೋಟಿ, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 0.15 ಕೋಟಿಯನ್ನು ಉಳಿಸಿಕೊಂಡಿದ್ದರೆ, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಲಾ 0.10 ಕೋಟಿ ರೂಪಾಯಿ ಹಣವನ್ನು ಹೊಂದಿದೆ.


ದುಬಾರಿ ಬಿಡ್‌ಗೆ ಸಾಕ್ಷಿಯಾಗಿದ್ದ ಈ ಹಿಂದಿನ ಮಿನಿ ಹರಾಜು
ಫ್ರಾಂಚೈಸಿಗಳು ಕಡಿಮೆ ಹಣ ಹೊಂದಿದ್ದರೂ ಈ ಹಿಂದಿನ ಹರಾಜಿನಲ್ಲಿ ದೊಡ್ಡ ದೊಡ್ಡ ಬಿಡ್‌ಗಳನ್ನೇ ಆಟಗಾರರ ಮೇಲೆ ನಡೆಸಿದೆ. ಇದಕ್ಕೆ ಉತ್ತಮ ನಿದರ್ಶನವೆಂದರೆ 2021ರ ಹರಾಜು ಪ್ರಕ್ರಿಯೆ. ಇಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕ್ರಿಸ್ ಮೋರಿಸ್ ಅವರನ್ನು ರಾಜಸ್ಥಾನ ರಾಯಲ್ಸ್ ಬರೋಬ್ಬರಿ 16.25 ಕೋಟಿ ನೀಡಿ ಖರೀದಿಸಿತ್ತು. ಇದು ಈವರೆಗಿನ ದೊಡ್ಡ ಖರೀದಿ ಮೊತ್ತವಾಗಿ ಉಳಿದಿದೆ.


2015ರಲ್ಲಿ ಸಿಕ್ಸರ್‌ ಸಿಂಗ್‌, ಭಾರತದ ಆಲ್‌ರೌಂಡರ್‌ ಯುವರಾಜ್ ಸಿಂಗ್‌ಗೆ ದೆಹಲಿ ತಂಡ 16 ಕೋಟಿ ನೀಡಿ ಖರೀದಿ ಮಾಡಿತ್ತು. 2020 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ ಪ್ಯಾಟ್ ಕಮ್ಮಿನ್ಸ್‌ಗೆ 15.5 ಕೋಟಿ ನೀಡಿ ಖರೀದಿ ಮಾಡಿತ್ತು. ಇದು ಕೂಡ ದೊಡ್ಡ ಅಮೌಂಟ್‌ ಆಗಿದೆ. ಇನ್ನೂ 2017 ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್‌ನಿಂದ ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ ನೀಡಲಾಗಿತ್ತು. ಈ ಮೂಲಕ ಸಾಗರೋತ್ತರ ಆಟಗಾರರು ಮಿನಿ-ಹರಾಜಿನಲ್ಲಿ ದೊಡ್ಡ ಆದಾಯವನ್ನು ಗಳಿಸಿದ್ದರು.


ಕಿಂಗ್ಸ್, ಕ್ಯಾಪಿಟಲ್ಸ್ ಮತ್ತು ಸೂಪರ್ ಜೈಂಟ್ಸ್ ಹಿಂದಿನ ಹರಾಜಿನಲ್ಲಿ ಕೇವಲ ಏಳು ವಿದೇಶಿ ಆಟಗಾರರನ್ನು ಮಾತ್ರ ಖರೀದಿಸಿತ್ತು. ಹೀಗಾಗಿ ಮತ್ತಷ್ಟು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಿಡ್‌ ಮಾಡಲಿವೆ. ಬಿಡ್‌ ಹೆಚ್ಚಿಸಲು ತಂಡಗಳು ತಮ್ಮ ತಂಡದಲ್ಲಿ ಈಗಿರುವ ವಿದೇಶಿ ಆಟಗಾರರನ್ನು ಒಬ್ಬರು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಕೈಬಿಡಬಹುದಾಗಿದೆ.


ಬದಲಿ ಆಟಗಾರು
ಅಲ್ಲದೆ, ಐಪಿಎಲ್ 2022ರ ಸಮಯದಲ್ಲಿ ಆರು ಫ್ರಾಂಚೈಸಿಗಳು ಗಾಯದ ಬದಲಿಗಳನ್ನು ತಂದಿದ್ದಾರೆ. ಮೂಲತಃ ಖರೀದಿಸಿದ ಆಟಗಾರರ ಪಟ್ಟಿ ಮತ್ತು ಅವರ ಬದಲಿಗಳು ಈ ಕೆಳಗಿನಂತಿವೆ:


ಇದನ್ನೂ ಓದಿ:  T20 World Cup 2022: ಆಲ್​ರೌಂಡರ್​ಗಳಿಂದ ತುಂಬಿ ಹೋಗಿದೆ ಈ ತಂಡ, ಆದ್ರೂ ಕಪ್​ ಗೆಲ್ಲೋದು ಡೌಟ್​ ಅಂತೆ!


  • ಆಡಮ್ ಮಿಲ್ನೆ, ಬದಲಿಗೆ ಮಥೀಶ ಪತಿರಾನ (ಸೂಪರ್ ಕಿಂಗ್ಸ್)

  • ಟೈಮಲ್ ಮಿಲ್ಸ್ - ಟ್ರಿಸ್ಟಾನ್ ಸ್ಟಬ್ಸ್ (ಮುಂಬೈ)

  • ನಾಥನ್ ಕೌಲ್ಟರ್-ನೈಲ್ ಬದಲಿಗೆ ಕಾರ್ಬಿನ್ ಬಾಷ್ (ರಾಜಸ್ಥಾನ ರಾಯಲ್ಸ್)

  • ಮಾರ್ಕ್ ವುಡ್, ಬದಲಿಗೆ ಆಂಡ್ರ್ಯೂ ಟೈ (ಸೂಪರ್ ಜೈಂಟ್ಸ್)

  • ಅಲೆಕ್ಸ್ ಹೇಲ್ಸ್ ಬದಲಿಗೆ ಆರನ್ ಫಿಂಚ್ (ನೈಟ್ ರೈಡರ್ಸ್)

  • ಜೇಸನ್ ರಾಯ್ ಬದಲಿಗೆ ರಹಮಾನುಲ್ಲಾ ಗುರ್ಬಾಜ್ (ಗುಜರಾತ್‌ ಟೈಟಾನ್ಸ್)

Published by:Ashwini Prabhu
First published: