IPL 2020: ಮೋಸದಾಟಕ್ಕೆ ಮುಂದಾಗಿ ಕ್ರೀಡಾ ಸ್ಪೂರ್ತಿ ಮರೆತ್ರಾ ಧೋನಿ..?

MS Dhoni: ಈ ಹಿಂದೆ ಕೂಡ ಇದೇ ರೀತಿಯಲ್ಲಿ ಧೋನಿ ವರ್ತಿಸಿರುವುದನ್ನು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಸ್ಮರಿಸಿದ್ದಾರೆ. 2019 ರಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಪಂದ್ಯದಲ್ಲೂ ಧೋನಿ ಅಂಪೈರ್ ನಿರ್ಣಾಯವನ್ನು ಪ್ರಶ್ನಿಸಿ ಮೈದಾನಕ್ಕೆ ಬಂದಿದ್ದರು.

Dhoni

Dhoni

 • Share this:
  ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ನ 4ನೇ ಪಂದ್ಯ ಕೂಡ ಕೆಟ್ಟ ಅಂಪೈರ್ ತೀರ್ಪಿಗೆ ಸಾಕ್ಷಿಯಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್​ ಅವಕಾಶ ಪಡೆದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಅಬ್ಬರದ ಆರಂಭ ಒದಗಿಸಿದ್ದರು. ನಾಯಕ ಸ್ಟೀವ್ ಸ್ಮಿತ್ ಜೊತೆಗೂಡಿದ ಕೇರಳ ದಾಂಡಿಗ ಸಿಕ್ಸರ್​ಗಳ ಸುರಿಮಳೆಗೈದರು. ಪರಿಣಾಮ ಸ್ಯಾಮ್ಸನ್ ಬ್ಯಾಟ್​ನಿಂದ ಕೇವಲ 32 ಎಸೆತಗಳಲ್ಲಿ 74 ರನ್ ಹರಿದುಬಂತು. ಈ ಭರ್ಜರಿ ಇನಿಂಗ್ಸ್​ನಲ್ಲಿ 9 ಸೂಪರ್ ಸಿಕ್ಸರ್​ಗಳು ಸಹ ಮೂಡಿ ಬಂದಿದ್ದವು.

  ಸ್ಯಾಮ್ಸನ್ ಹಾಗೂ ಸ್ಮಿತ್ ಜುಗಲ್​ಬಂಧಿಯಲ್ಲಿ ಇಡೀ ಪಂದ್ಯವು ರಾಜಸ್ಥಾನ್ ರಾಯಲ್ಸ್ ಹಿಡಿತದಲ್ಲಿತ್ತು. ಹೀಗಾಗಿಯೇ ಸಿಕ್ಕ ಸಣ್ಣ ಪುಟ್ಟ ಅವಕಾಶಗಳನ್ನು ಸಹ ಬಳಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ತಯಾರಾಗಿದ್ದವು. ಅದರಂತೆ 18 ನೇ ಓವರ್​ನಲ್ಲಿ ದೀಪಕ್ ಚಹರ್ ಎಸೆದ ಚೆಂಡು ಕ್ರಿಸ್​ನಲ್ಲಿದ್ದ ಟಾಮ್ ಕರನ್ ಬ್ಯಾಟ್​ನ ಬದಿಯಲ್ಲಿ ಸಾಗಿ ಕೀಪರ್ ಎಂ.ಎಸ್.ಧೋನಿ ಕೈಗೆ ಸೇರಿತ್ತು.

  ಧೋನಿ ಹಾಗೂ ಚಹರ್ ಬಲವಾದ ಮನವಿ ಬೆನ್ನಲ್ಲೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ತನ್ನ ಬ್ಯಾಟ್​ಗೆ ಚೆಂಡು ಬಡಿದೇ ಇಲ್ಲ ಎಂದು ಟಾಮ್ ಕರನ್​ ನಾನ್ ಸ್ಟ್ರೈಕ್​ನಲ್ಲಿದ್ದ ನಾಯಕ ಸ್ಮಿತ್​ಗೆ ತಿಳಿಸಿದ್ದರು. ಈ ಬಗ್ಗೆ ಸ್ಮಿತ್ ಕೂಡ ಅಂಪೈರ್ ಗಮನ ಸೆಳೆದರು. ಈ ವೇಳೆ ಕರನ್ ಅವರಿಗೆ ಪೆವಿಲಿಯನ್ ಕಡೆ ಹೋಗದಂತೆ ತಡೆದ ಅಂಪೈರ್ ಲೆಗ್ ಅಂಪೈರ್​ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

  ಅಂಪೈರ್​ಗಳ ತೀರ್ಮಾನದ ಪ್ರಕಾರ, ಮೂರನೇ ಅಂಪೈರ್ ಕ್ಯಾಚ್ ಪರಿಶೀಲಿಸಿದಾಗ, ಕ್ಯಾಚ್ ಪಡೆಯುವ ಮುನ್ನವೇ ಚೆಂಡು ಪಿಚ್ ಆಗಿರುವುದು ಕಂಡು ಬಂತು. ಇತ್ತ ಬಾಲ್​ ಕೂಡ ಬ್ಯಾಟ್​​ಗೆ ಬದಲಾಗಿ ಸೊಂಟಕ್ಕೆ ಭಾಗಕ್ಕೆ ಬಡಿದಿತ್ತು. ತೀರ್ಪುಗಾರರು ತನ್ನ ತೀರ್ಮಾನವನ್ನು ಬದಲಿಸಿ ನಾಟೌಟ್ ಎಂದು ಹೇಳಿದರು.

  ಈ ನಿರ್ಧಾರವನ್ನು ಪ್ರಶ್ನೆ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಅಸಮಾಧಾನವನ್ನು ಹೊರ ಹಾಕಿದ್ದರು. ಅತ್ತ ಬಿಗ್ ಸ್ಕ್ರೀನ್​ನಲ್ಲೂ ಚೆಂಡು ಪಿಚ್ ಆಗಿರುವುದು ಕಂಡು ಬಂದರೂ, ಧೋನಿಯ ನಡೆಯ ಅಚ್ಚರಿಗೆ ಕಾರಣವಾಗಿತ್ತು. ಕ್ರೀಡಾ ಸ್ಪೂರ್ತಿ ಮರೆತು, ತಾಳ್ಮೆ ಕಳೆದುಕೊಂಡು ಅಂಪೈರ್ ಜೊತೆ ವಾದಕ್ಕಿಳಿದ ವರ್ತನೆ ತಮ್ಮ ಕೂಲ್ ಕ್ಯಾಪ್ಟನ್ ಹಣೆಪಟ್ಟಿಯನ್ನು ಪ್ರಶ್ನೆ ಮಾಡಿದಂತಿತ್ತು.

  ಈ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೆಂಡು ನೆಲಕ್ಕೆ ತಾಗಿರುವುದು ಗೊತ್ತಾಗಿದ್ದರೂ, ಕ್ಯಾಚ್​ಗೆ ಮನವಿ ಮಾಡಿರುವುದು ತಪ್ಪು. ಅದರಲ್ಲೂ ಅಂಪೈರ್ ಪರಿಶೀಲಿಸಿ, ಬಿಗ್ ಸ್ಕ್ರಿನ್​ ಮೇಲೆ ಸ್ಪಷ್ಟವಾಗಿ ಗೋಚರಿಸಿದರೂ ಕ್ರೀಡಾ ಸ್ಪೂರ್ತಿ ಮರೆತು ಧೋನಿ ವಾದ ಮಾಡಿರುವುದು ದೊಡ್ಡ ತಪ್ಪು ಎಂದು ಅನೇಕರು ವಿಮರ್ಶಿಸುತ್ತಿದ್ದಾರೆ.


  ಇನ್ನು ಈ ಹಿಂದೆ ಕೂಡ ಇದೇ ರೀತಿಯಲ್ಲಿ ಧೋನಿ ವರ್ತಿಸಿರುವುದನ್ನು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಸ್ಮರಿಸಿದ್ದಾರೆ. 2019 ರಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಪಂದ್ಯದಲ್ಲೂ ಧೋನಿ ಅಂಪೈರ್ ನಿರ್ಣಾಯವನ್ನು ಪ್ರಶ್ನಿಸಿ ಮೈದಾನಕ್ಕೆ ಬಂದಿದ್ದರು. ಸಿಎಸ್​ಕೆಗೆ ಗೆಲ್ಲಲು ಅಂತಿಮ ಮೂರು ಎಸೆತಗಳಲ್ಲಿ 8 ರನ್​ಗಳ ಅವಶ್ಯಕತೆಯಿತ್ತು. ಆದರೆ ಬೆನ್​ ಸ್ಟೋಕ್ಸ್​ ಅವರ ಎಸೆತವನ್ನು ಮುಖ್ಯ ಅಂಪೈರ್ ನೋಬಾಲ್ ಎಂದಿದ್ದರು. ಕೂಡಲೇ ಲೆಗ್ ಅಂಪೈರ್ ಅದನ್ನು ನೋ ಬಾಲ್ ಅಲ್ಲ ಎಂಬ ತೀರ್ಪು ನೀಡಿದ್ದರು. ಇದನ್ನು ಪ್ರಶ್ನಿಸಿ ಮೈದಾನಕ್ಕಿಳಿದ ಧೋನಿ ಅಂಪೈರ್ ಜೊತೆ ವಾದ ಮಾಡಿದ್ದರು.


  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL ಇತಿಹಾಸದ ಅತ್ಯಂತ ದುಬಾರಿ ಓವರ್ ಯಾರದ್ದು ಗೊತ್ತಾ?
  Published by:zahir
  First published: