Kevin Pietersen| ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಶೂನ್ಯಕ್ಕೆ ಔಟ್ ಆಗಿದ್ದು ನಿರೀಕ್ಷಿತ; ಕೆವಿನ್ ಪೀಟರ್ಸನ್
ಪಂಜಾಬ್ ಕಿಂಗ್ಸ್, ರಾಜಸ್ತಾನ ರಾಯಲ್ಸ್ ಸೇರಿದಂತೆ ಎಲ್ಲಾ ತಂಡದ ಬೌಲರ್ಗಳೂ ಈಗ ವಾರ್ನರ್ಗೆ ಬೌಲ್ ಮಾಡುವುದನ್ನು ಕಲಿತಿದ್ದಾರೆ. ಹೀಗಾಗಿ, ವಾರ್ನರ್ ಮತ್ತೆ ಫಾರ್ಮ್ಗೆ ಮರಳಲು ಸಾಕಷ್ಟು ಪರಿಶ್ರಮ ನಡೆಸುವ ಅಗತ್ಯ ಇದೆ ಎಂದು ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಸತತ ನಾಲ್ಕು ಬಾರಿ ಪ್ಲೇ ಆಫ್ಗೆ ಎಂಟ್ರಿ ಮತ್ತು 2016ರಲ್ಲಿ ಚೊಚ್ಚಲ ಐಪಿಎಲ್ (IPL 2021) ಟ್ರೋಫಿ ಪಡೆದು ದಾಖಲೆ ನಿರ್ಮಿಸಿದ್ದ ಸನ್ರೈಸರ್ಸ್ ಹೈದ್ರಾಬಾದ್ (SunRisers Hyderabad) ತಂಡ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಐಪಿಎಲ್ 2021 ರಲ್ಲಿ ಗೆಲುವಿಗಾಗಿ ನಿರಂತರ ತಡಕಾಟ ನಡೆಸುತ್ತಿದೆ. ಆದರೂ, ಗೆಲುವು ಮಾತ್ರ ದಕ್ಕುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ದ್ವಿತೀಯ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ (Delhi Capital) ವಿರುದ್ದ ಸನ್ಸೈಸರ್ಸ್ ಹೀನಾಯ ಸೋಲನುಭವಿಸಿದೆ. ಇನ್ನೂ ಮಾಜಿ ನಾಯಕ ಡೇವಿಡ್ ವಾರ್ನರ್ (David Warner) ಬ್ಯಾಟಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸು ತ್ತಿರುವುದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಮುಂಬೈ ಎದುರಿನ ಪಂದ್ಯದಲ್ಲೂ 3 ಎಸೆತಗಳನ್ನು ಎದುರಿಸಿದ್ದ ವಾರ್ನರ್ ಶೂನ್ಯಕ್ಕೆ ಔಟ್ ಆಗಿ ನಿರ್ಗಮಿಸಿದ್ದರು. ಆದರೆ, ಇದೀಗ ವಾರ್ನರ್ ಬ್ಯಾಟಿಂಗ್ ಬಗ್ಗೆ ಮೌಲ್ಯ ಮಾಪನ ಮಾಡಿರುವ ಮಾಜಿ ಕ್ರಿಕೆಟರ್ ಕೆವಿನ್ ಪೀಟರ್ಸನ್ (Kevin Pietersen), "ಹೈದ್ರಾಬಾದ್ ಇದಕ್ಕಿಂತ ಶೋಚನೀಯ ಸ್ಥಿತಿಗೆ ತಲುಪುವುದು ಸಾಧ್ಯವಿಲ್ಲ. ಇನ್ನೂ ವಾರ್ನರ್ ಶೂನ್ಯಕ್ಕೆ ಔಟ್ ಆಗುವುದು ನಿರೀಕ್ಷಿತವೇ ಆಗಿತ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಡೇವಿಡ್ ವಾರ್ನರ್ ಪ್ರದರ್ಶನವನ್ನು ಮೌಲ್ಯಮಾಪನ ಮಾಡಿರುವ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್, "ಅನ್ರಿಚ್ ನಾರ್ಟ್ಜೆ ಅವರ ಎಸೆತಕ್ಕೆ ಡೇವಿಡ್ ವಾರ್ನರ್ ವಿಕೆಟ್ ಕಳೆದು ಕೊಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ದಕ್ಷಿಣ ಆಫ್ರಿಕಾದ ವೇಗಿಗಳಾದ ಅನ್ರಿಚ್ ನಾರ್ಟ್ಜೆ ಮತ್ತು ಕಗ್ಗೀಸೋ ರಬಾಡ ಇಬ್ಬರಿಗೂ ವಾರ್ನರ್ ಅನ್ನು ಔಟ್ ಮಾಡುವ ಕಲೆ ಗೊತ್ತಿದೆ. ರಬಾಡಾ ಈಗಾಗಲೇ 4-5 ಬಾರಿ ವಾರ್ನರ್ ವಿಕೆಟ್ ಪಡೆದು ಮಿಂಚಿದ್ದಾರೆ.
ಡೇವಿಡ್ ವಾರ್ನರ್ ಪ್ರಸ್ತುತ ಕಳಪೆ ಫಾರ್ಮ್ನಲ್ಲಿದ್ದು, ಇಂತಹ ಸಂದರ್ಭದಲ್ಲಿ ಅನ್ರಿಚ್ ನಾರ್ಟ್ಜೆ ಮತ್ತು ರಬಾಡಾ ಎಸೆಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅವರ ಕಳಪೆ ಆಟ ಮುಂದುವರೆಯಲಿದೆ ಎಂದು ಮೊದಲೇ ಊಹಿಸಲಾಗಿತ್ತು. ಅಲ್ಲದೆ, ಪಂಜಾಬ್ ಕಿಂಗ್ಸ್, ರಾಜಸ್ತಾನ ರಾಯಲ್ಸ್ ಸೇರಿದಂತೆ ಎಲ್ಲಾ ತಂಡದ ಬೌಲರ್ಗಳೂ ಈಗ ವಾರ್ನರ್ಗೆ ಬೌಲ್ ಮಾಡುವುದನ್ನು ಕಲಿತಿದ್ದಾರೆ. ಹೀಗಾಗಿ, ವಾರ್ನರ್ ಮತ್ತೆ ಫಾರ್ಮ್ಗೆ ಮರಳಲು ಸಾಕಷ್ಟು ಪರಿಶ್ರಮ ನಡೆಸುವ ಅಗತ್ಯ ಇದೆ" ಎಂದು ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ 9 ವಿಕೆಟ್ ಕಳೆದುಕೊಂಡು ಕೇವಲ 135 ರನ್ ಮಾತ್ರ ಗಳಿಸಿತ್ತು. ವಾರ್ನರ್ ಬೆನ್ನಿಗೆ ನಾಯಕ ಕೇನ್ ವಿಲಿಯಮ್ಸನ್ ಸಹ ಈ ಪಂದ್ಯದಲ್ಲಿ ಎಡವಿದ್ದರು. 26 ಎಸೆತಗಳಲ್ಲಿ ಕೇವಲ 18 ರನ್ ಮಾತ್ರ ಗಳಿಸಿದ್ದರು. ಕೊನೆಗೆ ಅಬ್ದುಲ್ ಸಮದ್ ಮತ್ತು ರಶೀದ್ ಖಾನ್ ಕ್ರಮವಾಗಿ 28 ಮತ್ತು 22 ರನ್ ಗಳಿಸಿದ ಕಾರಣಕ್ಕೆ ಎಸ್ಆರ್ಎಚ್ ತಂಡ ಗೌರವಾನ್ವಿತ ಮೊತ್ತ ದಾಖಲಿಸಲು ಸಾಧ್ಯವಾಗಿತ್ತು.
ಸುಲಭದ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ ತಂಡ ಕೇವಲ 17.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸುಲಭದ ಜಯ ಸಾಧಿಸಿತ್ತು. ಶಿಖರ್ ಧವನ್ 37 ಎಸೆತಗಳಲ್ಲಿ 42 ರನ್ ಸಿಡಿಸಿದ್ದರೆ, ಮಾಜಿ ನಾಯಕ ಶ್ರೇಯಸ್ ಅಯ್ಯರ್ ಮತ್ತು 47 ಮತ್ತು ಮತ್ತು ನಾಯಕ ರಿಷಭ್ ಪಂತ್ 35 ರನ್ ಗಳಿಸಿ ಅಜೇಯರಾಗಿ ಉಳಿದರು.
8 ಪಂದ್ಯಗಳಲ್ಲಿ 7 ಸೋಲು ಕಂಡಿರುವ ಸನ್ರೈಸರ್ಸ್ ಹೈದ್ರಾಬಾದ್ ಪ್ರಸ್ತುತ ಐಪಿಎಲ್ 2021 ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅಲ್ಲದೆ, ಬಹುತೇಕ ಪ್ಲೇ ಆಫ್ ತಲುಪುವ ಆಸೆಯನ್ನು ಕೈಬಿಟ್ಟಿದೆ. ಈ ತಂಡ ಶನಿವಾರ ಕೆ.ಎಲ್. ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಅನ್ನು ಎದುರಿಸಲಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ