HOME » NEWS » Ipl » NICHOLAS POORAN TO DONATE PART OF HIS IPL SALARY TO INDIAS COVID 19 BATTLE ZP

IPL 2021: ಕೊರೋನಾ ಸಂಕಷ್ಟ: ಐಪಿಎಲ್ ವೇತನದ ಒಂದು ಭಾಗ ದೇಣಿಗೆ ನೀಡಿದ ಇಬ್ಬರು ಕ್ರಿಕೆಟಿಗರು

ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಕ್ಸಿಜನ್ ಪೂರೈಕೆಗಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಸುಮಾರು 37 ಲಕ್ಷ ರೂ. ದೇಣಿಗೆ ನೀಡಿದ್ದರು. ಇದರ ಬೆನ್ನಲ್ಲೇ ಐಪಿಎಲ್​ನಲ್ಲಿ ವಿಶ್ಲೇಷಣೆಗಾರರಾಗಿರುವ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀಹ ಸುಮಾರು 41 ಲಕ್ಷ ರೂ. ಸಹಾಯಹಸ್ತ ಚಾಚಿದ್ದರು.

news18-kannada
Updated:April 30, 2021, 7:34 PM IST
IPL 2021: ಕೊರೋನಾ ಸಂಕಷ್ಟ: ಐಪಿಎಲ್ ವೇತನದ ಒಂದು ಭಾಗ ದೇಣಿಗೆ ನೀಡಿದ ಇಬ್ಬರು ಕ್ರಿಕೆಟಿಗರು
nicholas pooran
  • Share this:
ಭಾರತದಲ್ಲಿ ಕೊರೋನಾ ತಾಂಡವಾಡುತ್ತಿದೆ. ಪ್ರತಿದಿನ ಸಾಕಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದು, ಇತ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ. ಅದರಲ್ಲೂ ಮುಖ್ಯವಾಗಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಈಗಾಗಲೇ ಭಾರತದ ನೆರವಿಗೆ ಹಲವು ದೇಶಗಳು ಮುಂದಾಗಿದ್ದು, ಅವರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡುತ್ತಿರುವ ಆಟಗಾರರು ಕೂಡ ಭಾರತದ ಕೋವಿಡ್ ಹೋರಾಟಕ್ಕೆ ಕೈ ಜೋಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಈ ಹಿಂದೆ ಕೆಕೆಆರ್ ಪರ ಆಡುತ್ತಿರುವ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಕ್ಸಿಜನ್ ಪೂರೈಕೆಗಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಸುಮಾರು 37 ಲಕ್ಷ ರೂ. ದೇಣಿಗೆ ನೀಡಿದ್ದರು. ಇದರ ಬೆನ್ನಲ್ಲೇ ಐಪಿಎಲ್​ನಲ್ಲಿ ವಿಶ್ಲೇಷಣೆಗಾರರಾಗಿರುವ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀಹ ಸುಮಾರು 41 ಲಕ್ಷ ರೂ. ಸಹಾಯಹಸ್ತ ಚಾಚಿದ್ದರು. ಹಾಗೆಯೇ ಸಚಿನ್ ತೆಂಡೂಲ್ಕರ್ ಕೂಡ ಕೋವಿಡ್ ಹೋರಾಟಕ್ಕೆ 1 ಕೋಟಿ ರೂ. ನೆರವು ನೀಡಿ ಎಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ನೆರವಾಗಿದ್ದಾರೆ.

ಇದೀಗ ಪಂಜಾಬ್ ಕಿಂಗ್ಸ್​ ತಂಡದ ಆಟಗಾರ, ವೆಸ್ಟ್ ಇಂಡೀಸ್​ನ ನಿಕೋಲಸ್ ಪೂರನ್ ಕೂಡ ತಮ್ಮ ಐಪಿಎಲ್ ವೇತನದ ಒಂದು ಭಾಗವನ್ನು ಭಾರತದ ಕೋವಿಡ್ ಹೋರಾಟಕ್ಕೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಇತರರೂ ಕೂಡ ನೆರವಾಗುವಂತೆ ಪೂರನ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ನಿಮಗೆ ಲಸಿಕೆ ಪಡೆಯಲು ಸಾಧ್ಯವಾಗುವುದಾದರೆ, ದಯವಿಟ್ಟು ಲಸಿಕೆ ಪಡೆದುಕೊಳ್ಳಿ ಎಂದು ಮನವಿ ಮಾಡಿರುವ ಪೂರನ್, ನಾನು ಕೂಡ ಭಾರತಕ್ಕಾಗಿ ಪಾರ್ಥಿಸುತ್ತಿದ್ದೇನೆ. ಅಷ್ಟೇ ಅಲ್ಲದೆ ಈ ಬಿಕ್ಕಟ್ಟಿನ ಸಮಯದಲ್ಲಿ ನನ್ನ ಐಪಿಎಲ್ ವೇತನದ ಒಂದು ಭಾಗವನ್ನು ದೇಣಿಗೆ ನೀಡುವುದಾಗಿ ನಿಕೋಲಸ್ ಪೂರನ್ ತಿಳಿಸಿದ್ದಾರೆ.


ಮತ್ತೊಂದೆಡೆ ಸನ್​ರೈಸರ್ಸ್​ ಹೈದರಾಬಾದ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಶ್ರೀವಾತ್ಸವ್ ಗೋಸ್ವಾಮಿ ಕೂಡ ಸಹಾಯಹಸ್ತ ಚಾಚಿದ್ದಾರೆ. ಅಗತ್ಯವಿರುವರಿಗೆ ಆಕ್ಸಿಜನ್ ಕಿಟ್ ಖರೀದಿಸಲು ಎನ್​ಜಿಒ ಒಂದಕ್ಕೆ ಶ್ರೀವಾತ್ಸವ್ 90 ಸಾವಿರ ರೂ. ದೇಣಿಗೆ ನೀಡಿ ಮಾನವೀಯತೆ ಮರೆದಿದ್ದಾರೆ.ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಆವೃತ್ತಿಗಾಗಿ ಪಂಜಾಬ್ ಕಿಂಗ್ಸ್​ ತಂಡವು ನಿಕೋಲಸ್ ಪೂರನ್ ಅವರನ್ನು 4.2 ಕೋಟಿ ನೀಡುತ್ತಿದ್ದು, ಹಾಗೆಯೇ ಸನ್​ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಶ್ರೀವಾತ್ಸವ್ ಗೋಸ್ವಾಮಿ ಒಂದು ಕೋಟಿ ರೂ. ಪಡೆಯುತ್ತಿದ್ದಾರೆ.
Published by: zahir
First published: April 30, 2021, 7:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories