IPL

  • associate partner

ಸೂಪರ್​ ಮ್ಯಾನ್​ ಫೀಲ್ಡಿಂಗ್​: ಈ ವೆಸ್ಟ್​ ಇಂಡೀಸ್​ ಆಟಗಾರನಿಗೆ ರೆಕ್ಕೆಯಿದೆ, ವಿಡಿಯೋದಲ್ಲಿ ನೀವೇ ನೋಡಿ

Nicholas Pooran: ಸಾಕಷ್ಟು ಜನರು ಈ ವಿಡಿಯೋ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೆಲವರು ಈ ಆಟಗಾರನಿಗೆ ರೆಕ್ಕೆ ಇದೆ ಎಂದು ಕಮೆಂಟ್​ ಮಾಡಿದ್ದಾರೆ. 

news18-kannada
Updated:September 28, 2020, 11:21 AM IST
ಸೂಪರ್​ ಮ್ಯಾನ್​ ಫೀಲ್ಡಿಂಗ್​: ಈ ವೆಸ್ಟ್​ ಇಂಡೀಸ್​ ಆಟಗಾರನಿಗೆ ರೆಕ್ಕೆಯಿದೆ, ವಿಡಿಯೋದಲ್ಲಿ ನೀವೇ ನೋಡಿ
ನಿಕೋಲಸ್
  • Share this:
ಶಾರ್ಜಾ ಮೈದಾನದಲ್ಲಿ ನಡೆದ ಐಪಿಎಲ್​ನ 9ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ನೀಡಿದ ಬೃಹತ್ ಗುರಿ ಬೆನ್ನತ್ತಿ ರಾಜಸ್ಥಾನ್ ರಾಯಲ್ಸ್ ಹೊಸ ಇತಿಹಾಸ ಬರೆದಿದೆ.  ಪಂಜಾಬ್ ನೀಡಿದ 224 ಟಾರ್ಗೆಟ್​ನ್ನು 19.3 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ ಸ್ಮಿತ್ ಪಡೆ 4 ವಿಕೆಟ್​ಗಳ ವಿಜಯ ಸಾಧಿಸಿದೆ. ಇದರೊಂದಿಗೆ ಐಪಿಎಲ್​ನಲ್ಲಿ ಬೃಹತ್ ರನ್ ಚೇಸಿಂಗ್ ಮಾಡಿದ ಹೊಸ ದಾಖಲೆಯನ್ನು ರಾಜಸ್ಥಾನ್ ತನ್ನ ಹೆಸರಿಗೆ ಬರೆದುಕೊಂಡಿತು. ಅಲ್ಲದೆ, ಈ ಗೆಲುವಿನ ಮೂಲಕ ರಾಜಸ್ಥಾನ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ದಾಖಲಿಸಿಕೊಂಡಿತು. ಈ ಮಧ್ಯೆ ವೆಸ್ಟ್​ ಇಂಡೀಸ್​ ಆಟಗಾರ ಮಾಡಿದ ಅದ್ಭುತ ಫೀಲ್ಡಿಂಗ್​ ಎಲ್ಲರ ಗಮನ ಸೆಳೆದಿದೆ.

ಕೇವಲ 8 ಬಾಲ್​ಗೆ 25 ರನ್​ ಬಾರಿಸಿದ ಪಂಜಾಬ್ ಆಟಗಾರ ನಿಕೋಲಸ್ ಪೂರನ್​ ಅದ್ಭುತವಾಗಿ ಬಾಲ್​ ಹಿಡಿಯುವ ಮೂಲಕ ಎಲ್ಲರ ಗಮ ಸೆಳೆದಿದ್ದಾರೆ. ಸಂಜು ಸ್ಯಾಮ್ಸನ್​ ಸಿಕ್ಸ್​ ಬಾರಿಸುವ ಹುರುಪಿನಲ್ಲಿ ಬಾಲನ್ನು ಅಟ್ಟಿದರು. ಈ ವೇಳೆ ಈ ಬಾಲ್​ ಮೈದಾನದ ಹೊರಗೆ ಹೋಗುವುದರಲ್ಲಿತ್ತು. ಈ ವೇಳೆ ನಿಕೋಲಸ್​ ಸಿಕ್ಸ್​ ಗಡಿಗೆ ಹಾರಿ, ಈ ಬಾಲನ್ನು ವಾಪಾಸು ಮೈದಾನಕ್ಕೆ ಕಳಿಸಿದ್ದಾರೆ. ಅವರು ಬಾಲನ್ನು ಹಿಂದಕ್ಕೆ ಕಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.


ಸಾಕಷ್ಟು ಜನರು ಈ ವಿಡಿಯೋ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೆಲವರು ಈ ಆಟಗಾರನಿಗೆ ರೆಕ್ಕೆ ಇದೆ ಎಂದು ಕಮೆಂಟ್​ ಮಾಡಿದ್ದಾರೆ.
Published by: Rajesh Duggumane
First published: September 28, 2020, 11:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading