ಅಫ್ಘನ್​ ಕ್ರಿಕೆಟ್​ ಬೋರ್ಡಿಗೆ ಹಂಗಾಮಿ ಅಧ್ಯಕ್ಷನನ್ನು ನೇಮಿಸಿದ ತಾಲಿಬಾನ್​

 ಅಫ್ಘಾನಿಸ್ತಾನದಲ್ಲಿ ರಾಜಕೀಯ ಪರಿಸ್ಥಿತಿಯು ಹೊಸ ತಿರುವು ಪಡೆಯುತ್ತಿದೆ, ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ನಡೆಯುವ ಐಪಿಎಲ್‌ನಲ್ಲಿ ಭಾಗವಹಿಸಬೇಕಿರುವ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಅವರಂತಹ ಪ್ರಮುಖ ಕ್ರಿಕೆಟಿಗರ ಭವಿಷ್ಯದಲ್ಲಿ ಅನಿಶ್ಚಿತತೆ ಮತ್ತು ಅನಿರೀಕ್ಷಿತತೆ ತಲೆದೋರಿದೆ.

 • Share this:
  ಮಾಜಿ ಮುಖ್ಯಸ್ಥ ಅಜೀಜುಲ್ಲಾ ಫೈಜಲಿ ಅವರನ್ನು ಭಾನುವಾರ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ಎಸಿಬಿ) ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು, ತಾಲಿಬಾನ್ ಸಂಘರ್ಷ ಪೀಡಿತ ರಾಷ್ಟ್ರವನ್ನು ತನ್ನ ತೆಕ್ಕೆಗೆ ಸ್ವಾಧೀನಪಡಿಸಿಕೊಂಡ ನಂತರ ಆಡಳಿತ ಮಂಡಳಿಯಲ್ಲಿ ಮೊದಲ ಹೊಸ ನೇಮಕಾತಿ ಮಾಡಲಾಗಿದೆ. ಫೈಜಲಿ ಈ ಹಿಂದೆ ಎಸಿಬಿ ಅಧ್ಯಕ್ಷರಾಗಿ ಸೆಪ್ಟೆಂಬರ್ 2018 ರಿಂದ ಜುಲೈ 2019 ರವರೆಗೆ ಸೇವೆ ಸಲ್ಲಿಸಿದ್ದರು.

  "ಎಸಿಬಿಯ ಮಾಜಿ ಅಧ್ಯಕ್ಷ @ಅಜೀಜುಲ್ಲಾ ಫೈಜಲಿಯನ್ನು ಎಸಿಬಿಯ ಹಂಗಾಮಿ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಲಾಗಿದೆ. ಮುಂಬರುವ ಸ್ಪರ್ಧೆಗಳಿಗೆ ಅವರು ಎಸಿಬಿಯ ನಾಯಕತ್ವ ಮತ್ತು ಎಲ್ಲಾ ರೀತಿಯ ಆಡಳಿತ ಕ್ರಮವನ್ನು ನೋಡಿಕೊಳ್ಳುತ್ತಾರೆ, ”ಎಸಿಬಿ ಟ್ವೀಟ್ ಮಾಡಿದೆ.

  ಪಿಟಿಐ ಜೊತೆ ಮಾತನಾಡಿದ ಎಸಿಬಿ ಸಿಇಒ ಹಮೀದ್ ಶಿನ್ವಾರಿ ಈ ವಾರದ ಆರಂಭದಲ್ಲಿ ತಾಲಿಬಾನ್ ಕ್ರೀಡೆಯನ್ನು ಬೆಂಬಲಿಸುತ್ತಿರುವುದರಿಂದ ಕ್ರಿಕೆಟ್ ಚಟುವಟಿಕೆಗಳು ಎಂದಿನಂತೆ ನಡೆಯುತ್ತವೆ ಎಂದು ನಿರೀಕ್ಷಿಸಿದ್ದೆ ಎಂದು ಹೇಳಿದರು.

  ಶ್ರೀಲಂಕಾದಲ್ಲಿ ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನದ ಪಂದ್ಯವನ್ನು ಫಾಜಿಲ್​ ಅವರು ಹೇಗೆ ನಿರ್ವಹಿಸಲಿದ್ದಾರೆ ಎಂಬುದು ಈಗ ಅವರ ಮುಂದಿರುವ ಸವಾಲು ಎಂದು ಹೇಳಲಾಗಿದೆ. ಮತ್ತು ಕೋ ಲಾಜಿಸ್ಟಿಕ್ಸ್ ಅನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ, ಆದ ಕಾರಣ ಈ ಸವಾಲನ್ನು ಎದುರಿಸುವುದು ಹೇಗೆ ಎಂದು ಕಾದು ನೋಡಬೇಕಿದೆ.

   ಅಫ್ಘಾನಿಸ್ತಾನದಲ್ಲಿ ರಾಜಕೀಯ ಪರಿಸ್ಥಿತಿಯು ಹೊಸ ತಿರುವು ಪಡೆಯುತ್ತಿದೆ, ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ನಡೆಯುವ ಐಪಿಎಲ್‌ನಲ್ಲಿ ಭಾಗವಹಿಸಬೇಕಿರುವ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಅವರಂತಹ ಪ್ರಮುಖ ಕ್ರಿಕೆಟಿಗರ ಭವಿಷ್ಯದಲ್ಲಿ ಅನಿಶ್ಚಿತತೆ ಮತ್ತು ಅನಿರೀಕ್ಷಿತತೆ ತಲೆದೋರಿದೆ.

  ರಶೀದ್ ಮತ್ತು ನಬಿ ಅಫ್ಘಾನಿಸ್ತಾನದಲ್ಲಿಲ್ಲ. ಅವರು ಯುನೈಟೆಡ್ ಕಿಂಗ್‌ಡಂನಲ್ಲಿದ್ದಾರೆ, 'ಹಂಡ್ರೆಡ್' ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ರಶೀದ್ ಟ್ರೆಂಟ್ ರಾಕೆಟ್ಸ್ ಪರ ಆಡುತ್ತಿದ್ದಾರೆ ಮತ್ತು ನಬಿ ಲಂಡನ್ ಸ್ಪಿರಿಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

  ಬಿಸಿಸಿಐ ಈ ಎಲ್ಲಾ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದೆ ಮತ್ತು ಇಂಡಿಯಾ ಪ್ರೀಮಿಯರ್ ಲೀಗ್‌ನಲ್ಲಿ ಅಫ್ಘಾನ್ ಆಟಗಾರರ ಭಾಗವಹಿಸುವಿಕೆಯನ್ನು ನೋಡಲು ಆಶಿಸುತ್ತಿದೆ.

  "ಏನಾದರೂ ಪ್ರತಿಕ್ರಿಯೆ ನೀಡುವ  ಮುಂಚೆಯೇ  ನಾವು ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ನಮ್ಮ ನಿರ್ಧಾರದಲ್ಲಿ ಏನು ಬದಲಾಗುವುದಿಲ್ಲ ಮತ್ತು ರಶೀದ್ ಮತ್ತು ಇತರ ಅಫ್ಘಾನ್ ಆಟಗಾರರು ಐಪಿಎಲ್‌ನ ಭಾಗವಾಗುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.

  ರಶೀದ್ ಮತ್ತು ನಬಿ ಅವರು ಆಗಸ್ಟ್ 21 ರಂದು 'ದಿ ಹಂಡ್ರೆಡ್' ಅನ್ನು ಪೂರ್ಣಗೊಳಿಸಿದ ನಂತರ ಯುಕೆ ನಲ್ಲಿ ಮರಳಿ ನೆಲೆಸಿದ್ದಾರೆಯೇ ಎಂದು ನೋಡಬೇಕು ಏಕೆಂದರೆ ಅವರು ಕುಟುಂಬಗಳನ್ನು ಮರಳಿ ಕರೆಸಿಕೊಂಡಿದ್ದಾರೆ.

  ಇದನ್ನೂ ಓದಿ: ಸಿನಿಮೀಯ ಮಾದರಿಯಲ್ಲಿ ಛತ್ತೀಸ್​ಘಡದ 7 ತಿಂಗಳ ಮಗುವನ್ನು ಮಧ್ಯಪ್ರದೇಶದಲ್ಲಿ ರಕ್ಷಿಸಿದ ಪೊಲೀಸರು

  ಮತ್ತು ಅವರು ಯುಕೆ ನಲ್ಲಿಯೇ ಉಳಿದಿದ್ದರೆ, ಭಾರತೀಯ ಆಟಗಾರರನ್ನು ಸೆಪ್ಟೆಂಬರ್ 15 ರಂದು ಮ್ಯಾಂಚೆಸ್ಟರ್‌ನಿಂದ ಯುಎಇಗೆ ಕರೆದೊಯ್ಯುವ ಅದೇ ಚಾರ್ಟರ್ ವಿಮಾನದಲ್ಲಿರಲು ಬಿಸಿಸಿಐ ಅವರನ್ನು ಪ್ರಯಾಣಿಸಲು ಕೇಳುತ್ತದೆಯೇ ಎಂದು ಕಾದು ನೋಡಬೇಕಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: