CSK- ಚೆನ್ನೈನ ಈ ಆಟಗಾರ ಇಷ್ಟು ಅಪಾಯಕಾರಿ ಅಂತ ಗೊತ್ತಿರಲಿಲ್ಲ: ಗಂಭೀರ್ ಉದ್ಗಾರ

Faf Du Plessis- ಇವರು 40 ಬಾಲ್​ನಲ್ಲಿ 50 ರನ್ ಗಳಿಸಬಲ್ಲರು. ಆದರೆ, ಗೇಮ್ ಮೇಲೆ ಯಾವ ಇಂಪ್ಯಾಕ್ಟ್ ಕೊಡಲು ಆಗುವುದಿಲ್ಲ ಎಂದನಿಸಿತ್ತು. ಆದರೆ, ಈಗ ಎಲ್ಲರ ನಿರೀಕ್ಷೆಮೀರಿ ಡುಪ್ಲೆಸಿ ಈ ಬಾರಿ ಆಟವಾಡಿದ್ದಾರೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ

ಚೆನ್ನೈ ಸೂಪರ್ ಕಿಂಗ್ಸ್ ತಂಡ

 • Share this:
  ನವದೆಹಲಿ: ಕಳೆದ ಸೀಸನ್​ನಲ್ಲಿ ಅತ್ಯಂತ ನೀರಸ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ವರ್ಷ ನಿರೀಕ್ಷೆಮೀರಿದ ಆಟ ಆಡಿ ಪ್ಲೇ ಆಫ್​ನ ಕ್ವಾಲಿಫಯರ್ ಪಂದ್ಯಕ್ಕೆ ಅಡಿ ಇಟ್ಟಿದೆ. ಆಟಗಾರರ ಅನುಭವ ಸಿಎಸ್​ಕೆಗೆ ಗೆಲುವುಗಳನ್ನ ದಕ್ಕಿಸಿಕೊಟ್ಟಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಸೋತರೂ ಒಟ್ಟಾರೆಯಾಗಿ ಅದ್ಭುತ ಪ್ರದರ್ಶನ ತೋರಿ ಎರಡನೇ ಸ್ಥಾನದಲ್ಲಿದೆ. ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಕೂಡ ಶಕ್ತಿಯುತವಾಗಿದೆ. ಆರಂಭಿಕ ಆಟಗಾರರಾಗಿ ಋತುರಾಜ್ ಗಾಯಕ್ವಾಡ್ ಮತ್ತು ಫ್ಯಾಫ್ ಡುಪ್ಲೆಸಿ ಅವರ ಸ್ಥಿರ ಪ್ರದರ್ಶನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಅರ್ಧ ಕಾರಣ ಎಂದರೆ ಅತಿಶಯೋಕ್ತಿ ಅಲ್ಲ. ಹಾಗೆಯೇ, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಹೇಜಲ್​ವುಡ್ ಮೊದಲಾದವರಿರುವ ಬೌಲಿಂಗ್ ಪಡೆ ಹಾಗೂ ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ ಅವರ ಆಲ್​ರೌಂಡ್ ಆಟವೂ ಸಿಎಸ್​ಕೆ ಯಶಸ್ಸಿಗೆ ಕಾರಣವಾಗಿದೆ.

  ಇದೆಲ್ಲದರ ಮಧ್ಯೆ ಸಿಎಸ್​ಕೆಯ ಫ್ಯಾಫ್ ಡುಪ್ಲೆಸಿ ಅವರ ಆಟದ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಹಳ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಡುಪ್ಲೆಸಿ ಅಮೋಘ ಆಟ ಆಡಿದ್ದರು. ಆ ಪಂದ್ಯದ ಬಳಿಕ ಡುಪ್ಲೆಸಿ ಆಟದ ಬಗ್ಗೆ ಕಾಮೆಂಟ್ ಮಾಡಿದ ಗಂಭೀರ್, ಡುಪ್ಲೆಸಿ ನಿರೀಕ್ಷೆಮೀರಿದ ಆಟ ಆಡಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ. ಡುಪ್ಲೆಸಿ ಇಷ್ಟು ಸ್ಫೋಟಕ ಬ್ಯಾಟರ್ ಎಂದು ಗೊತ್ತಿರಲಿಲ್ಲ. ಅವರ ಬಗ್ಗೆ ನನಗಿದ್ದ ಕೆಲ ಅಭಿಪ್ರಾಯಗಳು ಸುಳ್ಳಾಗಿವೆ ಎಂದು ಗಂಭೀರ್ ನುಡಿದಿದ್ದಾರೆ.

  “ಡುಪ್ಲೆಸಿ ಟಿ20 ಕ್ರಿಕೆಟ್​ನಲ್ಲಿ ಇಷ್ಟು ಅಪಾಯಕಾರಿ ಬ್ಯಾಟರ್ ಎಂದು ನನಗೆ ಅನಿಸಿರಲಿಲ್ಲ. ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಹಳ ರನ್ ಗಳಿಸಿಕೊಟ್ಟಿದ್ದಾರೆ. ಆದರೆ, ಶೇನ್ ವ್ಯಾಟ್ಸನ್ ಅವರಂಥ ಆಟಗಾರರ ರೀತಿ ಪಂದ್ಯದ ಮೇಲೆ ಪ್ರಭಾವ ಅವರಿಂದ ಇರಲಿಲ್ಲ ಅನಿಸಿತ್ತು. 40 ಬಾಲ್​ನಲ್ಲಿ 50 ರನ್ ಗಳಿಸಬಲ್ಲರಾದರೂ ಎದುರಾಳಿ ತಂಡದ ಬೌಲರ್​ಗಳ ಜಂಘಾಬಲ ಉಡುಗಿಸಬಲ್ಲಂಥವರಾಗಿರಲಿಲ್ಲ. ಪಕ್ಕಾ ಮ್ಯಾಚ್ ವಿನ್ನರ್ ಆಗಿರಲಿಲ್ಲ. ಶೇನ್ ವ್ಯಾಟ್ಸನ್ ರನ್ ಗಳಿಸಿದರೆ 60 ಬಾಲ್​ನಲ್ಲಿ 100 ರನ್ ಭಾರಿಸುತ್ತಾರೆ. ಈಗ ಫ್ಯಾಫ್ ಡುಪ್ಲೆಸಿ ಅವರು ಎಲ್ಲಾ ನಿರೀಕ್ಷೆಯನ್ನೂ ಮೀರಿ ನಿಂತಿದ್ದಾರೆ. ನನ್ನದಷ್ಟೇ ಅಲ್ಲ ಇತರ ಹಲವು ಮಂದಿಯ ಅಭಿಪ್ರಾಯಗಳು ಸುಳ್ಳಾಗುವ ರೀತಿ ಆಡಿದ್ದಾರೆ” ಎಂದು ಮಾಜಿ ಟೀಮ್ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
  ORANGE CAP:
  ಐಪಿಎಲ್​​ಗೆ ಅಡುವ ಮುನ್ನ ಡುಪ್ಲೆಸಿ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಿ ವಿಜೃಂಬಿಸಿದ್ದರು. ಅದು ಐಪಿಎಲ್​ನಲ್ಲಿ ಸಹಾಯಕ್ಕೆ ಬಂದಿದೆ ಎಂದು ಗಂಭೀರ್ ವಿಶ್ಲೇಷಿಸಿದ್ದಾರೆ. “ಸಿಪಿಎಲ್​ನಲ್ಲಿಯೂ ಅವರು ಒಳ್ಳೆಯ ಫಾರ್ಮ್​ನಲ್ಲಿದ್ದರು. ಬೇರೆ ಟೂರ್ನಿಗಳಲ್ಲಿ ಆಡಿ ಬರುವವರು ಐಪಿಎಲ್​ನಲ್ಲಿ ಒಳ್ಳೆಯ ಪ್ರದರ್ಶನ ನೀಡಬಲ್ಲರು. ನೀವು ರನ್ ಗಳಿಸುವುದು ಬಹಳ ಮುಖ್ಯ” ಎಂದು ಗಂಭೀರ್ ತಿಳಿಸಿದ್ಧಾರೆ.

  ಇದನ್ನೂ ಓದಿ: Aus vs Ind- 2ನೇ ಟಿ20: ಭಾರತ ವಿರುದ್ಧ ಆಸ್ಟ್ರೇಲಿಯಾಗೆ ರೋಚಕ ಜಯ; ಸರಣಿ ಗೆದ್ದ ಕಾಂಗರೂ ಪಡೆ

  “ಅನುಭವಕ್ಕೆ ಪರ್ಯಾಯ ಇಲ್ಲ. ಫ್ಯಾಫ್ ಅವರು ತಮ್ಮ ಅನುಭವವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಒಳ್ಳೆಯ ಫಾರ್ಮ್​ನಲ್ಲಿದ್ದಾಗ ಅದನ್ನ ಸರಿಯಾಗಿ ಉಪಯೋಗಿಸಿಕೊಳ್ಳುವುದು ಅವರಿಗೆ ಗೊತ್ತು. ನೀವು ಫಾರ್ಮ್ ಕಳೆದುಕೊಂಡರೆ ಮತ್ತೆ ಅದನ್ನ ಮರಳಿಪಡೆಯುವುದು ಕಷ್ಟ. ಈಗ ಇಯಾನ್ ಮಾರ್ಗನ್ ಸ್ಥಿತಿ ಏನಾಗಿದೆ ನೋಡಿ” ಎಂದರು ಗಂಭೀರ್.

  ಫ್ಯಾಫ್ ಡುಪ್ಲೆಸಿ ಅವರು ಈ ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 14 ಪಂದ್ಯಗಳಿಂದ 546 ರನ್ ಗಳಿಸಿದ್ಧಾರೆ. ರನ್ ಸರಾಸರಿ 45.50 ಇದೆ. ಸ್ಟ್ರೈಕ್ ರೇಟ್ 137.53 ಇದೆ. ರೇಸ್​ನಲ್ಲಿ ಮೊದಲ ಸ್ಥಾನದಲ್ಲಿರುವ ಕೆಎಲ್ ರಾಹುಲ್ ಅವರು ಪ್ಲೇ ಆಫ್​ನಲ್ಲಿ ಆಡುತ್ತಿಲ್ಲ. ಹೀಗಾಗಿ, ಆರೆಂಜ್ ಕ್ಯಾಪ್ ಗೆಲ್ಲುವ ಅವಕಾಶ ಡುಪ್ಲೆಸಿ ಅವರಿಗೆ ಹೆಚ್ಚಿದೆ.
  Published by:Vijayasarthy SN
  First published: