KXIP vs RCB: ಆರ್​ಸಿಬಿಯನ್ನು ಕಾಪಾಡುವ ಬೌಲರ್ ಒಬ್ಬನೆ; ಭವಿಷ್ಯ ನುಡಿದ ಕ್ರಿಕೆಟ್​ ಪಂಡಿತರು

ತಂಡದಲ್ಲಿ ಕೆಲ ಬದಲಾವಣೆ ಮಾಡಿಕೊಂಡು ಕಣಕ್ಕೆ ಇಳಿಯಲು ಆರ್​ಸಿಬಿ ಮುಂದಾಗಿದೆ. ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಉಮೇಶ್​ ಯಾದವ್​ ಬದಲಿಗೆ ಮೊಹಮದ್​ ಸಿರಾಜ್​ರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

Royal challengers bengalore

Royal challengers bengalore

  • Share this:
    ಆರ್​ಸಿಬಿ ತಂಡ ಈಗಾಗಲೇ ಡೆಲ್ಲಿ ವಿರುದ್ಧ ಒಂದು ಮ್ಯಾಚ್​ ಗೆದ್ದು ಬೀಗಿದ್ದು, ಇಂದು ಬಲಿಷ್ಠ ಕಿಂಗ್ಸ್​ ಇಲವೆನ್​ ಪಂಜಾಬ್​ ಅನ್ನು ಎದುರಿಸಲಿದೆ. ಮೊದಲ ಪಂದ್ಯ ಗೆದ್ದ ವಿಶ್ವಾಸದಲ್ಲೇ ಆರ್​ಸಿಬಿ ತಂಡ ಐದು ಕನ್ನಡಿಗರಿರುವ ಪಂಜಾಬ್​ ತಂಡವನ್ನು ಇಂದು ಎದುರಿಸಲಿದೆ. ಈ ಮೂಲಕ ಗೆಲುವಿನ ಓಟವನ್ನು ಮುಂದುವರಿಸುವ ತವಕದಲ್ಲಿದೆ. ಇನ್ನು, ಈಗಾಗಲೇ ಸೋಲಿನ ರುಚಿ ಕಂಡಿರುವ ಪಂಜಾಬ್​ಗೆ ಮತ್ತೆ ಗೆಲ್ಲುವ ಲಯಕ್ಕೆ ಮರಳಬೇಕಿದೆ. ಆದರೆ, ಬೌಲಿಂಗ್​ ವಿಭಾಗದಲ್ಲಿ ಆರ್​ಸಿಬಿ ಅಷ್ಟಾಗಿ ಬಲಿಷ್ಠತೆ ಹೊಂದಿಲ್ಲ. ಈ ಅಭಿಪ್ರಾಯವನ್ನು ಕ್ರಿಕೆಟ್​ ಪಂಡಿತರು ಕೂಡ ಒಪ್ಪಿಕೊಂಡಿದ್ದಾರೆ.

    ತಂಡದಲ್ಲಿ ಕೆಲ ಬದಲಾವಣೆ ಮಾಡಿಕೊಂಡು ಕಣಕ್ಕೆ ಇಳಿಯಲು ಆರ್​ಸಿಬಿ ಮುಂದಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾ ಆಟಗಾರ ಕ್ರಿಸ್​ ಮಾರಿಸ್​ ಇಂದಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಉಮೇಶ್​ ಯಾದವ್​ ಬದಲಿಗೆ ಮೊಹಮದ್​ ಸಿರಾಜ್​ರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕವನ್ನು ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ಆಲ್ರೌಂಡರ್​ ಮೊಯಿನ್​ ಅಲಿಗೆ ಮಣೆ ಹಾಕುವ ಸಾಧ್ಯತೆ ಇದೆ. ಹೀಗಿದ್ದರೂ ಡೆತ್​ ಓವರ್​ನಲ್ಲಿ ಆರ್​ಸಿಬಿಗೆ ನವದೀಪ್​ ಸೈನಿ ಬಿಟ್ಟು ಬೇರಾರೂ ಸಹಕಾರಿಯಾಗಲಾರದು ಎಂದು ಭಾರತದ ಮಾಜಿ ಓಪನರ್​ ಆಕಾಶ್​ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

    ಜೋಶ್​ ಫಿಲಿಪ್ ಬದಲಿಗೆ ಮೋಯಿನ್​ ಅಲಿಯನ್ನು ಅವರು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಈ ಮೂಲಕ ಆರ್​ಸಿಬಿ ತನ್ನ ಬೌಲಿಂಗ್​ ವರ್ಗವನ್ನು ಬಲಗೊಳಿಸಿಕೊಳ್ಳಬೇಕು. ಆದರೆ, ಅವರ ಬಳಿ ಹೆಚ್ಚು ಆಯ್ಕೆಗಳಿಲ್ಲ. ಡೆತ್​ ಓವರ್​ಗಳಲ್ಲಿ ಸೈನಿ ಮಾತ್ರ ಆರ್​ಸಿಬಿಗೆ ಸಹಕಾರಿಯಾಗುತ್ತಾರೆ, ಎಂದಿದ್ದಾರೆ ಆಕಾಶ್​.



    ಇನ್ನು ಪಂಜಾಬ್ ತಂಡದಿಂದ ಮುಜೀಬ್​ ಅವರನ್ನು ಬೌಲಿಂಗ್​ಗೆ ಇಳಿಸಬೇಕು ಎಂಬುದು ಆಕಾಶ್​ ಅಭಿಪ್ರಾಯ. ಮುಜೀಬ್​ ಉರ್​ ರೆಹ್ಮಾನ್​ ಅತ್ಯುತ್ತಮ ವಿಕೆಟ್​ ಟೇಕರ್. ಫಿಂಚ್​, ಕೊಹ್ಲಿ, ಎಬಿಡಿ, ಪಡಿಕ್ಕಲ್​ ಬ್ಯಾಟ್ಸ್​ಮೆನ್​ಗಳನ್ನು ಎದುರಿಸಲು ಈ ಬೌಲರ್​ ಇಂದ ಮಾತ್ರ ಸಾಧ್ಯ ಎಂದಿದ್ದಾರೆ.
    Published by:Rajesh Duggumane
    First published: