Mumbai Indians Auction 2022: ಮೊದಲ ದಿನದ ಬಿಡ್ಡಿಂಗ್​ನಲ್ಲಿ MI ತಂಡ ಸೇರಿದ ಆಟಗಾರರು ಇವರೇ ನೋಡಿ

ಇಶಾನ್ ಕಿಶನ್  ಅವರನ್ನು 15.25 ಕೋಟಿಗೆ ಸಹಿ ಮಾಡಿಸಿಕೊಂಡಿದೆ. ಐದು ಬಾರಿ ಚಾಂಪಿಯನ್‌ ಆಗಿರುವ ಮುಂಬೈ ಇಂಡಿಯನ್ಸ್​​  ಖರೀದಿಸಿದ ಏಕೈಕ ಕ್ಯಾಪ್ಡ್ ಆಟಗಾರ ಕಿಶನ್​ ಆಗಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ಟೀಂನಲ್ಲಿರುವ 4 ಆಟಗಾರರನ್ನು ಉಳಿಸಿಕೊಂಡು, ಹೊಸದಾಗಿ 4 ಆಟಗಾರರನ್ನು ಖರೀದಿಸಲಾಗಿದೆ.

ಆಕಾಶ್​ ಅಂಬಾನಿ, ನಿತಾ ಅಂಬಾನಿ

ಆಕಾಶ್​ ಅಂಬಾನಿ, ನಿತಾ ಅಂಬಾನಿ

  • Share this:
15ನೇ ಆವೃತ್ತಿಯ ಮೊದಲ ದಿನದ ಐಪಿಎಲ್ ಹರಾಜು (IPL Auction) ಪ್ರಕ್ರಿಯೆ ಇಂದು ನಡೆಯಿತು. IPL ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸ್ ಮುಂಬೈ ಇಂಡಿಯನ್ಸ್ (MI- Mumbai Indians) ಅಳೆದುತೂಗಿ ಆಟಗಾರರನ್ನು ಹರಾಜಿನಲ್ಲಿ ತಮ್ಮ ತಂಡಕ್ಕೆ ಕರೆತಂದಿದೆ. ಮುಂಬೈ ಇಂಡಿಯನ್ಸ್ (MI) ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹರಾಜಿನ ಮೊದಲ ದಿನದ ಆರಂಭದಲ್ಲಿ ಕಡಿಮೆ ಮೊತ್ತದ ಆಟಗಾರರನ್ನು ಖರೀದಿಸಿತು. ಆದರೆ ದಿನದ ಅಂತ್ಯಕ್ಕೆ ದೊಡ್ಡ ಮೊತ್ತವನ್ನು ಖರ್ಚು ಮಾಡಿತು. ವಿಕೆಟ್-ಕೀಪರ್, ಬ್ಯಾಟ್ಸಮನ್​​ ಇಶಾನ್ ಕಿಶನ್  ಅವರನ್ನು 15.25 ಕೋಟಿಗೆ ಸಹಿ ಮಾಡಿಸಿಕೊಂಡಿದೆ. ಐದು ಬಾರಿ ಚಾಂಪಿಯನ್‌ ಆಗಿರುವ ಮುಂಬೈ ಇಂಡಿಯನ್ಸ್​​  ಖರೀದಿಸಿದ ಏಕೈಕ ಕ್ಯಾಪ್ಡ್ ಆಟಗಾರ ಕಿಶನ್​ ಆಗಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ಟೀಂನಲ್ಲಿರುವ 4 ಆಟಗಾರರನ್ನು ಉಳಿಸಿಕೊಂಡು, ಹೊಸದಾಗಿ 4 ಆಟಗಾರರನ್ನು ಖರೀದಿಸಲಾಗಿದೆ.

IPL 2022 ಮೆಗಾ ಹರಾಜಿನ 1ನೇ ದಿನದಂದು MI ತಮ್ಮ ಹಣವನ್ನು ಹೇಗೆ ಖರ್ಚು ಮಾಡಿದೆ ಎಂಬ ಸಂಫೂರ್ಣ ಮಾಹಿತಿ ಇಲ್ಲಿದೆ ನೋಡಿ..

Purse Before Day 1: Rs 48 crore

Purse After Day 1: Rs 27.85 crore

ತಂಡದಲ್ಲಿ ಉಳಿಸಿಕೊಳ್ಳಲಾಗಿರುವ ಆಟಗಾರರು

1) ರೋಹಿತ್ ಶರ್ಮಾ (Rs 16 crore)

2) ಜಸ್ಪ್ರೀತ್ ಬುಮ್ರಾ (Rs 12 crore)

3) ಸೂರ್ಯಕುಮಾರ್ ಯಾದವ್ (Rs 8 crore)

4) ಕೀರಾನ್ ಪೊಲಾರ್ಡ್ (Rs 6 crore)

ಮೊದಲ ದಿನ MI ಖರೀದಿಸಿದ ಆಟಗಾರರು

1) ಇಶಾನ್ ಕಿಶನ್ (15.25 crore)

2) ಡೆವಾಲ್ಡ್ ಬ್ರೆವಿಸ್ (3 crore)

3) ಬೇಸಿಲ್​ ತಂಪಿ( 30 lakh)

4) ಮುರ್ಗನ್​ ಅಶ್ವಿನ್ ​(1.6 crore)

ಬದಲಾಯಿತು ಇಶಾನ್ ಕಿಶನ್ ಅದೃಷ್ಟ..!

2 ಕೋಟಿ ಮೂಲಬೆಲೆಯ ವಿಕೆಟ್ ಕೀಪರ್- ಬ್ಯಾಟರ್ ಇಶಾನ್ ಕಿಶನ್ ಅವರ ಖರೀದಿಗೆ ಮುಂಬೈ ಮತ್ತು ಹೈದರಾಬಾದ್ ನಡುವೆ ಭರ್ಜರಿ ಪೈಪೋಟಿ ನಡೆದವು. ಅಂತಿಮವಾಗಿ ಇವರು ದಾಖಲೆ ಎಂಬಂತೆ ಬರೋಬ್ಬರಿ 15.25 ಕೋಟಿಗೆ ಮುಂಬೈಗೆ ಸೇರಿಕೊಂಡಿದ್ದಾರೆ. 2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಯ ಮೊತ್ತಕ್ಕೆ ಇಶಾನ್​ ಸೇಲ್​ ಆಗಿದ್ದಾರೆ. ಬರೋಬ್ಬರಿ 15.25 ಕೋಟಿ ರುಪಾಯಿಗಳನ್ನ ಕೊಟ್ಟು ಮುಂಬೈ ಇಂಡಿಯನ್ಸ್ ತಂಡ ಅವರನ್ನ ಖರೀದಿಸಿದೆ. ವಿಕೆಟ್ ಕೀಪರ್ ಇಶಾನ್ ಕಿಶಾನ್ ಗಾಗಿ ಫ್ರಾಂಚೈಸಿಗಳು ಮುಗಿಬಿದ್ದಿದ್ದವು. ನಾ ಮುಂದೆ ತಾ ಮುಂದೆ ಅಂತ ಬಿಡ್ ಮಾಡಿದರು.ಆರಂಭದಿಂದಲೂ ಮುಂಬೈ ಇಂಡಿಯನ್ಸ್ ತಂಡ ಇಶಾನ್ ಗಾಗಿ ಬಿಡ್ ಮಾಡುತ್ತಲೇ ಇತ್ತು.

ಇದನ್ನೂ ಓದಿ: IPL 2022: ಕರ್ನಾಟಕದ ಆಟಗಾರರು ಯಾವ್ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಸೇಲ್ ಆಗಿದ್ದಾರೆ? ಇಲ್ಲಿದೆ ಲಿಸ್ಟ್​​

ಹೊಸದಾಗಿ ಮುಂಬೈ ಇಂಡಿಯನ್ಸ್ ಸೇರಿದವರು

ಜನಪ್ರಿಯವಾಗಿ 'ಬೇಬಿ ಎಬಿ' ಎಂದು ಕರೆಯಲಾಗುವ ಡೆವಾಲ್ಡ್ ಬ್ರೆವಿಸ್ ಅವರನ್ನು 3 ಕೋಟಿಗೆ ಖರೀದಿಸಲಾಗಿತು. ಏಕೆಂದರೆ ಅವರ ಬ್ಯಾಟಿಂಗ್ ಶೈಲಿಯು ದಂತಕಥೆ ದಕ್ಷಿಣ ಆಫ್ರಿಕಾದ ಬ್ಯಾಟರ್ ಅಬ್ ಡಿವಿಲಿಯರ್ಸ್ ಅವರನ್ನು ಹೋಲುತ್ತದೆ.  ಅದರ ನಂತರ MI. ಮಾಜಿ ಸನ್‌ರೈಸರ್ಸ್ ಹೈದರಾಬಾದ್ (SRH) ವೇಗಿ ಬೇಸಿಲ್ ಥಂಪಿ ಅವರ ಮೂಲ ಬೆಲೆ ಕೇವಲ ರೂ. 30 ಲಕ್ಷ. ಆಗಿದ್ದು ಅವರನ್ನು ತಂಡಕ್ಕೆ ಬರಮಾಡಿಕೊಳ್ಳಲಾಗಿದೆ.

ಇದರ ನಂತರ, ಮುರುಗನ್ ಅಶ್ವಿನ್ ಅವರನ್ನು 1.60 ಕೋಟಿ ರೂ.ಗೆ ಸಹಿ ಹಾಕಲು SRH ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನೊಂದಿಗೆ ಬಿಡ್ಡಿಂಗ್ ಪೈಪೋಟಿ ನಡೆಸಬೇಕಾಯಿತು. MI ಮಾಜಿ ಆಟಗಾರರಾದ ಕ್ವಿಂಟನ್ ಡಿ ಕಾಕ್ ಮತ್ತು ಟ್ರೆಂಟ್ ಬೌಲ್ಟ್‌ಗೆ ಬಿಡ್ಡಿಂಗ್​ ಮಾಡಿದರಾದರೂ, ಅವರ ಸಹಿಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಜೊತೆಗೆ ಜೋಶ್ ಹ್ಯಾಜಲ್‌ವುಡ್, ಮಾರ್ಕ್ ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರಿಗಾಗಿ ಬಿಡ್ ಮಾಡಿ ವಿಫಲರಾದರು.
Published by:Kavya V
First published: