IPL 2021: ಈ ಸಲ ಕಪ್ ಗೆಲ್ಲುವ ತಂಡವನ್ನು ಹೆಸರಿಸಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ..!

ರೋಹಿತ್ ಶರ್ಮಾ (ನಾಯಕ), ಆದಿತ್ಯ ತಾರೆ (ವಿಕೆಟ್ ಕೀಪರ್- ಬ್ಯಾಟ್ಸ್‌ಮನ್), ಅನ್ಮೋಲ್‌ಪ್ರೀತ್ ಸಿಂಗ್ (ಬ್ಯಾಟ್ಸ್‌ಮನ್), ಸುಚಿತ್ ರಾಯ್ (ಆಲ್‌ರೌಂಡರ್), ಧವಲ್ ಕುಲಕರ್ಣಿ (ವೇಗದ ಬೌಲರ್), ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್), ಇಶಾನ್ ಕಿಶನ್ (ವಿಕೆಟ್ ಕೀಪರ್- ಬ್ಯಾಟ್ಸ್‌ಮನ್)

IPL 2021

IPL 2021

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2021) 14ನೇ ಸೀಸನ್ ಶುಕ್ರವಾರದಿಂದ ಪ್ರಾರಂಭವಾಗಲಿದೆ. ಏಪ್ರಿಲ್ 9 ರಿಂದ ಶುರುವಾಗಲಿರುವ ಚುಟುಕು ಕದನಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಲಿರುವ ತಂಡವನ್ನು ಹೆಸರಿಸಿದ್ದಾರೆ. ಅದು ಕೂಡ ಹಾಲಿ ಚಾಂಪಿಯನ್ಸ್ ಎಂಬುದು ವಿಶೇಷ. ಹೌದು ಮೈಕಲ್ ವಾನ್ ಈ ಬಾರಿ ಕೂಡ ಮುಂಬೈ ತಂಡವೇ ಚಾಂಪಿಯನ್ ಪಟ್ಟಕ್ಕೇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

  ಬಲಿಷ್ಠ ಪಡೆಯನ್ನು ಹೊಂದಿರುವ ರೋಹಿತ್ ಶರ್ಮಾ ನೇತೃತ್ವದ ತಂಡವು ಈ ಬಾರಿ ಕೂಡ ಟ್ರೋಫಿ ಎತ್ತಲಿದೆ ಎಂದು ಮೈಕಲ್ ವಾನ್ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಎರಡೂ ಸೀಸನ್​ಗಳಲ್ಲಿ ಚಾಂಪಿಯನ್ಸ್ ಆಗಿರುವ ಮುಂಬೈ ಈ ಸಲ ಹ್ಯಾಟ್ರಿಕ್ ಬಾರಿಸಲಿದ್ದಾರೆ. ಒಂದು ವೇಳೆ ಅದೃಷ್ಟ ಕೈಕೊಟ್ಟರೆ ಸನ್ ರೈಸರ್ಸ್ ಹೈದರಾಬಾದ್ ತಂಡ 2021ರ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದ್ದಾರೆ.

  ಯುಎಇಯಲ್ಲಿ ನಡೆದ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ ಆರನೇ ಬಾರಿ ಕೂಡ ಅವರೇ ಚಾಂಪಿಯನ್ ಆಗಲಿದೆ ಎಂದು ವಾನ್ ತಿಳಿಸಿದ್ದಾರೆ. ಏಕೆಂದರೆ ರೋಹಿತ್ ಶರ್ಮಾ ಐಪಿಎಲ್​ನ ಅತ್ಯಂತ ಯಶಸ್ವಿ ನಾಯಕ. ಅವರ ಮುಂದೆ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಹಲವು ಆಯ್ಕೆಗಳಿವೆ. ಹೀಗಾಗಿ ಈ ಬಾರಿ ಕೂಡ ಮುಂಬೈ ತಂಡವೇ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಮೈಕೆಲ್ ವಾನ್ ಭವಿಷ್ಯ ನುಡಿದಿದ್ದಾರೆ.

  ಐಪಿಎಲ್ 2021ರ ಮುಂಬೈ ಇಂಡಿಯನ್ಸ್ ಪೂರ್ಣ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಆದಿತ್ಯ ತಾರೆ (ವಿಕೆಟ್ ಕೀಪರ್- ಬ್ಯಾಟ್ಸ್‌ಮನ್), ಅನ್ಮೋಲ್‌ಪ್ರೀತ್ ಸಿಂಗ್ (ಬ್ಯಾಟ್ಸ್‌ಮನ್), ಸುಚಿತ್ ರಾಯ್ (ಆಲ್‌ರೌಂಡರ್), ಧವಲ್ ಕುಲಕರ್ಣಿ (ವೇಗದ ಬೌಲರ್), ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್), ಇಶಾನ್ ಕಿಶನ್ (ವಿಕೆಟ್ ಕೀಪರ್- ಬ್ಯಾಟ್ಸ್‌ಮನ್), ಜಸ್ಪ್ರೀತ್ ಬುಮ್ರಾ (ವೇಗದ ಬೌಲರ್)., ಜಯಂತ್ ಯಾದವ್ (ಸ್ಪಿನ್ನರ್), ಕೀರನ್ ಪೊಲಾರ್ಡ್ (ಆಲ್‌ರೌಂಡರ್), ಕೃನಾಲ್ ಪಾಂಡ್ಯ (ಆಲ್‌ರೌಂಡರ್), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್- ಬ್ಯಾಟ್ಸ್‌ಮನ್), ರಾಹುಲ್ ಚಹರ್ (ಸ್ಪಿನ್ನರ್), ಸೂರ್ಯಕುಮಾರ್ ಯಾದವ್ (ಬ್ಯಾಟ್ಸ್‌ಮನ್), ಟ್ರೆಂಟ್ ಬೌಲ್ಟ್ (ವೇಗದ ಬೌಲರ್), ಕ್ರಿಸ್ ಲಿನ್ (ಬ್ಯಾಟ್ಸ್‌ಮನ್), ಸೌರಭ್ ತಿವಾರಿ (ಬ್ಯಾಟ್ಸ್‌ಮನ್), ಮೊಹ್ಸಿನ್ ಖಾನ್ (ವೇಗದ ಬೌಲರ್), ಆಡಮ್ ಮಿಲ್ನೆ (ವೇಗದ ಬೌಲರ್), ನಾಥನ್ ಕೌಲ್ಟರ್ ನೈಲ್ (ವೇಗದ ಬೌಲರ್), ಪಿಯೂಷ್ ಚಾವ್ಲಾ (ಸ್ಪಿನ್ನರ್), ಜಿಮ್ಮಿ ನೀಶಮ್ (ಆಲ್‌ರೌಂಡರ್), ಯುಧ್ವೀರ್ ಚರಕ್ (ವೇಗದ ಬೌಲರ್), ಮಾರ್ಕೊ. ಜಾನ್ಸೆನ್ (ಆಲ್‌ರೌಂಡರ್), ಅರ್ಜುನ್ ತೆಂಡೂಲ್ಕರ್ (ಆಲ್‌ರೌಂಡರ್).
  Published by:zahir
  First published: