IPL 2021 MI vs DC| ಡೆಲ್ಲಿಗೆ ಮುಂಬೈ ಸವಾಲು; ಗೆದ್ದರೆ ಫ್ಲೇ ಆಫ್​ಗೆ ಅವಕಾಶ ಪಡೆಯಲಿದೆ ರೋಹಿತ್ ಪಡೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ 16 ಅಂಕಗಳನ್ನ ಪಡೆದು ಈಗಾಗಲೇ ಪ್ಲೇ ಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಒಂದು ವೇಳೆ ಡೆಲ್ಲಿ ಉಳಿದೆಲ್ಲಾ ಪಂದ್ಯಗಳನ್ನ ಸೋತು, ಬೇರೆ ನಾಲ್ಕು ತಂಡಗಳು ತಮ್ಮೆಲ್ಲಾ ಪಂದ್ಯಗಳನ್ನ ಗೆದ್ದ ಪಕ್ಷದಲ್ಲಿ ಮಾತ್ರ ಡೆಲ್ಲಿ ತಂಡಕ್ಕೆ ಪ್ಲೇ ಆಫ್ ಅವಕಾಶ ಕೈತಪ್ಪಬಹುದು.

ಮುಂಬೈ-ಡೆಲ್ಲಿ.

ಮುಂಬೈ-ಡೆಲ್ಲಿ.

 • Share this:
  ಇಂದು ನಡೆಯಲಿರುವ ಮಹತ್ವದ ಐಪಿಎಲ್ 2021 (IPL 2021) ಪಂದ್ಯದಲ್ಲಿ ರಿಷಬ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ (Delhi Capital) ಮತ್ತು ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ (Mumbai Indians) ಮುಖಾಮುಖಿಯಾಗುತ್ತಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ (Punjab Kings) ಗೆಲುವು ಸಾಧಿಸುತ್ತಿದ್ದಂತೆ, ಡೆಲ್ಲಿ ಕ್ಯಾಪಿಟಲ್ ಎರಡನೇ ತಂಡವಾಗಿ ಪ್ಲೇ ಆಫ್​ಗೆ (IPL Play Off) ಪ್ರವೇಶ ಪಡೆದಿದೆ. ಆದರೆ, ಮುಂಬೈ ಇಂಡಿಯನ್ಸ್​ ಪ್ಲೇ ಆಫ್​ಗೆ ಪ್ರವೇಶ ಪಡೆಯಬೇಕು ಎಂದರೆ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಒಳಗಾಗಿದೆ. ಹೀಗಾಗಿ ಇಂದಿನ ಪಂದ್ಯ ಮುಂಬೈಗೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಈ ಪಂದ್ಯದ ಫಲಿತಾಂಶದ ಆಧಾರದ ಮೇಲೆ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಪಂಜಾಬ್ ಕಿಂಗ್ಸ್​ ಹಣೆಬರಹವೂ ಸಹ ನಿರ್ಧಾರವಾಗಲಿದೆ. ಅಂಕಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಲಿದೆ.

  ಡೆಲ್ಲಿ ಕ್ಯಾಪಿಟಲ್ vs  ಮುಂಬೈ ಇಂಡಿಯನ್ಸ್; 

  ಡೆಲ್ಲಿ ಕ್ಯಾಪಿಟಲ್ಸ್ ತಂಡ 16 ಅಂಕಗಳನ್ನ ಪಡೆದು ಈಗಾಗಲೇ ಪ್ಲೇ ಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಒಂದು ವೇಳೆ ಡೆಲ್ಲಿ ಉಳಿದೆಲ್ಲಾ ಪಂದ್ಯಗಳನ್ನ ಸೋತು, ಬೇರೆ ನಾಲ್ಕು ತಂಡಗಳು ತಮ್ಮೆಲ್ಲಾ ಪಂದ್ಯಗಳನ್ನ ಗೆದ್ದ ಪಕ್ಷದಲ್ಲಿ ಮಾತ್ರ ಡೆಲ್ಲಿ ತಂಡಕ್ಕೆ ಪ್ಲೇ ಆಫ್ ಅವಕಾಶ ಕೈತಪ್ಪಬಹುದು. ಆದರೆ, ಹಾಗಾಗುವ ಸಾಧ್ಯತೆ ಬಹುತೇಕ ಕಡಿಮೆ. ಡೆಲ್ಲಿ ತಂಡ ತನಗಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಪ್ಲೇ ಆಫ್ ಪ್ರವೇಶ ಖಚಿತಗೊಳ್ಳುತ್ತದೆ. ಎರಡು ಪಂದ್ಯ ಗೆದ್ದರೆ ಟಾಪ್-2 ತಂಡವಾಗಿ ಪ್ರವೇಶ ಪಡೆದು ಕ್ವಾಲಿಫಯರ್ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯಲಿದೆ.

  ಮುಂಬೈ ಪಾಲಿಗೆ ಇದು ನಿರ್ಣಾಯಕ ಪಂದ್ಯ. ಕಳೆದ ಕೆಲ ಪಂದ್ಯಗಳಿಂದ ನಾಯಕ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ನೀಡುವಲ್ಲಿ ಸಫಲರಾಗುತ್ತಿದ್ದಾರೆ. ಅಲ್ಲದೆ, ಕಳೆದ ಪಂದ್ಯದ ಗೆಲುವು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಹಾರ್ದಿಕ್ ಪಾಂಡ್ಯ ಮತ್ತೆ ಫಾರ್ಮ್​ಗೆ ಮರಳಿರುವುದು ಸಹ ತಂಡಕ್ಕೆ ಪ್ಲಸ್ ಪಾಯಿಂಟ್.

  ಸೌರಬ್ ತಿವಾರಿ ಫಾರ್ಮ್​ನಲ್ಲಿದ್ದಾರೆ. ಆದರೆ, ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ತಂಡಕ್ಕೆ​ ದುಬಾರಿಯಾಗಿದೆ. ಆದರೆ, ಇಂದಿನ ಪಂದ್ಯದಲ್ಲಿ ಈ ಆಟಗಾರರು ಫಾರ್ಮ್​ಗೆ ಮರಳಿದರೆ ಮುಂಬೈ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ. ಇನ್ನೂ ಕೆಳಕ್ರಮಾಂಕದಲ್ಲಿ ಕಿರೋನ್ ಪೊಲಾರ್ಡ್ ತಂಡದ ಬಹುದೊಡ್ಡ ನಂಬಿಕೆ. ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್​, ರಾಹುಲ್ ಚಾಹರ್ ಅತ್ಯತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು, ಆರ್​ಸಿಬಿ ಬ್ಯಾಟ್ಸ್​ಮನ್​ಗಳಿಗೆ ಇಂದು ಸವಾಲಾಗಲಿದ್ದಾರೆ ಎನ್ನಲಾಗುತ್ತಿದೆ. ​ಹೀಗಾಗಿ ಇಂದಿನ ಪಂದ್ಯ ಹೈವೋಲ್ಟೇಜ್ ಪಡೆದುಕೊಂಡಿದೆ.

  ಇದನ್ನೂ ಓದಿ: IPL 2021, KKR vs PBKS: ಕೆಕೆಆರ್ ಮಣಿಸಿದ ಪಂಜಾಬ್; ಅರ್ಧಶತಕ ಗಳಿಸಿ ನಿರ್ಣಾಯಕ ಆಟವಾಡಿದ ಕೆ.ಎಲ್. ರಾಹುಲ್!

  ತಂಡಗಳು

  ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕ್ವಿಂಟನ್ ಡೀಕಾಕ್, ಸೌರಬ್ ತಿವಾರಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರಾನ್ ಪೊಲಾರ್ಡ್, ಕೃಣಾಲ್ ಪಾಂಡ್ಯ, ಅಡಂ ಮಿಲ್ನೆ/ನೇಥನ್ ಕೌಲ್ಟರ್ ನೈಲ್, ರಾಹುಲ್ ಚಾಹರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.

  ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಲಲಿತ್ ಯಾದವ್, ಶಿಮ್ರಾನ್ ಹೆಟ್​ಮಯರ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಡ, ಆನ್ರಿಚ್ ನೋರ್ಟಿಯಾ, ಅವೇಶ್ ಖಾನ್.
  Published by:MAshok Kumar
  First published: