14 ಪಂದ್ಯ, 6 ಗೆಲುವು, 8 ಸೋಲು...ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ಫಲಿತಾಂಶವಿದು. ಅತ್ಯಂತ ಕಳಪೆ ಆಟವಾಡಿದ ಸಿಎಸ್ಕೆ ತಂಡ ಇದೇ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸದೆ ಹೊರ ನಡೆಯಿತು. ಇದರ ಬೆನ್ನಲ್ಲೇ ಸಿಎಸ್ಕೆ ನಾಯಕ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿಯೊಂದು ಹುಟ್ಟಿಕೊಂಡಿತ್ತು. ಆದರೆ ನಾನು ಮುಂದಿನ ಸೀಸನ್ನಲ್ಲೂ ಆಡಲಿದ್ದೇನೆ ಎನ್ನುವ ಮೂಲಕ ಖುದ್ದು ಧೋನಿಯೇ ಎಲ್ಲಾ ಊಹಾಪೂಹಗಳಿಗೆ ತೆರೆ ಎಳೆದಿದ್ದರು. ಇದೀಗ ಮಾಹೀ, ಮುಂದಿನ ಸೀಸನ್ನಲ್ಲಿ ಆಡಲಿರುವುದು ನಿಜ. ಆದರೆ ನಾಯಕರಾಗಿ ಕಣಕ್ಕಿಳಿಯುವುದಿಲ್ಲ ಎಂಬ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ ಟೀಮ್ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗರ್.
ಸಂದರ್ಶನವೊಂದರಲ್ಲಿ ಮಾತನಾಡಿದ ಬಂಗರ್ ಅವರನ್ನು ಸಿಎಸ್ಕೆ ತಂಡದ ಬಗ್ಗೆ ಕೇಳಲಾಯಿತು. ಈ ವೇಳೆ ಖಂಡಿತವಾಗಿಯೂ ಮುಂದಿನ ಸೀಸನ್ನಲ್ಲಿ ಚೆನ್ನೈ ತಂಡದ ಕಾರ್ಯತಂತ್ರದಲ್ಲಿ ಬದಲಾವಣೆ ಆಗಲಿದೆ. ಅದು ತಂಡಕ್ಕೆ ಅನಿವಾರ್ಯ ಕೂಡ. ನನಗೆ ತಿಳಿದಿರುವಂತೆ ಮುಂದಿನ ಸೀಸನ್ನಲ್ಲಿ ಧೋನಿ ನಾಯಕತ್ವ ತ್ಯಜಿಸಲಿದ್ದಾರೆ. ಬದಲಾಗಿ ಫಾಫ್ ಡುಪ್ಲೆಸಿಸ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದರು.
2011 ರ ವಿಶ್ವಕಪ್ ನಂತರ ಧೋನಿ ನಾಯಕತ್ವ ತ್ಯಜಿಸಲು ಸಿದ್ಧರಿದ್ದರು. ಮುಂದೆ ಕೆಲವು ಕಠಿಣ ಪಂದ್ಯಗಳು ನಡೆಯಲಿದ್ದವು. ನಮ್ಮ ಮುಂದೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಿದ್ದವು. ಆ ಸಮಯದಲ್ಲಿ ನಾಯಕತ್ವಕ್ಕೆ ಯಾರೂ ಸಿದ್ಧರಿರಲಿಲ್ಲ. ಆದ್ದರಿಂದ ನಾಯಕನಾಗಿ ಮುಂದುವರೆದಿದ್ದರು. ಬಳಿಕ ಸರಿಯಾದ ಸಮಯ ಬಂದಾಗ ಅವರ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿಗೆ ಒಪ್ಪಿಸಿದರು.
ಇದೀಗ ಸಿಎಸ್ಕೆ ತಂಡದಲ್ಲೂ ಅವರು ಹಾಗೆ ಮಾಡುತ್ತಾರೆ ಎಂದು ನನಗಿಸುತ್ತದೆ. ನಾನು ಅರ್ಥಮಾಡಿಕೊಂಡಂತೆ ಎಂಎಸ್ ಧೋನಿ ಮುಂದಿನ ಸೀಸನ್ನಲ್ಲಿ ನಾಯಕನಾಗಿ ಅಲ್ಲ, ಕೇವಲ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಅವರ ಜವಾಬ್ದಾರಿಯನ್ನು ಫಾಫ್ ಡು ಪ್ಲೆಸಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದರು. ಏಕೆಂದರೆ ಪ್ರಸ್ತುತ ಸಿಎಸ್ಕೆ ತಂಡಕ್ಕೆ ನಾಯಕತ್ವದ ಬೇರೆ ಆಯ್ಕೆಗಳಿಲ್ಲ. ನಾವು ಹರಾಜಿನ ಬಗ್ಗೆ ಮಾತನಾಡಿದರೆ, ಯಾವುದೇ ತಂಡವು ನಾಯಕನಾಗಬಲ್ಲ ಆಟಗಾರನನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸಂಜಯ್ ಬಂಗರ್ ತಿಳಿಸಿದರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ