HOME » NEWS » Ipl » MS DHONI FINED FOR SLOW OVER RATE AGAINST DELHI CAPITALS ZP

IPL 2021: ಸೋಲಿನ ಬೆನ್ನಲ್ಲೇ ಧೋನಿಗೆ 12 ಲಕ್ಷ ರೂ. ದಂಡ..!

ಟೈಮ್-ಔಟ್​ಗಳಿಗಾಗಿ ತೆಗೆದುಕೊಂಡ ಸಮಯವನ್ನು ಹೊರತುಪಡಿಸಿ ಮೊದಲ ಒಂದು ಗಂಟೆಯೊಳಗೆ 14.11 ಓವರ್​ಗಳನ್ನು ಬೌಲ್ ಮಾಡಲೇಬೇಕು. ಹೊಸ ನಿಯಮದಂತೆ ಯಾವುದೇ ಆಡಚಣೆ ಉಂಟಾಗದ ಪಂದ್ಯದ ಒಂದು ಇನಿಂಗ್ಸ್​ 90 ನಿಮಿಷಗಳಲ್ಲಿ ಮುಗಿಸಬೇಕು.

news18-kannada
Updated:April 11, 2021, 9:30 PM IST
IPL 2021: ಸೋಲಿನ ಬೆನ್ನಲ್ಲೇ ಧೋನಿಗೆ 12 ಲಕ್ಷ ರೂ. ದಂಡ..!
Dhoni
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​ 14ರ ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್​ ಸೋಲುಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಪಂತ್ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ತಂಡದ ಯುವ ನಾಯಕ ಪಂತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಬ್ಯಾಟಿಂಗ್ ಮಾಡಿದ ಸಿಎಸ್​ಕೆ ತಂಡವು ಸುರೇಶ್ ರೈನಾ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 188 ರನ್ ಕಲೆಹಾಕಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 13.3 ಓವರ್​ನಲ್ಲಿ ಈ ಜೋಡಿ 138 ರನ್​ ಬಾರಿಸಿತ್ತು. ಇನ್ನೇನು ಗೆಲುವಿನ ಅಂಚಿನಲ್ಲಿ ಪೃಥ್ವಿ ಶಾ 72 ರನ್​ಗಳಿಸಿ ಔಟಾದರೆ, ಧವನ್ 85 ರನ್ ಬಾರಿಸಿ ನಿರ್ಗಮಿಸಿದರು. ಅಂತಿಮವಾಗಿ ಡೆಲ್ಲಿ ತಂಡವು 8 ಎಸೆತಗಳು ಬಾಕಿ ಇರುವಂತೆ ಗುರಿ ಮುಟ್ಟುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಅತ್ತ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಬ್ಯಾಟಿಂಗ್​ನ್ನು ನಿಯಂತ್ರಿಸಲು ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಡಿದ ಉಪಾಯಗಳು ಫಲ ನೀಡಲಿಲ್ಲ. ಅದರಲ್ಲೂ ಸತತ ಬೌಲಿಂಗ್​ನಲ್ಲಿ ಬದಲಾವಣೆ ತಂದರೂ ಯಶಸ್ಸು ಸಿಗಲಿಲ್ಲ. ಹೀಗೆ ಫೀಲ್ಡಿಂಗ್ ಬದಲಾವಣೆ ಮತ್ತು ಬೌಲಿಂಗ್ ಬದಲಾವಣೆಯೊಂದಿಗೆ ಹೆಚ್ಚಿನ ಸಮಯ ತೆಗೆದುಕೊಂಡರು. ಪರಿಣಾಮ ಧೋನಿಗೆ ನಿಧಾನಗತಿಯ ಬೌಲಿಂಗ್​ ಮಾಡಿದ್ದಕ್ಕಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

2021ರ ಇಂಡಿಯನ್ ಪ್ರಿಮಿಯರ್ ಲೀಗ್​ನ ಹೊಸ ನೀತಿ ಸಂಹಿತೆ ಪ್ರಕಾರ 20 ಓವರ್‌ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು. ಅಂದರೆ ಇನಿಂಗ್ಸ್​ವೊಂದಕ್ಕೆ 90 ನಿಮಿಷಗಳನ್ನು ನಿಗದಿ ಮಾಡಲಾಗಿದೆ. ಅದರಂತೆ​ 90 ನಿಮಿಷಗಳಲ್ಲಿ 20 ಓವರ್ಸ್ ಮುಗಿಯಬೇಕು. ಈ ಹಿಂದೆ 20ನೇ ಓವರ್​ನ್ನು 90ನೇ ನಿಮಿಷದಿಂದ ಆರಂಭಿಸಲು ಅವಕಾಶವಿತ್ತು. ಆದರೀಗ ಒಂದು ಗಂಟೆ 30 ನಿಮಿಷಗಳ ಒಳಗೆ ಮೊದಲ ಇನಿಂಗ್ಸ್ ಬೌಲಿಂಗ್ ಮುಕ್ತಾಯವಾಗಬೇಕು.

ಹಾಗೆಯೇ ಟೈಮ್-ಔಟ್​ಗಳಿಗಾಗಿ ತೆಗೆದುಕೊಂಡ ಸಮಯವನ್ನು ಹೊರತುಪಡಿಸಿ ಮೊದಲ ಒಂದು ಗಂಟೆಯೊಳಗೆ 14.11 ಓವರ್​ಗಳನ್ನು ಬೌಲ್ ಮಾಡಲೇಬೇಕು. ಹೊಸ ನಿಯಮದಂತೆ ಯಾವುದೇ ಆಡಚಣೆ ಉಂಟಾಗದ ಪಂದ್ಯದ ಒಂದು ಇನಿಂಗ್ಸ್​ 90 ನಿಮಿಷಗಳಲ್ಲಿ ಮುಗಿಸಬೇಕು. ಇಲ್ಲಿ 85 ನಿಮಿಷಗಳನ್ನು ಆಟಕ್ಕೆ ನಿಗದಿಪಡಿಸಲಾಗಿದ್ದರೆ, 5 ನಿಮಿಷಗಳ ಎರಡು ಟೈ ಔಟ್​ ಕೂಡ ನೀಡಲಾಗುತ್ತದೆ.

ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೆಚ್ಚಿನ ಸಮಯ ತೆಗೆದುಕೊಂಡಿದ್ದು, ಹೀಗಾಗಿ ಸಿಎಸ್​ಕೆ ತಂಡ ನಾಯಕ ಮಹೇಂದ್ರ ಸಿಂಗ್ ಧೋನಿಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ. ಒಟ್ಟಿನಲ್ಲಿ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿರುವ ಸಿಎಸ್​ಕೆ ತಂಡದ ನಾಯಕನಿಗೆ ಸೋಲಿನ ನೋವಿನ ಮೇಲೆ ದಂಡದ ಬರೆ ಎಳೆದಂತಾಗಿದೆ.
Published by: zahir
First published: April 11, 2021, 9:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories