ಕೊರೋನಾ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14 ಮುಂದೂಡಲಾಗಿದೆ. ಇದಾಗ್ಯೂ ಐಪಿಎಲ್ನಲ್ಲಿ ಭಾಗವಹಿಸಿದ ಆಟಗಾರರಲ್ಲಿ ಕೊರೋನಾಂತಕ ದೂರವಾಗಿಲ್ಲ. ಏಕೆಂದರೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಅವರ ಕೋವಿಡ್-19 ಟೆಸ್ಟ್ ವರದಿಯು ಪಾಸಿಟಿವ್ ಬಂದಿದೆ. ಇದರಿಂದ ಹಸ್ಸಿ ಜೊತೆ ಸಂಪರ್ಕದಲ್ಲಿ ಇತರೆ ಆಟಗಾರರಲ್ಲೂ ಮತ್ತೆ ಆತಂಕ ಎದುರಾಗಿದೆ.
ಕೆಕೆಆರ್ ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಅವರಲ್ಲಿ ಕೊರೋನಾ ಸೋಂಕು ಕಂಡು ಬಂದ ಬೆನ್ನಲ್ಲೇ, ಸಿಎಸ್ಕೆ ತಂಡದ ಆಟಗಾರರು ಕೂಡ ಕೊರೋನಾ ಟೆಸ್ಟ್ಗೆ ಒಳಗಾಗಿದ್ದರು. ಈ ವೇಳೆ ಸಿಎಸ್ಕೆ ಸಿಇಇ ಕಾಶಿ ವಿಶ್ವನಾಥ್, ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಹಾಗೂ ತಂಡದ ಬಸ್ ಕ್ಲೀನರ್ನಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಇದಾಗ್ಯೂ ಸೋಮವಾರ ನಡೆಸಲಾದ ಮತ್ತೊಂದು ಟೆಸ್ಟ್ನಲ್ಲಿ ಕಾಶಿ ವಿಶ್ವನಾಥ್ ಅವರ ವರದಿಯು ನೆಗೆಟಿವ್ ಬಂದಿತ್ತು. ಆದರೆ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಮೈಕಲ್ ಹಸ್ಸಿ ಅವರ ವರದಿಯು ಪಾಸಿಟಿವ್ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ