IPL 2021: ಧೋನಿಯ ಉತ್ತರಾಧಿಕಾರಿಯನ್ನು ಹೆಸರಿಸಿದ ಮೈಕಲ್ ವಾನ್

ಧೋನಿ ಇನ್ನೂ 2-3 ವರ್ಷಗಳ ಕಾಲ ಆಡಲಿದ್ದಾರೆ ಎಂದು ನೀವು ಹೇಳಬಹುದು. ಇದಾಗ್ಯೂ ಅವರು ಹೆಚ್ಚಿನ ಸಮಯವಂತು ಆಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಯಾವ ಆಟಗಾರನಿಗೆ ತಂಡದ ಜವಾಬ್ದಾರಿ ನೀಡಬೇಕು ಎಂಬುದನ್ನು ಈಗಿನಿಂದ ಪರಿಗಣಿಸಬೇಕು.

dhoni

dhoni

 • Share this:
  ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯೊಂದು ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಈ ಸೀಸನ್​ನ ಮೂರು ಪಂದ್ಯಗಳಲ್ಲಿ ಧೋನಿ ಬ್ಯಾಟ್​ನಿಂದ ರನ್ ಮೂಡಿಬಂದಿಲ್ಲ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಧೋನಿ ಆಡಲಿದ್ದಾರೆ ಎಂಬುದು ಕೂಡ ಅನುಮಾನ ಎನ್ನಲಾಗಿದೆ. ಹಾಗಾಗಿ ಧೋನಿ ಅವರ ಬಳಿಕ ಸಿಎಸ್​ಕೆ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

  ಈ ಪ್ರಶ್ನೆಗೆ ಉತ್ತರಿಸಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ನನ್ನ ಪ್ರಕಾರ ಸಿಎಸ್​ಕೆ ತಂಡವನ್ನು ಮುಂದಿನ ದಿನಗಳಲ್ಲಿ ರವೀಂದ್ರ ಜಡೇಜಾ ಮುನ್ನಡೆಸಲಿದ್ದಾರೆ ಎಂದಿದ್ದಾರೆ. ಧೋನಿ ಸಿಎಸ್​ಕೆ ಪರ ಇನ್ನು ಹೆಚ್ಚಿನ ವರ್ಷ ಆಡುವುದಿಲ್ಲ. ಹೀಗಾಗಿ ಈಗಲೇ ಸಿಎಸ್​ಕೆ ಜಡೇಜಾ ಅವರೊಂದಿಗೆ ತಂಡ ಕಟ್ಟಲು ಯೋಜನೆ ರೂಪಿಸಬೇಕು ಎಂದರು. ಏಕೆಂದರೆ ಜಡೇಜಾ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್‌ನೊಂದಿಗೆ ಫೀಲ್ಡಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಇದು ತಂಡದ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.

  ಧೋನಿ ಇನ್ನೂ 2-3 ವರ್ಷಗಳ ಕಾಲ ಆಡಲಿದ್ದಾರೆ ಎಂದು ನೀವು ಹೇಳಬಹುದು. ಇದಾಗ್ಯೂ ಅವರು ಹೆಚ್ಚಿನ ಸಮಯವಂತು ಆಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಯಾವ ಆಟಗಾರನಿಗೆ ತಂಡದ ಜವಾಬ್ದಾರಿ ನೀಡಬೇಕು ಎಂಬುದನ್ನು ಈಗಿನಿಂದ ಪರಿಗಣಿಸಬೇಕು. ನನ್ನ ಪ್ರಕಾರ, ರವೀಂದ್ರ ಜಡೇಜಾ ಅಂತಹ ಆಟಗಾರ. ಅವರ ನಾಯಕತ್ವದಲ್ಲಿ ಸಿಎಸ್‌ಕೆ ಹೊಸ ತಂಡವನ್ನು ರಚಿಸಬಹುದು. ಅವರು ಬೌಲಿಂಗ್​, ಬ್ಯಾಟ್‌ನೊಂದಿಗೆ ಫೀಲ್ಡಿಂಗ್‌ನಲ್ಲಿ ತಂಡಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ನಾಯಕತ್ವ ನೀಡುವುದರಿಂದ ಇದುವೇ ಪ್ಲಸ್ ಪಾಯಿಂಟ್ ಆಗಲಿದೆ ಎಂದು ವಾನ್ ತಿಳಿಸಿದ್ದಾರೆ.

  ಇನ್ನು ಜಡೇಜಾ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನಾಡಿದ ವಾನ್, ನನ್ನ ಪ್ರಕಾರ ಜಡೇಜಾ ಅವರು ನಾಲ್ಕನೇ ಅಥವಾ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು. ಇದರಿಂದ ಹೆಚ್ಚಿನ ಮೊತ್ತ ಕಲೆಹಾಕಲು ನೆರವಾಗಲಿದೆ ಎಂದರು. ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಿಎಸ್​ಕೆ ಗೆಲುವಿನಲ್ಲಿ ಜಡೇಜಾ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಪಂದ್ಯದಲ್ಲಿ ಅವರು ಜೋಸ್ ಬಟ್ಲರ್ ಮತ್ತು ಶಿವಂ ದುಬೆ ಅವರ ವಿಕೆಟ್​ಗಳೊಂದಿಗೆ ನಾಲ್ಕು ಪ್ರಮುಖ ಕ್ಯಾಚ್​ಗಳನ್ನು ಸಹ ಹಿಡಿದರು. 2012 ರಿಂದ ಜಡೇಜಾ ಸಿಎಸ್‌ಕೆ ತಂಡದ ಪ್ರಮುಖ ಭಾಗವಾಗಿದ್ದಾರೆ. ಹೀಗಾಗಿ ಧೋನಿಯ ಉತ್ತರಾಧಿಕಾರಿಯಾಗಿ ರವೀಂದ್ರ ಜಡೇಜಾ ಅವರೇ ಸೂಕ್ತ ಆಯ್ಕೆ ಎಂದು ಮೈಕಲ್ ವಾನ್ ತಿಳಿಸಿದರು.

  ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ, ಸುರೇಶ್ ರೈನಾ, ನಾರಾಯಣ್ ಜಗದೀಸನ್, ರುತುರಾಜ್ ಗೈಕ್ವಾಡ್, ಕೆ.ಎಂ.ಆಸಿಫ್, ಕರ್ನ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಎಂ.ಹರಿಶಂಕರ್ ರೆಡ್ಡಿ, ಕೆ.ಭಗತ್ ವರ್ಮಾ, ಸಿ ಹರಿ ನಿಶಾಂತ್
  Published by:zahir
  First published: