HOME » NEWS » Ipl » MI VS SRH LIVE SCORE IPL 2021 ROHITH SHARMA CAPTAIN MUMBAI INDIAN TEAM WON BY 13 RUN HG

MI vs SRH Live Score, IPL 2021: ಸೋಲುಂಡ ಡೇವಿಡ್​ ಪಡೆ; ಮುಂಬೈಗೆ 13 ರನ್​ಗಳ ಜಯ!

ಈ ವರ್ಷದ ಐಪಿಎಲ್ ಪ್ರಾರಂಭವಾಗಿನಿಂದ ಇವೆರಡು ತಂಡ ಎರಡು ಪಂದ್ಯವನ್ನು ಎದುರಿಸಿದೆ. ಅದರಲ್ಲಿ ರೋಹಿತ್​ ಶರ್ಮಾ ನಾಯಕತ್ವದ ಮುಂಬೈ ತಂಡ ಒಂದು ಪಂದ್ಯ ಜಯಿಸಿದರೆ ಇನ್ನೊಂದು ಪಂದ್ಯ ಸೋಲೊಪ್ಪಿಕೊಂಡಿತ್ತು. ಅಂತೆಯೇ ಡೇವಿಡ್​​ ವಾರ್ನರ್​ ನಾಯಕತ್ವದ ಹೈದರಾಬಾದ್​ ತಂಡ ಎದುರಿಸಿದ ಎರಡು ಪಂದ್ಯದಲ್ಲೂ ಸೋತಿದೆ. ಹಾಗಾಗಿ ಇಂದಿನ ಪಂದ್ಯ ಹೈದರಾಬಾದ್ ತಂಡಕ್ಕೆ ಬಹುಮುಖ್ಯವಾಗಿದೆ.

news18-kannada
Updated:April 17, 2021, 11:24 PM IST
MI vs SRH Live Score, IPL 2021: ಸೋಲುಂಡ ಡೇವಿಡ್​ ಪಡೆ; ಮುಂಬೈಗೆ 13 ರನ್​ಗಳ ಜಯ!
mi-vs-srh
  • Share this:
ಚೆನ್ನೈ ಚಿದಂಬರಂ ಮೈದಾನದಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ನ 9ನೇ ಪಂದ್ಯಾಟದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್​​ ತಂಡ 13 ರನ್​ಗಳ ಜಯ ಸಾಧಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದು ಕೊಂಡ ಮುಂಬೈ ಪಡೆ ಆರಂಭದಲ್ಲಿ ಹೆಚ್ಚಿನ ರನ್​ ಸಂಪಾದಿಸುವ ಗುರಿಯನ್ನಿಟ್ಟುಕೊಂಡು ನಾಯಕ ರೋಹಿತ್​ ಮತ್ತು ಕ್ವಿಂಟನ್ ಡಿ ಕಾಕ್​ ಅವರು ಕ್ರೀಸ್​ಗೆ ಇಳಿದರು. ಎದುರಾಳಿ ಎಸೆತಗಳನ್ನು ಸರಿಯಾಗಿ ಗಮನಿಸಿ ರನ್​ ಪೇರಿಸಲು ಮುಂದಾದರು.  ಮೊದಲ ಓವರ್​ ಎಸೆಯಲು ಬಂದ ಭುವನೇಶ್ವರ್​ ಅವರ ಮೊದಲ ಎಸೆತವನ್ನು ಗಮನಿಸಿ ಡಿ ಕಾಕ್​ ಬೌಂಡರಿ ಬಾರಿಸುವ ಮೂಲಕ ಖಾತೆ ತೆರೆದರು. ಖಲೀಲ್​ ಅಹ್ಮದ್​ ಎರಡನೇ ಓವರ್​ ಎಸೆತಕ್ಕೆ ರೋಹಿತ್​ 2 ರನ್​ ಬಾರಿಸುವ ಮೂಲಕ ತಮ್ಮ ಖಾತೆಯನ್ನು ಪ್ರಾರಂಭಿಸಿದರು.

ಮುಜೀಬ್​ ಅವರ ಮೂರನೇ ಓವರ್​ಗೆ ರೋಹಿತ್​ 14 ರನ್​, ಅಂತೆಯೇ ಭುವನೇಶ್ವರ ಅವರ 4ನೇ ಓವರ್​ಗೆ 22 ರನ್​ ಬಾರಿಸಿದರು. ನಂತರ ಶಂಕರ್​ ಅವರ 6ನೇ ಓವರ್​​ಗೆ ರೋಹಿತ್ (31)​ ಬ್ಯಾಟ್​ ಬೀಸಲು ಹೋಗಿ ಕ್ಯಾಚ್​ ನೀಡಿ ಔಟ್​ ಆದರು.

ರೋಹಿತ್​ ಬಳಿಕ ಕ್ರೀಸ್​ಗೆ ಸೂರ್ಯಕುಮಾರ್ (10)​ ಆಗಮಿಸಿದರು. ಆದರೆ ಹೆಚ್ಚು ಹೊತ್ತು ಕ್ರೀಸಲ್ಲಿ ನಿಲ್ಲಲು ಅವರಿಂದ ಸಾಧ್ಯವಾಗಲಿಲ್ಲ.  8ನೇ ಓವರ್​ನ 3ನೇ ಎಸೆತಕ್ಕೆ ಔಟ್​ ಆಗುವ ಮೂಲಕ ಹೊರನಡೆದರು.

ನಂತರ ಡಿ ಕಾಕ್​ ಜೊತೆಯಾಗಲು ಇಶಾನ್​ ಕಿಶಾನ್​ ಕ್ರಿಸ್​ಗೆ ಇಳಿದರು. ಈ ನಡುವೆ ಡಿ ಕಾಕ್ ಅವರು​ ಶಂಕರ್​ ಎಸೆದ ಚೆಂಡನ್ನು ಬೌಂಡರಿ ಅಟ್ಟಲು ಹೋಗಿ ಔಟ್​ ಆಗುವ ಪ್ರವೇಯ ಎದುರಾಯಿತು. ರಶೀದ್​ ಖಾನ್​ ಅವರು ಕ್ಯಾಚ್​ ಡ್ರಾಪ್​ ಮಾಡಿದ ಕಾರಣ ಡಿ ಕಾಕ್​ ಔಟ್​ ಆಗದೆ ಪಾರಾದರು. ಆದರೆ ಮುಜೀವ್​ ಅವರ 14ನೇ ಓವರ್​ಗೆ ಅದೇ ತಪ್ಪು ಮತ್ತೊಮ್ಮೆ ಮಾಡಿ ಸುಜಿತ್​ಗೆ ಕ್ಯಾಚ್​ ನೀಡಿ ಡಿಕಾಕ್​ (40) ಔಟ್​ ಆದರು.

ಡಿಕಾಕ್​ ಬಳಿಕ ಕೀರನ್​ ಪೊಲಾರ್ಡ್​ ಅವರು ಇಶಾನ್​ ಕಿಶಾನ್​ಗೆ ಜೊತೆಯಾಗಿದರು. ಮಜೀಬ್​ ಎಸೆದ 16 ಓವರ್​ನ ಮೊದಲ ಎಸೆತಕ್ಕೆ ಪೊಲಾರ್ಡ್​ ಸಿಕ್ಸ್​ ಬಾರಿಸಿದರು.  ಅದೇ ಓವರ್​ನ 5ನೇ ಎಸೆತಕ್ಕೆ ಇಶಾನ್​ ಕಿಶಾನ್​ (12)  ಕೀಪರ್​ ಕ್ಯಾಚ್​ ನೀಡುವ ಮೂಲಕ ವಿಕೆಟ್​ ಒಪ್ಪಿಸಿದರು.

ಆ ಬಳಿಕ ಬಂದ  ಹಾರ್ದಿಕ್ ಪಾಂಡ್ಯ (7) ಮೇಲೆ ಭಾರೀ ನಿರೀಕ್ಷೆ ಇತ್ತಾದರು. ಖಲೀಲ್​ ಅವರ ಎಸೆತಕ್ಕೆ ಬ್ಯಾಟ್​ ಬೀಸಲು ಹೋಗಿ ಕ್ಯಾಚ್​ ನೀಡಿ ಔಟ್​ ಆದರು. ಹಾರ್ದಿಕ್​ ನಂತರ ಕ್ರುನಾಲ್​ ಪಾಂಡ್ಯ ಕ್ರೀಸ್​ಗೆ ಬಂದರು. ಇವರಿಬ್ಬರ ಜೊತೆಯಾಟದಲ್ಲಿ ಮುಂಬೈ ತಂಡ ಎದುರಾಳಿ ತಂಡಕ್ಕೆ 150 ರನ್​ ಟಾರ್ಗೆಟ್​ ನೀಡಿದೆ. ಪಂದ್ಯದ ನಡುವಲ್ಲಿ ಪೊಲಾರ್ಡ್ 200 ಸಿಕ್ಸ್​ ಬಾರಿಸುವ ಮೂಲಕ​ ಹೊಸ ದಾಖಲೆಯೊಂದನ್ನು ಬರೆದರು.ಬೌಲರ್​ಗಳಾದ ವಿಜಯ್​ ಶಂಕರ್​ ಮತ್ತು ಮುಜೀದ್​ 2 ವಿಕೆಟ್​ ಕಿತ್ತರೆ, ಭುವನೇಶ್ವರ್​ ಕುಮಾರ್​ 1 ವಿಕೆಟ್​ ಕಬಳಿಸಿದರು.

ಮುಂಬೈ ಇಂಡಿಯನ್ಸ್ ನೀಡಿದ ಟಾರ್ಗೆಟ್  ಸಮೀಪಿಸಲು ಡೇವಿಡ್ ವಾರ್ನರ್​ ಮತ್ತು​ ಜಾನಿ ಬೈರ್‌ಸ್ಟೋ ಕ್ರೀಸ್​ಗೆ ಇಳಿದರು.  67 ರನ್​ಗಳವರೆಗೆ ಉತ್ತಮ ಜೊತೆಯಾಟ ಆಡಿದರು.  ಆದರೆ  ಕ್ರುನಾಲ್​​ ಪಾಂಡ್ಯ 7ನೇ ಓವರ್​ ಎಸೆದ 3 ಎಸೆತಕ್ಕೆ ಬೈರ್​ಸ್ಟೋ ಕಾಲು ವಿಕೆಟ್​ಗೆ ತಾಕಿ ಔಟ್​  ಆದರು.

ನಂತರ ಬೈರ್​ಸ್ಟೋ ಜಾಗಕ್ಕೆ ಮನೀಶ್​ ಪಾಂಡೆ ಬಂದರು. ಆದರೆ ರಾಹುಲ್ ಚಾಹರ್(2)​​ ಅವರ 8ನೇ ಓವರ್​ನ ಕೊನೆಯ ಎಸೆತಕ್ಕೆ ಪೊಲಾರ್ಡ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ವಿರಾಟ್​ ಸಿಂಗ್​ ಕ್ರೀಸ್​ಗೆ ಬಂದರು.

ನಾಯಕ ಡೇವಿಡ್  ವಾರ್ನರ್​ 34 ಎಸೆತದಲ್ಲಿ 36 ರನ್​ ಬಾರಿಸುವ ಮೂಲಕ​ ರನ್​ ಪೇರಿಸುವಲ್ಲಿ ಶ್ರಮ ವಹಿಸಿದರಾದರು ಪೊಲಾರ್ಡ್​ ಎಸೆದ  11 ಓವರ್​ನ 3ನೇ ಬಾಲ್​ಗೆ ರನ್​ ಔಟ್​ ಆಗುವ ಮೂಲಕ ಪೆವಿಲಿಯನತ್ತ ಸಾಗಿದರು.

ಸನ್​ರೈಸರ್ಸ್​ ತಂಡ ಜಯಗಳಿಸಲು 43 ಬಾಲ್​ಗೆ 53 ರನ್​ಗಳ ಅವಶ್ಯಕತೆಯಿತ್ತು. ಡೇವಿಟ್​ ಔಟ್​ ಆದ ಬಳಿಕ  ವಿಜಯ್​ ಶಂಕರ್ ಕ್ರೀಸ್​​ಗೆ​ ಆಗಮಿಸಿದರು ವಿರಾಟ್​ಗೆ ಜೊತೆಯಾದರು. ಆದರೆ ಈ ವೇಳೆ ಚಾಹರ್​ನ ಎಸೆದ 14ನೇ ಓವರ್​ನ ಮೊದಲ ಎಸೆತಕ್ಕೆ ವಿರಾಟ್ (11)​ ಬ್ಯಾಟ್​ ಬೀಸಲು ಹೋಗಿ ಸೂರ್ಯ ಕುಮಾರ್​ಗೆ ಕ್ಯಾಚ್ ನೀಡಿ ಔಟ್​ ಆದರು. ಆ ನಂತರ ಬಂದ ಅಭಿಷೇಕ್​ ಶರ್ಮಾ(2) ಕೂಡ ಕ್ಯಾಚ್​ ನೀಡಿ ಹೊರನಡೆದರು.

ಆ ಬಳಿಕ ಅಬ್ದುಲ್​ ಸಮದ್​ ಆಗಮಿಸಿ ಶಂಕರ್​ಗೆ ಜೊತೆಯಾದರು. 16ನೇ ಓವರ್​ಗೆ ಇವರಿಬ್ಬರು ತಂಡದ ಮೊತ್ತವನ್ನು 120 ತಂದು ನಿಲ್ಲಿಸಿದರು. 17ನೇ ಓವರ್​ ಬೂಮ್ರಾಗೆ ನೀಡುವ ಮೂಲಕ ಸನ್​ರೈಸರ್ಸ್ ತಂಡವನ್ನು ಹಿಡಿತಕ್ಕೆ ತರುವ ಪ್ರಯತ್ನ ನಡೆಯಿತು. 18ನೇ ಓವರ್​ ಟ್ರೆಂಟ್​ ಬೋಲ್ಟ್​ ಎಸೆದರು. ಈ ವೇಳೆ ಬೋಲ್ಟ್​ ಎಸೆದ 4ನೇ ಎಸೆತಕ್ಕೆ ಸಮದ್(7) ರನ್​ ಔಟ್​ ಆದರೆ ಅದೇ 5ನೇ ಎಸೆತಕ್ಕೆ ರಶೀದ್​ ಖಾನ್​ ಎಲ್​ಬಿಡಬ್ಲ್ಯು ಆದರು. ಈ ವೇಳೆಗೆ ಸನ್​ರೈಸರ್ಸ್​ 7 ವಿಕೆಟ್​ ಕಳೆದುಕೊಂಡಿತ್ತು.

ನಂತರ ಶಂಕರ್​ಗೆ ಜೊತೆಯಾಗಿ ಭುವನೇಶ್ವರ್ ಕುಮಾರ್​​ ಕ್ರೀಸ್​ಗೆ ಆಗಮಿಸಿದರು. ಬೂಮ್ರಾ ಎಸೆದ 18 ಓವರ್​ನ 5ನೇ ಎಸೆತಕ್ಕೆ ಬ್ಯಾಟ್​ ಬೀಸಲು ಹೋದ ಶಂಕರ್ (28) ಅವರು ​ ಸೂರ್ಯಕುಮಾರ್​ಗೆ ಕ್ಯಾಚ್​ ನೀಡಿದರು.  19ನೇ ಓವರ್​ನ ಮೊದಲ ಎಸೆತಕ್ಕೆ ಭುವನೇಶ್ವರ್​ ಕುಮಾರ್​ ಕೂಡ ಬೋಲ್ಟ್​ಗೆ ವಿಕೆಟ್​ ಒಪ್ಪಿಸಿದರು. ಅದೇ ಓವರ್​ನ 4ನೇ ಎಸೆತಕ್ಕೆ  ಖಲೀಲ್​ ಔಟ್​ ಆಗುವ ಮೂಲಕ ಮುಂಬೈ ತಂಡಕ್ಕೆ 13 ರನ್​ಗಳ ಸುಲಭ ಜಯ ಒದಗುವಂತೆ ಮಾಡಿದರು

ಬೋಲ್ಟ್ ಮತ್ತು ರಾಹುಲ್​ ಚಾಹರ್​​ ತಲಾ ಮೂರು ವಿಕೆಟ್​ ಪಡೆದರೆ. ಬೂಮ್ರಾ, ಕ್ರುನಾಲ್​ 1 ವಿಕೆಟ್​ ಪಡೆದರು.

ಪೊಲಾರ್ಡ್​ ದಾಖಲೆ!

ಕೀರನ್​ ಪೊಲಾರ್ಡ್​ ಈವರೆಗೆ 198 ಸಿಕ್ಸ್​ ಬಾರಿಸಿದ್ದರು, ಆದರೆ ಇಂದಿನ ಪಂದ್ಯದಲ್ಲಿ 2 ಸಿಕ್ಸ್​ ಬಾರಿಸುವ ಮೂಲಕ 200 ಸಿಕ್ಸ್​ ಬಾರಿಸಿದ ದಾಖಲೆ ಬರೆದಿದ್ದಾರೆ.
Published by: Harshith AS
First published: April 17, 2021, 8:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories