MI vs RCB in IPL 2021: ಆರಂಭಿಕ ಪಂದ್ಯದ ನತದೃಷ್ಟ ನಾಯಕರ ನಡುವೆ ಇಂದು ಕದನ..!

ಈ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದ್ದ ಆರ್​ಸಿಬಿ ಎದುರಾಳಿ ಸಿಎಸ್‌ಕೆಗೆ ಕೇವಲ 71 ರನ್‌ಗಳ ಗುರಿ ನೀಡಿತ್ತು. ಈ ಪಂದ್ಯವನ್ನು ಸಿಎಸ್​ಕೆ 7 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು.

Rcb vs Mi

Rcb vs Mi

  • Share this:
    IPL 2021ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗುತ್ತಿದೆ. ಆರ್​ಸಿಬಿ ತಂಡವನ್ನು ಟೀಮ್ ಇಂಡಿಯಾ ನಾಯಕ ಮುನ್ನಡೆಸಿದರೆ, ಮುಂಬೈ ಟೀಮ್​ಗೆ ಭಾರತ ತಂಡದ ಉಪನಾಯಕ ಸಾರಥಿ ಎಂಬುದು ವಿಶೇಷ. ಈ ಇಬ್ಬರಲ್ಲಿ ಯಾದು ಅದೃಷ್ಟಶಾಲಿ ನಾಯಕ ಎಂದು ಗಮನಿಸಿದರೆ ಅಚ್ಚರಿಯ ಅಂಕಿ ಅಂಶವೊಂದು ಕಾಣ ಸಿಗುತ್ತೆ.

    ಹೌದು, ಇಂಡಿಯನ್ ಪ್ರೀಮಿಯರ್​ ಲೀಗ್​ನ ಕಳೆದ 13 ಸೀಸನ್​ಗಳಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು 4 ಬಾರಿ ಉದ್ಘಾಟನಾ ಪಂದ್ಯವನ್ನಾಡಿದೆ. ಅದರಲ್ಲಿ ಮೂರು ಬಾರಿ ಆರ್​​ಸಿಬಿ ಹೀನಾಯ ಸೋಲನುಭವಿಸಿದೆ. ಒಂದು ಬಾರಿ ಕೇವಲ 2 ರನ್​ಗಳಿಂದ ಜಯ ಸಾಧಿಸಿದೆ.

    2008ರ ಐಪಿಎಲ್ ಟೂರ್ನಿ ಉದ್ಘಾಟನಾ ಪಂದ್ಯದಲ್ಲಿಯೇ ಆರ್‌ಸಿಬಿ ಹೀನಾಯ ಸೋಲನುಭವಿಸಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಸ್ಪೋಟಕ ಶತಕ ಸಿಡಿಸಿದ್ದರು. ಈ ಶತಕದ ನೆರವಿನಿಂದ ಕೆಕೆಆರ್ ತಂಡ 3 ವಿಕೆಟ್ ಕಳೆದುಕೊಂಡು 222 ರನ್‌ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಕೇವಲ 82 ರನ್‌ಗಳಿಗೆ ಆಲೌಟ್ ಆಗಿದ್ದು ಇತಿಹಾಸ. ಇನ್ನು 2013 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 155 ರನ್ ಬಾರಿಸಿ ಆರ್​ಸಿಬಿ 2 ರನ್​ಗಳಿಂದ ರೋಚಕ ಜಯ ಸಾಧಿಸಿತ್ತು.

    ಇದಾದ ಬಳಿಕ 2017 ರಲ್ಲಿ ಆರ್​ಸಿಬಿ ಮತ್ತೆ ಉದ್ಘಾಟನಾ ಪಂದ್ಯವಾಡಿದ್ದು ಸನ್‌ರೈರರ್ಸ್ ಹೈದರಾಬಾದ್ ವಿರುದ್ಧ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ ಆರ್​ ಹೆಚ್​ ತಂಡ 207 ರನ್‌ ಕಲೆಹಾಕಿತ್ತು. ಇದನ್ನು ಬೆನ್ನತ್ತಿದ ಆರ್‌ಸಿಬಿ 172 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು.

    2019 ರಲ್ಲಿ ಆರ್​ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಉದ್ಘಾಟನಾ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದ್ದ ಆರ್​ಸಿಬಿ ಎದುರಾಳಿ ಸಿಎಸ್‌ಕೆಗೆ ಕೇವಲ 71 ರನ್‌ಗಳ ಗುರಿ ನೀಡಿತ್ತು. ಈ ಪಂದ್ಯವನ್ನು ಸಿಎಸ್​ಕೆ 7 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು. ಇದೀಗ ಕೊಹ್ಲಿ ನೇತೃತ್ವದಲ್ಲಿ ಆರ್​ಸಿಬಿ 4ನೇ ಬಾರಿ ಉದ್ಘಾಟನಾ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಬಾರಿ ಮುಂಬೈಗೆ ಸೋಲುಣಿಸುವ ಮೂಲಕ ಮೊದಲ ಪಂದ್ಯದ ಸೋಲಿನ ಸರಪಳಿಯನ್ನು ಕಳಚುವ ವಿಶ್ವಾಸದಲ್ಲಿದೆ.

    ಆದರೆ ಅತ್ತ ಮುಂಬೈ ಇಂಡಿಯನ್ಸ್​ ತಂಡದಕ್ಕೂ ಇದೇ ಕಥೆ ಎಂಬುದು ವಿಶೇಷ. ಹೌದು, ಐಪಿಎಲ್​ನಲ್ಲಿ 5 ಬಾರಿ ಚಾಂಪಿಯನ್ ಆಗಿದ್ದರೂ ಮುಂಬೈ ಇಂಡಿಯನ್ಸ್​ ತಂಡವು 2013 ರಿಂದ ಆರಂಭಿಕ ಪಂದ್ಯವನ್ನು ಗೆದ್ದಿಲ್ಲ. 2013 ರಲ್ಲಿ ಆರ್​ಸಿಬಿ ವಿರುದ್ಧ ಸೋಲನುಭವಿಸಿದ ಬಳಿಕ ಮುಂಬೈ ಇಂಡಿಯನ್ಸ್​ ಉದ್ಘಾಟನಾ ಪಂದ್ಯ ಗೆದ್ದಿಲ್ಲ. ಅದರಲ್ಲೂ ರೋಹಿತ್ ಶರ್ಮಾ ನಾಯಕರಾದ ಬಳಿಕ ಮುಂಬೈ ಇಂಡಿಯನ್ಸ್​ ಓಪನಿಂಗ್ ಮ್ಯಾಚ್​ನಲ್ಲಿ ಜಯ ಸಾಧಿಸಿಲ್ಲ ಎಂಬುದು ವಿಶೇಷ.

    ಹೀಗಾಗಿ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಉದ್ಘಾಟನಾ ಪಂದ್ಯದಲ್ಲಿ ಜಯಗಳಿಸುವ ಮೂಲಕ ಸೋಲಿನ ಸರಪಳಿಯಿಂದ ಹೊರ ಬರುವ ವಿಶ್ವಾಸದಲ್ಲಿದ್ದಾರೆ. ಇನ್ನು 7 ಸೀಸನ್​ಗಳ ಬಳಿಕ ಉಭಯ ತಂಡಗಳು ಓಪನಿಂಗ್ ಮ್ಯಾಚ್​ನಲ್ಲಿ ಮುಖಾಮುಖಿ ಆಗುತ್ತಿದ್ದು, ಅದೃಷ್ಟ ರೋಹಿತ್ ಶರ್ಮಾ ಅವರ ಕೈ ಹಿಡಿಯಲಿದೆಯಾ, ಇಲ್ಲ ವಿರಾಟ್ ಕೊಹ್ಲಿ ಪರ ಇರಲಿದೆಯಾ ಕಾದು ನೋಡಬೇಕಿದೆ.
    Published by:zahir
    First published: