news18-kannada Updated:November 6, 2020, 4:24 PM IST
MI vs DC
13ನೇ ಆವೃತ್ತಿಯ ಐಪಿಎಲ್ನಲ್ಲಿ ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 57 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಆರನೇ ಬಾರಿ ಫೈನಲ್ಗೇರಿದ ಸಾಧನೆ ಮಾಡಿತು. ಮುಂಬೈ ಬೌಲರ್ಗಳ ಮಾರಕ ದಾಳಿಗೆ ನಲುಗಿದ ಡೆಲ್ಲಿ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಆದರೆ, ಈ ಪಂದ್ಯದಲ್ಲಿ ರಾಹುಲ್ ಚಹಾರ್ ಸ್ಪಿನ್ ಜಾದು ಕೆಲಸ ಮಾಡಲಿಲ್ಲ.
ಮುಂಬೈ ತಂಡದಲ್ಲಿ ಸ್ಪಿನ್ ವಿಭಾಗದ ಕೀ ಪ್ಲೇಯರ್ ಆಗಿರುವ ರಾಹುಲ್ ಚಹಾರ್ ಡೆಲ್ಲಿ ವಿರುದ್ಧದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತುಂಬಾನೆ ದುಬಾರಿಯಾದರು. ಪ್ರತಿ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಈ ಬಾರಿ ಒಟ್ಟು 15 ವಿಕೆಟ್ ಕಿತ್ತಿರುವ ಚಾಹರ್ಗೆ ಈ ಪಂದ್ಯ ಮಾತ್ರ ಕೆಟ್ಟದಾಗಿತ್ತು.
RCB Predicted XI vs SRH: ಇಂದಿನ ಪಂದ್ಯಕ್ಕೆ ಆರ್ಸಿಬಿ ಬ್ಯಾಟಿಂಗ್ ಆರ್ಡರ್ನಲ್ಲಿ ಮಹತ್ವದ ಬದಲಾವಣೆ?
ಕೇವಲ ಎರಡು ಓವರ್ ಬೌಲಿಂಗ್ ಮಾಡಿದ ಚಹಾರ್, ಬರೋಬ್ಬರಿ 35 ರನ್ ನೀಡಿದರು. ಇದು ಈ ಬಾರಿಯ ಐಪಿಎಲ್ನಲ್ಲಿ ಇವರು ನೀಡಿದ ಗರಿಷ್ಠ ರನ್ ಆಗಿದೆ. ಈ ಕ್ಷಣ ಪಂದ್ಯ ಒಮ್ಮೆ ಡೆಲ್ಲಿ ಕಡೆ ವಾಲಿತ್ತು. ನಂತರದಲ್ಲಿ ಬುಮ್ರಾ ತಮ್ಮ ಮ್ಯಾಜಿಕ್ ಸ್ಪೆಲ್ ಮೂಲಕ ಗೆಲುವನ್ನು ಮುಂಬೈಗೆ ತಂದಿಟ್ಟರು.
ಚಹಾರ್ ಬಿಟ್ಟು ಇತರೆ ಬೌಲರ್ಗಳು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ ದುಬಾರಿ ಬೌಲರ್ ಎನಿಸಿಕೊಂಡ ಚಹಾರ್ ಅನ್ನು ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್ಗೆ ತೆರಳುವ ವೇಳೆ ರೋಹಿತ್ ಶರ್ಮಾ ವಿಶೇಷವಾಗಿ ನಡೆಸಿಕೊಂಡರು. ತಂಡದ ಆಟಗಾರರನ್ನು ನೀನೆ ಡ್ರೆಸ್ಸಿಂಗ್ ರೂಮ್ಗೆ ಕರೆದುಕೊಂಡು ಹೋಗು ಎಂದು ರೋಹಿತ್ ಅವರು ತಮಾಷೆಯಾಗಿ ಚಹಾರ್ಗೆ ಮುಂದೆ ನಡೆ ಎಂದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಪರ ಇಶಾನ್ ಕಿಶನ್ ಅಜೇಯ 55, ಸೂರ್ಯಕುಮಾರ್ ಯಾದವ್ 51, ಡಿಕಾಕ್ 40 ಹಾಗೂ ಹಾರ್ದಿಕ್ ಪಾಂಡ್ಯ 14 ಎಸೆತಗಳಲ್ಲಿ ಅಜೇಯ 37 ರನ್ ಚಚ್ಚಿ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 200ಕ್ಕೆ ತಂದಿಟ್ಟರು.
Sachin Tendulkar: ಪ್ಲೇ ಆಫ್ ಪಂದ್ಯಗಳನ್ನು ಗೆಲ್ಲಲು ಸಚಿನ್ ನೀಡಿದ್ದಾರೆ ಸಿಂಪಲ್ ಸಲಹೆ
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಸೊನ್ನೆ ರನ್ಗೆ 3 ವಿಕೆಟ್ ಕಳೆದುಕೊಂಡು ತನ್ನ ಸೋಲನ್ನು ಖಚಿತ ಪಡಿಸಿಕೊಂಡಿತು. ಬುಮ್ರಾ ಬೆಂಕಿಯ ಚೆಂಡಿಗೆ ತತ್ತರಿಸಿದ ಡೆಲ್ಲಿ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಮಾರ್ಕಸ್ ಸ್ಟಾಯಿನಿಸ್ 65 ರನ್ ಗಳಿಸಿದರು. ಬುಮ್ರಾ 4 ಓವರ್ಗೆ ಕೇವಲ 14 ರನ್ ನೀಡಿದ 4 ವಿಕೆಟ್ ಕಿತ್ತ ಸಾಧನೆ ಮಾಡಿದರು.
Published by:
Vinay Bhat
First published:
November 6, 2020, 4:24 PM IST