ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ 14ನೇ ಅವೃತ್ತಿಯ 27 ಪಂದ್ಯದಲ್ಲಿ ಚೆನ್ನೈ ವಿರುದ್ಧ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್ಗಳ ಜಯ ಸಾಧಿಸಿದೆ.
ಪ್ರಾರಂಭದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಬೌಲಿಂಗ್ ಆದ್ದುಕೊಂಡಿತು. ಇತ್ತ ಧೋನಿ ಪಡೆ 218 ರನ್ಗಳನ್ನು ಸಿಡಿಸುವ ಮೂಲಕ ಮುಂಬೈಗೆ ಸವಾಲೆಸೆಯಿತು. ಆದರೆ ಬೃಹತ್ ಟಾರ್ಗೆಟ್ ಬೆನ್ನುಹತ್ತಿರ ಮುಂಬೈ ತಂಡ ಜಯವನ್ನು ತನ್ನದಾಗಿಸಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಟಾರ್ಗೆಟ್ ಸಮೀಪಿಸಲು ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಟಾಕ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ರೋಹಿತ್ 24 ಎಸೆತದಲ್ಲಿ 35 ರನ್ ಬಾರಿಸುವ ಮೂಲಕ ಔಟ್ ಆದರು ಕ್ವಿಂಟನ್ ಡಿಕಾಕ್ ಕೂಡ 28 ಎಸೆತದಲ್ಲಿ 38 ರನ್ ಬಾರಿಸುವ ಮೂಲಕ ಮೊಯಿನ್ಗೆ ವಿಕೆಟ್ ಒಪ್ಪಿಸಿದರು.
ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದ ಸೂರ್ಯ ಕುಮಾರ್ ನಿರೀಕ್ಷೆಯನ್ನು ದಾಟಲಿಲ್ಲ. ಕಾರಣ ರವೀಂದ್ರ ಜಡೇಜಾ ಎಸೆತದ ವೇಳೆ ಧೋನಿಗೆ ಕ್ಯಾಚ್ ನೀಡಿ ಹೊರನಡೆದರು.
ಪೊಲಾರ್ಡ್ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ 17 ಎಸೆತದಲ್ಲಿ 53 ಬಾರಿಸಿ ಅರ್ಧಶತಕ ಪೂರೈಸಿದರು. ಪೊಲಾರ್ಡ್ಗೆ ಕ್ರುನಾಲ್ ಪಾಂಡ್ಯ ಸಾಥ್ ನೀಡಿದರು. ಆದರು ಇಬರಿಬ್ಬರ ಪ್ರಯತ್ನವಿತ್ತಾದರು ಗೆಲುವಿನ ಲಯಕ್ಕೆ ತೆರಳಲು 30 ಎಸೆತದಲ್ಲಿ 66 ರನ್ ಬಾರಿಸಬೇಕಾದ ಅವಶ್ಯಕತೆಯಿತ್ತು.
ಈ ನಡುವೆ ಸ್ಯಾಮ್ ಕುರ್ರಾನ್ ಎಸೆತಕ್ಕೆ ಎಲ್ಬಿಡಬ್ಲ್ಯು ಆಗುವ ಮೂಲಕ ಕ್ರುನಾಲ್ ಪಾಂಡ್ಯ(32) ವಿಕೆಟ್ ಒಪ್ಪಿಸಿದರು. ನಂತರ ಕ್ರುನಾಲ್ ಜಾಗಕ್ಕೆ ಹಾರ್ದಿಕ್ ಬಂದರು. ಅಲ್ವಾವಧಿಯವರೆಗೆ ಪೊಲಾರ್ಡ್ಗೆ ಹಾರ್ದಿಕ್ ಜೊತೆಯಾದರು. ಆದರೆ 7 ಎಸೆತದಲ್ಲಿ 17 ರನ್ ಬಾರಿಸುವ ಮೂಲಕ ಸ್ಯಾಮ್ ಕುರ್ರಾನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಜೇಮ್ಸ್ ನಿಶಾಮ್ ಶೂನ್ಯ ಸುತ್ತಿ ಹೊರನಡೆದರು. ಒಂದೆಡೆ ರನ್ ಪೇರಿಸುವ ಅವಶ್ಯಕತೆ ಮತ್ತೊಂದೆಡೆ ತಂಡ ವಿಕೆಟ್ ಪತನವಾದರು ಪೊಲಾರ್ಡ್ ಮಾತ್ರ ತನ್ನ ಹೋರಾಟವನ್ನು ಬಿಟ್ಟುಕೊಡಲಿಲ್ಲ. ಕೊನೆಗೂ ತಂಡವನ್ನು ಜಯದ ದಡಕ್ಕೆ ದಾಟಿಸಿದರು.
ಇನ್ನು ಚೆನ್ನೈ ತಂಡದಿಂದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರುತು ರಾಜ್ ಗಾಯಕ್ವಾಡ್ ಅವರು ಬೋಲ್ಟ್ ಎಸೆತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರೆ ಫಾಪ್ ಡುಪ್ಪೆಸಿಸ್ ಹಾಗೂ ಮೊಯಿನ್ ಆಲಿ ಜೊತೆಯಾಟ ಚೆನ್ನೈ ತಂಡಕ್ಕೆ ಹೆಚ್ಚಿನ ರನ್ ಸಂಪಾದಿಸುವಲ್ಲಿ ಸಹಕಾರಿಯಾಯಿತು. ಡುಪ್ಲೆಸಿಸ್ 28 ಎಸೆತದಲ್ಲಿ 4 ಬೌಂಡರಿ 4 ಸಿಕ್ಸ್ ಬಾರಿಸುವ ಮೂಲಕ ಅರ್ಧ ಶತಕ ಸಿಡಿಸಿದರೆ. ಮೊಯಿನ್ ಆಲಿ 36 ಎಸೆತದಲ್ಲಿ 5 ಬೌಂಡರಿ 5 ಸಿಕ್ಸ್ ಬಾರಿಸುವ ಮೂಲಕ 58 ರನ್ ಬಾರಿಸಿದರು.
ಸುರೇಶ್ ರೈನಾ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದರು. 4 ಎಸೆತದಲ್ಲಿ 2 ರನ್ ಬಾರಿಸಿ ಔಟ್ ಆದರು. ನಂತರ ಕ್ರೀಸ್ನಲ್ಲಿ ನಿಂತ ರಾಯುಡು ಆಟ ಕಣ್ಣರಳೀಸುವಂತೆ ಮಾಡಿದ್ದಲ್ಲದೆ. ಎದುರಾಳಿಯ ಎಸೆತಗಳನ್ನು ಒಂದೊಂದರಂತೆ ಚಚ್ಚುತ್ತಾ ತಂಡದ ಮೊತ್ತವನ್ನು ಮತ್ತಷ್ಟು ಏರಿಸುವಲ್ಲಿ ಸಹಕರಿಸಿದರು. ರಾಯುಡು 27 ಎಸೆತದಲ್ಲಿ 7 ಸಿಕ್ಸ್ 4 ಬೌಂಡರಿ ಬಾರಿಸುವ ಮೂಲಕ 72 ರನ್ ಬಾರಿಸಿ ಹೈಲೈಟ್ಸ್ ಆದರು. ಅದರ ಜೊತೆಗೆ ರವೀಂದ್ರ ಜಡೇಜಾ 22 ರನ್ ಬಾರಿಸಿದರು. ಒಟ್ಟಿನಲ್ಲಿ ಚೆನ್ನೈ 20 ಓವರ್ನಲ್ಲಿ 218 ಬಾರಿಸುವ ಮೂಲಕ ಮುಂಬೈಗೆ ಟಾರ್ಗೆಟ್ ನೀಡಿತು.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ